ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ಕೊಡಗು

ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ

March 28, 2019

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಾಂ ಕನ ಪರಿಷತ್ತು (ನ್ಯಾಕ್) ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಂತದಲ್ಲಿ ಭೋದನಾ ಗುಣಮಟ್ಟ, ದಾಖಲೆಗಳು, ಕಾಲೇಜಿನ ವಿವರ, ವಿವಿಧ ವಿಭಾಗಗಳ ಹಾಗೂ ಫಲಿತಾಂಶದ ಪರಿ ಶೀಲನೆ ಮತ್ತು ಎಲ್ಲಾ ತರಹದ ಭೋದನಾ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಒಂದು ದಿನ ತಂಡದವರು ಹಳೆಯ ವಿದ್ಯಾ ರ್ಥಿಗಳ ಜೊತೆ ಮತ್ತು ಪೋಷಕರ ಜೊತೆಯೂ ಸಂವಾದ ನಡೆಸಿದರು.

ನ್ಯಾಕ್ ತಂಡದಲ್ಲಿ ತಂಡದ ಮುಖ್ಯಸ್ಥ ರಾಗಿ ಗುಜರಾತ್‍ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಶಿರಿಷ್ ಕುಲಕರ್ಣಿ, ಸದಸ್ಯರಾಗಿ ಕೇರ ಳದ ತಿರುವನಂತಪುರಂನ ಮತ್ತು ನಿರ್ದೇ ಶಕರಾದ ಡಾ.ಸುಧೀರ್ ಎಸ್.ವಿ., ಸದಸ್ಯ ರಾಗಿ ಮಹರಾಷ್ಟ್ರದ ಸತಾರದ ಧನಂಜಯ ರಾವ್ ಗಾಡ್ಗಿಲ್, ಕಾಲೇಜಿನ ಪ್ರಾಂಶು ಪಾಲರಾದ ಡಾ.ಪ್ರತಿಭಾ ಗಾಯಕ್‍ವಾಡ ಭಾಗವಹಿಸಿದ್ದರು. ಈ ತಂಡವು ಸಂಪೂ ರ್ಣವಾಗಿ ಭೋಧನಾ ಗುಣಮಟ್ಟವನ್ನು ಪರಿಶೀಲಿಸಿತು. ಹಾಗೂ ಕಾಲೇಜಿನಲ್ಲಿ ಇನ್ನೂ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು ಮತ್ತು ಪ್ರಾರಂಭಿಸಬೇಕಾಗಿರುವ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ತಂಡದ ಮುಖ್ಯಸ್ಥರಾದ ಪ್ರೊ.ಶಿರಿಷ್ ಆರ್.ಕುಲಕರ್ಣಿ ಅವರು ಈ ಭೇಟಿಯು ತೃಪ್ತಿ ತಂದಿದೆ. ಕಾಲೇಜು, ಫಲಿತಾಂಶ ಮತ್ತು ಕ್ರೀಡೆ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದೆ. ಕಾಲೇಜಿನ ಅಭಿವೃದ್ಧಿ ಎಂಬುದು ನಿಂತ ನೀರಾಗದೆ. ನಿರಂತರವಾಗಿ ಮುನ್ನಡೆಯುತ್ತಿರಬೇಕು. ಆಗ ಮಾತ್ರ ಸಂಸ್ಥೆಯ ಸರ್ವಾಂಗೀಣ ಪ್ರಗತಿ ಸಾದ್ಯ ಎಂದರು.

ಈ ಸಂದರ್ಭದಲ್ಲಿ ಶಿರಿಷ್ ಆರ್ ಕುಲ ಕರ್ಣಿ ಅವರು ತಮ್ಮ ವರದಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೈಸೂರಿನ ಡಯಾಸಿ ಸನ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಗುರುಗಳಾದ ಡಾ. ಕೆ.ಎ.ವಿಲೀಯಂ, ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವ ಸ್ಥಾಪಕ ರೆ.ಪಾ. ಮದಲೈ ಮುತ್ತು, ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ.ಪಾ. ಲೆಸ್ಲಿ ಮೊರಾಸ್, ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ರೆ.ಪಾ.ಐಸಾಕ್ ರತ್ನಾಕರ್, ಐಕ್ಯೂ ಎಸಿ ಸಂಚಾಲಕಿ ತೃಪ್ತಿ ಬೋಪಣ್ಣ ಉಪಸ್ಥಿತ ರಿದ್ದರು. ಎಲ್ಲಾ ವಿಭಾಗಗಳ ಪ್ರಾಧ್ಯಾಪ ಕರು, ಪ್ರಾಧ್ಯಾಪಕೇತರು ಮತ್ತು ವಿದ್ಯಾ ರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿನಿ ಆನಿ ಮತ್ತು ತಂಡದವರು ಪ್ರಾರ್ಥಿಸಿ, ರೆ.ಪಾ.ಐಸಾಕ್ ರತ್ನಾಕರ ಸ್ವಾಗ ತಿಸಿ, ಉಪಾನ್ಯಾಸಕಿ ಬೀನಾ ರೋಸಿ ನಿರೂ ಪಿಸಿ, ಉಪನ್ಯಾಸಕಿ ತೃಪ್ತಿ ವಂದಿಸಿದರು.

Translate »