ಸುಮಲತಾ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ
ಮೈಸೂರು

ಸುಮಲತಾ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ

March 28, 2019

ಮಂಡ್ಯ: ಸುಮಲತಾ ಅವರಲ್ಲಿ ಅಂಬರೀಷ್ ಅವರನ್ನು ಕಳೆದುಕೊಂಡಿ ರುವ ನೋವಿನ ಛಾಯೆಯಾಗಲೀ, ಮಂಡ್ಯ ರೈತರ ನೋವಿನ ಛಾಯೆಯಾಗಲೀ ಕಾಣಿಸುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆ ಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ತಮ್ಮ ಪುತ್ರ ನಿಖಿಲ್ ಅವರನ್ನು ಬೆಂಬಲಿಸು ವಂತೆ ಮನವಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ ಜಿ.ಮಾದೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರ ಜೊತೆ ಮಾತ ನಾಡುತ್ತಾ, ನಾನು ಸುಮಲತಾ ಅವರ ನಿನ್ನೆಯ ಭಾಷಣವನ್ನು ನೋಡಿದ್ದೇನೆ. ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನ ಛಾಯೆ ಅವರಲ್ಲಿ ಕಾಣಿಸುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆದಿದ್ದನ್ನು ನೋಡಿದ್ದೇನೆ. `ಏನ್ ಕೊಡ್ತಾರೆ… ನಿಮಗೆ ಏನ್ ಕೊಡ್ತಾರೆ…’ ಎಂದು ಆ್ಯಕ್ಷನ್ ಮಾಡ್ತಾರೆ. ಹಣ ತಗೊಂಡ್ ಮಜಾ ಮಾಡಿ. ನನಗೇ ಓಟ್ ಹಾಕಿ ಎಂದು ಹೇಳುತ್ತಾರೆ. ಅವರದು ತಾಯಿ ಹೃದಯವೇ? ಎಂದು ಪ್ರಶ್ನಿಸಿದರು. ಇನ್ನೊಬ್ಬರ ಹಣ ಪಡೆದು ಮಜಾ ಮಾಡುವವರು ಇವರೇ ಹೊರತು ಮಂಡ್ಯ ಜನ ಅವರಂತಹವರಲ್ಲ. ಅವರು ಕಷ್ಟಪಟ್ಟು ದುಡಿದು ಹಣ ಮಾಡುವವರು. ಇವರ ಬಣ್ಣದ ಆಟ ಬಹಳ ದಿನ ನಡೆಯುವುದಿಲ್ಲ ಎಂದು ಹರಿಹಾಯ್ದರು. ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡರು.

ನಾನು ಅವರ ಕುಟುಂಬ ದವರ ಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ನೆರವು ನೀಡಿದೆ. ಆ ಕುಟುಂಬಗಳು ಬದುಕಲು ಹಣ ಕೊಟ್ಟಿದ್ದೇನೇ ಹೊರತು ಮಜಾ ಮಾಡಲು ಹಣ ಕೊಟ್ಟಿಲ್ಲ ಎಂದರು. ನಯಾ ಪೈಸೆ ಖರ್ಚು ಮಾಡದೇ ಇವರ ಹಿಂದೆ ಜನ ಬರ್ತಿದ್ದೀರಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಇಂದು ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಆ ಕಾರ್ಯಕ್ರಮಕ್ಕೆ ಮೈಸೂರಿನ ಯಾವ ಹೋಟೆಲ್‍ನಲ್ಲಿ ಕುಳಿತು ಹಣ ಹಂಚಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರೂ ದುಡ್ಡು ಹಂಚುತ್ತಿದ್ದಾರೆ. ಆ ಹಣ ಅವರು ಬೆವರು ಸುರಿಸಿ ಸಂಪಾದಿಸಿದ್ದಾರಾ? ನಾನು ಹಳ್ಳಿಗಳ ಕಡೆ ಹೋಗ್ತೀನಿ. ನಿಮ್ಮ ಜೊತೆ ದುಡಿಮೆ ಮಾಡುವವರು ಬೇಕಾ? ಅಥವಾ ಮಜಾ ಮಾಡುವವರು ಬೇಕಾ? ಎಂದು ಜಿಲ್ಲೆಯ ಜನರ ಬಳಿ ಕೇಳುತ್ತೇನೆ ಎಂದರು.

ಸುಮಲತಾ ಅವರು ವಿಶೇಷ ಭದ್ರತೆ ಕೇಳಿದ್ದಾರೆ. ಅವರು ಸೆಂಟ್ರಲ್ ಟೀಂ ಅಥವಾ ಬಿಎಸ್‍ಎಫ್ ಇಲ್ಲದಿದ್ದರೆ ಸೈನ್ಯವನ್ನೇ ಕರೆಸಿಕೊಳ್ಳಲಿ. ಅಗತ್ಯ ಬಿದ್ದರೆ ನಾನೇ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ವ್ಯಂಗ್ಯವಾಡಿದರು. ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟರನ್ನು ನಾನು ಕಳ್ಳೆತ್ತು ಎಂದು ಹೇಳೇ ಇಲ್ಲ. ಅವೆಲ್ಲಾ ಮಾಧ್ಯಮಗಳ ಸೃಷ್ಟಿ. ಜೋಡೆತ್ತು ಎಂದು ಅವರುಗಳೇ ಹೇಳಿಕೊಂಡರು. ಆಗ ನಾನು ಹೇಳಿದ್ದು, ಮತ ಕೇಳಲು ಹಲವಾರು ಎತ್ತುಗಳು ಬರ್ತವೆ. ಆ ಜೋಡೆತ್ತು ರಾತ್ರಿ ವೇಳೆ ನೀವು ಬೆಳೆದ ಬೆಳೆಯನ್ನು ತಿನ್ನಲು ಬರುತ್ತವೆ ಎಂದು ಹೇಳಿದೇನೇ ಹೊರತು, ಕಳ್ಳೆತ್ತು ಎಂದು ಹೇಳಿಲ್ಲ ಎಂದರು. ಈ ವೇಳೆ ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಕೆ.ಟಿ.ಶ್ರೀಕಂಠೇಗೌಡ, ಅಂಬರೀಷ್ ಆಪ್ತ ಅಮರಾವತಿ ಚಂದ್ರಶೇಖರ್, ಜಫ್ರುಲ್ಲಾ ಖಾನ್, ಗಾಂಧಿ ಭವನದ ಕಾರ್ಯದರ್ಶಿ ರಾಜು ಮತ್ತಿತರರಿದ್ದರು.

Translate »