ಬೆಂಗಳೂರು ಕೊಡವ ಸಮಾಜದಿಂದ ಕೊಡಗು ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ
ಕೊಡಗು

ಬೆಂಗಳೂರು ಕೊಡವ ಸಮಾಜದಿಂದ ಕೊಡಗು ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

March 27, 2019

ಬೆಂಗಳೂರು: ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೊಡಗಿನ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಅಂದರೆ ಧಾರಾಕಾರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮನೆ, ಮಠ, ಜಾನು ವಾರುಗಳನ್ನು ಕಳೆದುಕೊಂಡ ಕುಟುಂಬ ಗಳಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯ ಕ್ರಮವನ್ನು ಬೆಂಗಳೂರಿನ ಕೊಡವ ಸಮಾಜ ವತಿಯಿಂದ ಸೋಮವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸುಮಾರು 355 ಪ್ರವಾಹ ಸಂತ್ರಸ್ತರಿಗೆ ಒಟ್ಟು 2.65 ಕೋಟಿ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ.ನಾಣಯ್ಯ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೊಡವ ಸಮಾಜದ ವತಿಯಿಂದ ಕೊಡವ ಸಮಾಜ ಪ್ರವಾಹ ಪರಿಹಾರ ನಿಧಿಯನ್ನು ಸ್ಥಾಪಿಸಲಾ ಗಿತ್ತು. ಸಂಘದ ಸಮಿತಿಯ ಮೂಲಕ ಸಂತ್ರ ಸ್ತರನ್ನು ಗುರುತಿಸಿ ಹಾಗೂ ಅವರಿಗೆ ಉಂಟಾ ಗಿರುವ ನಷ್ಟವನ್ನು ತಪಾಸಣೆ ಮಾಡಿ ಅವರಿಗೆ ಪರಿಹಾರ ನೀಡುತ್ತಿದೆ ಎಂದರು.

“ಬೆಂಗಳೂರಿನ ಕೊಡವ ಸಮಾಜವು ಪ್ರವಾಹ ಸಂತ್ರಸ್ತರಿಂದ ಅರ್ಜಿಗಳನ್ನು ಆಹ್ವಾ ನಿಸಿತ್ತು. ಅಲ್ಲದೆ, ಒಂದು ಸ್ವತಂತ್ರ ಸರ್ವೆ ತಂಡವನ್ನು ರಚಿಸಿ, ಆ ತಂಡವು ಪ್ರತಿ ಯೊಬ್ಬ ಸಂತ್ರಸ್ತರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪ್ರಕೃತಿ ವಿಕೋಪದಿಂದಾಗಿ ಉಂಟಾದ ನಷ್ಟವನ್ನು ನಿಗದಿ ಮಾಡಿತು. ನಂತರ ಸಮಿತಿಯು ನಷ್ಟ ಹಾಗೂ ಸರ್ವೆ ಮೂಲಕ ಕೊಡವರು ಹಾಗೂ ಕೊಡವರಲ್ಲ ದವರ ಫಲಾನುಭವಿಗಳ ಪಟ್ಟಿಯನ್ನು ತಯಾ ರಿಸಲಾಯಿತು’’ ಎಂದು ಅವರು ಹೇಳಿದರು.

ಸಂತ್ರಸ್ತರಿಗೆ ಉಂಟಾದ ನಷ್ಟವನ್ನು ಆಧ ರಿಸಿ ಪರಿಹಾರದ ಚೆಕ್ ಅನ್ನು ನೀಡಲು ನಿರ್ಧರಿಸಲಾಯಿತು. “ನಷ್ಟವನ್ನು ಆಧರಿಸಿ 30,000 ರೂ.ನಿಂದ 2 ಲಕ್ಷ ರೂ.ಗಳ ವರೆಗೆ ಪರಿಹಾರದ ಚೆಕ್ಕ ವಿತರಿಸಲಾ ಯಿತು’’ ಎಂದು ನಾಣಯ್ಯ ಹೇಳಿದರು.
ಕೊಡವ ಸಮಾಜದ ಮೂಲಗಳ ಪ್ರಕಾರ, ಸುಮಾರು 500 ಮಂದಿ ಅರ್ಜಿದಾರರಲ್ಲ ದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಸಂಘವು ಕಾರ್ಯಕ್ರಮಕ್ಕೆ ಬಂದವ ರಿಂದ ಅರ್ಜಿಗಳನ್ನು ಸ್ವೀಕರಿಸಿ, ಪರಿಶೀ ಲಿಸಿ ಸಾಧ್ಯವಾದಲ್ಲಿ ಅವರಿಗೆ ಪರಿಹಾರ ವಿತರಿಸುವುದಾಗಿ ಹೇಳಿದರು.

ಚೆಕ್ ವಿತರಣಾ ಸಮಾರಂಭದ ನೇತೃ ತ್ವವನ್ನು ಕೊಡವ ಸಮಾಜ ಪ್ರವಾಹ ಸಂತ್ರ ಸ್ತರ ನಿಧಿ ಅಧ್ಯಕ್ಷ ಮೇಜರ್ ಜನರಲ್ (ನಿವೃತ್ತ) ಕೊಂಡಂಡೇರಾ ಅರ್ಜುನ್ ಮುತ್ತಣ್ಣ ವಹಿಸಿದ್ದರು. ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟ್ಟಿರ ಟಿ.ನಾಣಯ್ಯ ಅಧ್ಯಕ್ಷತೆ ವಹಿ ಸಿದ್ದರು. ಕೋಡಿರಾ ಕಾವ್ಯ ಪ್ರತಾಪ್ ಸೋಮಣ್ಣ ಪ್ರಾರ್ಥಿಸಿದರು. ಕೊಡವ ಸಮಾ ಜದ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ಸ್ವಾಗತಿಸಿದರು. ಸಮಾಜದ ಉಪಾಧ್ಯಕ್ಷ ಮಲ್ಲೇಂ ಗಡ ಮೀರಾ ಜಲಜಕುಮಾರ್ ವಂದಿಸಿದರು.

Translate »