ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ ಗೆಲುವಿಗೆ ವಾಮ ಮಾರ್ಗ ಹಿಡಿಯುವ ಅಗತ್ಯ ಬಿಜೆಪಿಗಿಲ್ಲ ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು
ಕೊಡಗು

ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ ಗೆಲುವಿಗೆ ವಾಮ ಮಾರ್ಗ ಹಿಡಿಯುವ ಅಗತ್ಯ ಬಿಜೆಪಿಗಿಲ್ಲ ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು

March 27, 2019

ಮಡಿಕೇರಿ: ಕೊಡಗು ಜಿಲ್ಲೆ ಸಂಪೂರ್ಣವಾಗಿ ಬಿಜೆಪಿಮಯವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲುವಿಗೆ ವಾಮಮಾರ್ಗ ಹಿಡಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲವೆಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಅಭಿಮನ್ಯು ಕುಮಾರ್, ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ಪರವಾಗಿ ಭ್ರಷ್ಟಾಚಾರ ರಹಿತ ಆಡಳಿತ ವನ್ನು ನೀಡಿರುವುದರಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳು ‘ಟೀಕೆ’ಗೆ ವಿಷಯ ಗಳೇ ಇಲ್ಲದೆ ಕಪೆÀÇೀಲಕಲ್ಪಿತ ಆರೋ ಪಗಳನ್ನು ಮಾಡುತ್ತಿವೆ ಎಂದು ಅಸ ಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಾಧನೆ ಮತ್ತು ಹಗ ರಣ ಮುಕ್ತ ಆಡಳಿತವನ್ನು ಮುಂದಿಟ್ಟು ಕೊಂಡು ಬಿಜೆಪಿ ಈ ಬಾರಿಯ ಲೋಕ ಸಭಾ ಚುನಾವಣೆಯನ್ನು ಎದುರಿಸುತ್ತಿದೆ. ವಿರೋಧ ಪಕ್ಷಗಳು ಪ್ರಸ್ತುತ ಜನರು ನಂಬ ಲಾಗದ ರೀತಿಯ ವಿಚಾರಗಳನ್ನು ಮುಂದಿಟ್ಟು ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿ ಸುತ್ತಿವೆ. ಬಿಜೆಪಿ ಮಂದಿ ವಾಮ ಮಾರ್ಗದ ಮೂಲಕÀ ಚುನಾವಣೆಯನ್ನು ಎದುರಿಸು ತ್ತಿದ್ದಾರೆ ಎಂದು ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಆರೋಪಿಸಿದ್ದಾರೆ. ಈ ವಾಮ ಮಾರ್ಗ, ಕುತಂತ್ರಗಳೆಲ್ಲವು ಟೀಕಿಸುತ್ತಿರು ವವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಅಭಿಮನ್ಯುಕುಮಾರ್ ಟೀಕಿಸಿದರು.

ಜಿಲ್ಲೆಯ ಸಹಕಾರ ಸಂಘಗಳಿಂದ ಹಿಡಿದು, ಗ್ರಾಪಂ, ತಾಪಂ, ಜಿಪಂ, ಶಾಸ ಕರು ಎಲ್ಲರೂ ಬಿಜೆಪಿಯವರೇ ಆಗಿರುವ ಹಂತದಲ್ಲಿ ಬಿಜೆಪಿಗೆ ಚುನಾವಣೆ ಎದು ರಿಸಲು ವಾಮಮಾರ್ಗದ ಅಗತ್ಯತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಹೆಸರೇ ಅಳಿಸಿ ಹೋಗುವ ಸ್ಥಿತಿಯಲ್ಲಿ ರುವ ಕಾಂಗ್ರೆಸ್, ತನ್ನ ಅಸ್ತಿತ್ವವನ್ನು ಉಳಿಸಿ ಕೊಳ್ಳುವ ಸಲುವಾಗಿಯಷ್ಟೆ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಚುನಾವಣೆಯ ಗೆಲುವಿಗಾಗಿ ಮತದಾರರ ಪಟ್ಟಿಯಿಂದ ಕಾಂಗ್ರೆಸ್ಸಿಗರ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಮು ಖರು ಆರೋಪಿಸಿದ್ದಾರೆ. ಈ ರೀತಿ ಬಿಜೆಪಿ ನಡೆದುಕೊಂಡಿರುವುದಕ್ಕೆ ಒಂದು ಉದಾ ಹರಣೆಯನ್ನು ಕಾಂಗ್ರೆಸ್ ತೋರಿಸಲಿ ಎಂದು ಸವಾಲೊಡ್ಡಿದ ಅಭಿಮನ್ಯು ಕುಮಾರ್, ಕಲಬೆರಕೆ ಸರಕಾರದಲ್ಲಿ ಇರುವ ಅಧಿ ಕಾರಿಗಳು ಸರ್ಕಾರದ ಭಾಗವಾಗಿರು ವವರ ಮಾತಿಗೆ ಬೆಲೆ ಕೊಟ್ಟು ಆ ರೀತಿ ಮಾಡಿರಬಹುದು. ಅಲ್ಲದೆ ಜಿಲ್ಲೆಯಲ್ಲಿ ರುವ ನುಸುಳುಕೋರ ಬಾಂಗ್ಲಾದೇಶಿಗರು, ಅಸ್ಸಾಮಿಗರನ್ನು ಮತಪಟ್ಟಿಗೆ ಸೇರಿಸುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಅಭಿ ಮನ್ಯು ಕುಮಾರ್ ಆರೋಪಿಸಿದರು.

ಎರಡು ಬಾರಿ ಸಂಸದರಾಗಿ, ಶಾಸಕ ರಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರಣ್ಯ ಸಚಿವರಾಗಿದ್ದು, ಇದೀಗ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ವಿಜಯಶಂಕರ್ ಅವರು, ಬಿಜೆಪಿ ಕೋಮುವಾದಿ ಪಕ್ಷವೆಂದು ಟೀಕಿ ಸುತ್ತಾರೆ. ಅವರಿಗೆ ಬಿಜೆಪಿಯಲ್ಲಿ ಇದ್ದು, ಅಧಿಕಾರವನ್ನು ಅನುಭವಿಸುವಾಗ ಈ ವಿಚಾರ ತಿಳಿದಿರಲಿಲ್ಲವೆ, ಅರಣ್ಯ ಸಚಿವರಾ ಗಿದ್ದಾಗ ಅವರು ಕೊಡಗಿಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭ ವಿಸಿದ ಸಂದರ್ಭ ಸ್ವತಃ ಸಂಕಷ್ಟಕ್ಕೆ ಸಿಲು ಕಿದ್ದ ಕಾಂಗ್ರೆಸ್ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರನ್ನು ಹೊರತು ಪಡಿಸಿದರೆ ಇತರೆ ಯಾವುದೇ ಕಾಂಗ್ರೆಸ್ ಮಂದಿಯೂ ಕಾಣಿ ಸಿಕೊಂಡಿರಲಿಲ್ಲ. ಜಿಲ್ಲೆಯ ಶಾಸಕರೊಂದಿಗೆ ಸಂಸದರು ಜನರ ಸಂಕಷ್ಟಗಳಿಗೆ ಸ್ಪಂದಿ ಸುವ ಕೆಲಸ ಮಾಡಿರುವುದಲ್ಲದೆ, ಕೇಂದ್ರದ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಜಿಲ್ಲೆಗೆ ಕರೆಸುವಲ್ಲಿ ಮತ್ತು ನೆರ ವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾ ಗಿದ್ದಾರೆ ಎಂದು ಅಭಿಮನ್ಯುಕುಮಾರ್ ಹೇಳಿ ದರು. ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಜಿಲ್ಲೆಯ ಕಾಂಗ್ರೆಸ್ ಪ್ರಮು ಖರೊಬ್ಬರು ದಾಖಲೆ ಇಲ್ಲದ ಹಣ ದೊಂದಿಗೆ ಪಿರಿಯಾಪಟ್ಟಣದ ಮಡಗಲಿ ಎಂಬಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿ ಸಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ರೌಡಿ ಶೀಟರ್‍ಗೆ ಸೇರಿಸಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರೇ ಹೇಳಿಕೊಳ್ಳುತ್ತಿದ್ದು, ಬಿಜೆಪಿ ಎಲ್ಲಿಯೂ ಇದನ್ನು ಹೇಳಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಅವರದೇ ಸರ್ಕಾರ ರಾಜ್ಯ ದಲ್ಲಿದೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾ ಧ್ಯಾಯ ಮಾತನಾಡಿ, ಮಹಾ ಘಟ ಬಂಧನದ ಮೂಲಕ ಕಾಂಗ್ರೆಸ್‍ನಿಂದ ಸ್ಪರ್ಧಿ ಸಿರುವ ವಿಜಯಶಂಕರ್, ಈ ಹಿಂದೆ ರಾಜ್ಯ ದಲ್ಲಿ ಅರಣ್ಯ ಸಚಿವರಾಗಿದ್ದ ಸಂದರ್ಭ ಕೊಡಗಿಗೆ ಮಾರಕವಾದ ಗಾಡ್ಗಿಲ್ ವರ ದಿಯ ಜಾರಿಗೆ ಮುಂದಾಗಿದ್ದರು. ಜಿಲ್ಲೆಯ ಇಬ್ಬರು ಶಾಸಕರು ವಿರೋಧಿಸಿದ ಹಿನ್ನೆಲೆ ಯಲ್ಲಿ ಅದು ಜಾರಿಯಾಗಲು ಸಾಧ್ಯವಾಗ ಲಿಲ್ಲ, ಇದೇ ರೀತಿ ಸೂಕ್ಷ್ಮ ಪರಿಸರ ತಾಣ ಗಳಿಂದ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಮಾಡುವ ವಿಜಯ ಶಂಕರ್ ಪ್ರಯತ್ನಗಳನ್ನು ಜಿಲ್ಲೆಯ ಶಾಸ ಕರು ತಡೆದಿದ್ದರು, ಹೀಗೆ ಜಿಲ್ಲೆಯ ಹಿತಕ್ಕೆ ವಿರುದ್ಧವಾದ ನಿಲುವು ತಳೆದಿದ್ದ ವಿಜಯ ಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡುವವರು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಮಾತ್ರ ಹೋರಾಟ ನಡೆಸುತ್ತಿವೆಯೆಂದು ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭ ವಿಸಿದ ಸಂದರ್ಭ ಉದಾರವಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸಿಎಂ ಅವರೇ ತಿಳಿಸಿರುವಂತೆ 200 ಕೋಟಿ ಹಣ ಹರಿದು ಬಂದಿದೆ. ಈ ಹಣವನ್ನು ಯಾವ ರೀತಿ ಬಳಸಲಾಗುತ್ತಿದೆ ಎನ್ನುವ ಬಗ್ಗೆ ವಿವರಗಳಿಲ್ಲ ಎಂದು ನಾಪಂಡ ರವಿ ಕಾಳಪ್ಪ ಅಸಮಾಧಾನ ವ್ಯಕ್ತ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರುಣ್ ಕುಮಾರ್ ಹಾಗೂ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.

Translate »