ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ
ಕೊಡಗು

ಅಕ್ರಮ ಸ್ಫೋಟಕ ದಾಸ್ತಾನು: ಐವರ ಬಂಧನ

March 29, 2019

ಮಡಿಕೇರಿ: ಕುಶಾಲನಗರದ ಮನೆಯೊಂದರಲ್ಲಿ ಅಕ್ರಮವಾಗಿ ಅಪಾಯ ಕಾರಿ ಸ್ಫೋಟಕ ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿರುವ ಕುಶಾಲನಗರ ಗ್ರಾಮಾಂ ತರ ಠಾಣಾ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಒಟ್ಟು 5 ಮಂದಿಯನ್ನು ಬಂಧಿಸಿ, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ರಾತ್ರಿ 10.45 ಗಂಟೆಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಕುಶಾಲ ನಗರದ ಸುಂದರನಗರ ನಿವಾಸಿ ಮಂಜು ಎಂಬುವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 21 ಎಲೆಕ್ಟ್ರಾನಿಕ್ ಡಿಟೋನೇಟರ್, 200 ಸಾಮಾನ್ಯ ಡಿಟೋನೇಟರ್, ಅಮೋನಿಯಂ ನೈಟ್ರೇಟ್‍ನ 239 ಜೆಲ್ ಟ್ಯೂಬ್‍ಗಳು, 25 ಕೆ.ಜಿ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್, 14 ರೋಲ್ ಸೇಫ್ಟಿ ಫ್ಯೂಸ್‍ಗಳು ಪತ್ತೆಯಾಗಿದೆ. ಈ ಸಂಬಂಧ ವಿಚಾರಣೆ ನಡೆಸಿದಾಗ ಕುಶಾಲನಗರ ಸುಂದರ ನಗರ ನಿವಾಸಿ ಮಂಜು(37) ಬಸವೇಶ್ವರ ಬಡಾವಣೆ ನಿವಾಸಿ ಮಣಿ(33), ಸುಂದರ ನಗರದ ಕುಬೇರ(45), ಬೈಚನಹಳ್ಳಿಯ ಕೆ.ಆರ್.ರವಿ(31), ಬೆಟ್ಟದಪುರ ನಿವಾಸಿ ರಿಜ್ವಾನ್ ಅಹಮದ್(54), ಅವರುಗಳು ಶಾಮೀಲಾಗಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು 5 ಮಂದಿ ಆರೋಪಿಗಳ ವಿರುದ್ಧ ಸೆಕ್ಷನ್ 42\2019 ಕಲಂ 05ರ ಸ್ಪೋಟಕ ವಸ್ತು ಅಧಿನಿಯಮ 1998ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ನಗರ ಠಾಣೆಯ ಉಪ ನಿರೀಕ್ಷಕ ಜಗದೀಶ್, ಮಡಿಕೇರಿ ಆರ್.ಪಿ.ಐ. ರಾಚಪ್ಪ, ಪ್ರೊ. ಉಪ ನಿರೀಕ್ಷಕಿ ಅರ್ಚನ, ವಿಶೇಷ ಅಪರಾಧ ಪತ್ತೆ ದಳದ ದಯಾನಂದ, ಸಜಿ, ಸುರೇಶ್ ಮತ್ತು ಬಾಂಬ್ ಪತ್ತೆ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »