ಕೊಡಗು

ಕೊಡಗು ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ಪ್ರಸ್ತಾವನೆ ಇಲ್ಲ
ಕೊಡಗು

ಕೊಡಗು ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ಪ್ರಸ್ತಾವನೆ ಇಲ್ಲ

February 14, 2019

ಬೆಂಗಳೂರು: ಮೈಸೂರಿನಿಂದ ಕೊಡಗು ಮಾರ್ಗವಾಗಿ ಕೇರಳದ ತಲಚೇರಿಗೆ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ ಮೇರೆಗೆ ಹೈಕೋರ್ಟ್ ದ್ವಿಸದಸ್ಯ ಪೀಠವು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯನ್ನು ವಜಾ ಮಾಡಿತು. ಮೈಸೂರಿನಿಂದ ಕೊಡಗು ಮೂಲಕ ತಲಚೇರಿಗೆ ರೈಲು ಮಾರ್ಗ ನಿರ್ಮಾಣ ಮತ್ತು ಕೊಡಗಿನಲ್ಲಿ ಚತುಷ್ಟಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿರುದ್ಧ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ 2018ರಲ್ಲಿ ಹೈ ಕೋರ್ಟ್‍ನಲ್ಲಿ ಸಾರ್ವಜನಿಕ…

ಜೀಪ್ ಡಿಕ್ಕಿ; ಬೈಕ್ ಸವಾರ ಸಾವು
ಕೊಡಗು

ಜೀಪ್ ಡಿಕ್ಕಿ; ಬೈಕ್ ಸವಾರ ಸಾವು

February 14, 2019

ಗೋಣಿಕೊಪ್ಪಲು: ಬೈಕ್ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವಿಗೀಡಾದ ಘಟನೆ ಸಮೀಪದ ಬೇಗೂರು ಎಂಬಲ್ಲಿ ನಡೆದಿದೆ. ಚೀನಿವಾಡ ಗ್ರಾಮದ ಲಲಿತಾ ಹಾಗೂ ಶಂಕರ್ ಎಂಬುವರ ಪುತ್ರ ಜನಾರ್ದನ (19) ಮೃತ ಯುವಕ. ಬೆಳಗ್ಗೆ ಪೊನ್ನಂಪೇಟೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಬೈಕ್ ಜಖಂ ಆಗಿದೆ. ಜನಾರ್ಧನ್ ಅವರ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತರಾದರು. ಪೊನ್ನಂ ಪೇಟೆ ಸುದೇವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆ…

ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ದುಷ್ಕರ್ಮಿಗಳು
ಕೊಡಗು

ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ದುಷ್ಕರ್ಮಿಗಳು

February 14, 2019

ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಸಿದ್ದಾಪುರ: ಕಳೆದ 10 ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ಸಿದ್ದಾಪುರದ ಎಮ್ಮೆಗುಂಡಿ ಎಸ್ಟೇಟ್‍ನಿಂದ ನಿಗೂಢ ವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಆಕೆ ಯನ್ನು ಅತ್ಯಾಚಾರ ಎಸಗಿ ಕೊಲೆಗೈದಿ ರುವ ವಿಚಾರವನ್ನು ಬಯಲಿಗೆಳೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜಿತ್(21) ಮತ್ತು ಸಂದೀಪ್ (30) ಬಂಧಿತ ಆರೋಪಿಗಳು. ಘಟನೆ ವಿವರ: ನೆಲ್ಯಹುದಿಕೇರಿಯ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಸಂಧ್ಯಾ ಎಂಬಾಕೆ ಫೆ.4ರಂದು ಸಂಜೆ ಕಾಲೇಜು ಮುಗಿಸಿ…

ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ  ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ
ಕೊಡಗು

ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

February 14, 2019

ಸೋಮವಾರಪೇಟೆ: ಹಾಸನದಲ್ಲಿ ಶಾಸಕರ ಮನೆ ಮತ್ತು ಬಿಜೆಪಿ ಕಾರ್ಯ ಕರ್ತರ ಮೇಲಿನ ದಾಳಿ ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರೇವಣ್ಣ ಅವರಿಗೆ ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಅವರ ಗೆಲುವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಮುಂದುವರೆದ ಭಾಗವಾಗಿ ಜೆಡಿಎಸ್‍ನ ಕಾರ್ಯಕರ್ತರ ಸೋಗಿನಲ್ಲಿರುವ ಗೂಂಡಾಗಳು ಶಾಸಕರ ಮನೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ತಕ್ಷಣ ಹಲ್ಲೆ ನಡೆಸಿದ…

ಒತ್ತುವರಿ ತೆರವಿನ ವೇಳೆ ಆಘಾತಕ್ಕೊಳಗಾಗಿ ತೋಟದ ಮಾಲೀಕ ಆಸ್ಪತ್ರೆಗೆ ದಾಖಲು
ಕೊಡಗು

ಒತ್ತುವರಿ ತೆರವಿನ ವೇಳೆ ಆಘಾತಕ್ಕೊಳಗಾಗಿ ತೋಟದ ಮಾಲೀಕ ಆಸ್ಪತ್ರೆಗೆ ದಾಖಲು

February 14, 2019

ಮಡಿಕೇರಿ: ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾ ದಾಗ ಆಘಾತಕ್ಕೊಳಗಾದ ತೋಟದ ಮಾಲೀಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮಡಿಕೇರಿ ಸಮೀಪದ ಹರಬಿಬಾಣೆ ಗೋಳಿಕಟ್ಟೆ, ಗ್ರಾಮದ ಕಾಫಿ ಬೆಳೆಗಾರ ಶಿವುಪ್ರಕಾಶ್ ಅಘಾತಕ್ಕೊಳ ಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಆಗಸ್ಟ್‍ನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮಕೈಗೊಂಡು ಜಾಗಗಳನ್ನು ಗುರುತಿಸಿತ್ತು. ಅದರಂತೆ ಗೋಳಿಕಟ್ಟೆ ಗ್ರಾಮಸ್ಥರ ಪೂಜ್ಯಸ್ಥಾನ ಪಡೆದಿದ್ದ ಹರಬಿಬಾಣೆ ಪ್ರದೇಶವನ್ನು ಗುರುತಿಸಿತ್ತು. ಆದರೆ ಮೊದಲು ಇದಕ್ಕೆ…

ಬಾರ್ ನೌಕರ ಆತ್ಮಹತ್ಯೆ
ಕೊಡಗು

ಬಾರ್ ನೌಕರ ಆತ್ಮಹತ್ಯೆ

February 14, 2019

ಸೋಮವಾರಪೇಟೆ: ಬಾರ್‍ನಲ್ಲಿ ಕೆಲಸ ನಿರ್ವಹಿ ಸುತ್ತಿದ್ದ ಯುವಕ ನೋರ್ವ ಶೌಚಾ ಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮಾದಾಪುರ ಮೂವತ್ತೊಕ್ಲು ಗ್ರಾಮದ ತಂಬುಕುತ್ತಿರ ಮಂದಣ್ಣ ಎಂಬುವರ ಪುತ್ರ ಬೋಪಣ್ಣ(28) ಮೃತ ವ್ಯಕ್ತಿ. ಮಡಿ ಕೇರಿ ರಸ್ತೆಯಲ್ಲಿರುವ ಸಫಾಲಿ ಬಾರ್‍ನಲ್ಲಿ ಕಳೆದ 10 ವರ್ಷಗಳಿಂದ ಬೋಪಣ್ಣ ಸಪ್ಲೈಯರ್ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ಕೆಲಸ ನಿರ್ವಹಿಸಿದ್ದಾರೆ. ಆದರೆ ಬುಧ ವಾರ ಬೆಳಿಗ್ಗೆ ನೋಡಿದಾಗ ಶೌಚಾಲ ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ…

ಕೊಡಗು ಮೂಲಕ ಹಾದುಹೋಗುವ ರೈಲು  ಮಾರ್ಗ, ಹೆದ್ದಾರಿ ಯೋಜನೆಗೆ ಹೈಕೋರ್ಟ್ ತಡೆ
ಕೊಡಗು

ಕೊಡಗು ಮೂಲಕ ಹಾದುಹೋಗುವ ರೈಲು ಮಾರ್ಗ, ಹೆದ್ದಾರಿ ಯೋಜನೆಗೆ ಹೈಕೋರ್ಟ್ ತಡೆ

February 12, 2019

ಮಡಿಕೇರಿ: ಕೊಡಗಿನ ಮೂಲಕ ಹಾದು ಹೋಗುವ ರೈಲು ಮಾರ್ಗ ಮತ್ತು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೈ ಕೋರ್ಟ್‍ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸ ಕ್ತಿಯ ಅರ್ಜಿಯ ವಿಚಾರಣೆ ಮುಕ್ತಾಯ ವಾಗುವವರೆಗೂ ಯೋಜನೆಗೆ ಸಂಬಂಧಿ ಸಿದಂತೆ ಯಾವುದೇ ಕಾಮಗಾರಿ ನಡೆಸ ದಂತೆಯೂ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯಲ್ಲಿ ಸೂಚಿಸಲಾಗಿದೆ ಎಂದು ದೂರುದಾರ ನಿವೃತ್ತ ಕರ್ನಲ್ ಮುತ್ತಣ್ಣ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ರೈಲು ಮಾರ್ಗದ ಯೋಜನೆ ಮತ್ತು ಚತುಷ್ಪಥ ಹೆದ್ದಾರಿಯಿಂದ ಕೊಡಗು ಜಿಲ್ಲೆಯ ಪರಿಸರ,…

ಸೋಮವಾರಪೇಟೆಯಲ್ಲಿ ರಥಸಪ್ತಮಿ ಸೂರ್ಯ ನಮಸ್ಕಾರ
ಕೊಡಗು

ಸೋಮವಾರಪೇಟೆಯಲ್ಲಿ ರಥಸಪ್ತಮಿ ಸೂರ್ಯ ನಮಸ್ಕಾರ

February 12, 2019

ಸೋಮವಾರಪೇಟೆ: ರಥ ಸಪ್ತಮಿ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಐತಿಹಾಸಿಕ ಹೊನ್ನಮ್ಮನ ಕೆರೆ ದಡದಲ್ಲಿ 108 ಸೂರ್ಯ ನಮಸ್ಕಾರ ಮಾಡಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಮಾರ್ಗ ದರ್ಶನದಲ್ಲಿ ಸಂಸ್ಥೆಯ ಕಾರ್ಯಕರ್ತರು ಹಾಗೂ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು ಬೆಳಗ್ಗೆ 6 ರಿಂದ 7 ಗಂಟೆಯವರೆಗೆ 108 ಸೂರ್ಯ ನಮಸ್ಕಾರ ಮಾಡಿದರು. ಈ ಸಂದರ್ಭ ಜಿಪಂ ಸದಸ್ಯ ಬಿ.ಜೆ. ದೀಪಕ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯ…

ವಿರಾಜಪೇಟೆಯಲ್ಲಿ ಲೂರ್ದು ಮಾತೆ ಕ್ಯಾಂಡಲ್ ಹಬ್ಬ
ಕೊಡಗು

ವಿರಾಜಪೇಟೆಯಲ್ಲಿ ಲೂರ್ದು ಮಾತೆ ಕ್ಯಾಂಡಲ್ ಹಬ್ಬ

February 12, 2019

ವಿರಾಜಪೇಟೆ: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವ (ಕ್ಯಾಂಡಲ್ ಹಬ್ಬ) ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ.8 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ದಿವ್ಯ ಬಲಿಪೂಜೆ, ಜಪಸರ ನಡೆದು ಫೆ.11 ರಂದು ಮೈಸೂರಿನ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎ.ವಿಲಿಯಂ ಅವರಿಂದ ಸಂತ ಅನ್ನಮ್ಮ ದೇವಾಲಯದಲ್ಲಿ ಗಾಯನ ಬಲಿಪೂಜೆ ನಡೆಯಿತು. ಕ್ರೈಸ್ತ ಬಾಂಧವರು ಹಾಗೂ ಭಕ್ತಾಧಿಗಳು ಸಂತ ಅನ್ನಮ್ಮ ದೇವಾಲಯದಿಂದ ಮೇಣದ ಬತ್ತಿ ಹಿಡಿದು ಲೂರ್ದು ಮಾತೆ ಹಾಗೂ ಸಂತ…

ಸವಿತಾ ಮಹರ್ಷಿ, ಮಡಿವಾಳ ಮಾಚಿದೇವರು ಕಾಯಕ ಯೋಗಿಗಳು
ಕೊಡಗು

ಸವಿತಾ ಮಹರ್ಷಿ, ಮಡಿವಾಳ ಮಾಚಿದೇವರು ಕಾಯಕ ಯೋಗಿಗಳು

February 12, 2019

ಮಡಿಕೇರಿ: ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚಿದೇವರು, ಈ ಇಬ್ಬರು ಮಹನೀಯರು, ‘ಕಾಯಕ ಯೋಗಿಗಳು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವರ್ಣಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಹಾಗೂ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸವಿತಾ ಮಹರ್ಷಿ ಅವರು ಮೂರನೇ ಶತಮಾನದಲ್ಲಿ ಮತ್ತು ಮಡಿವಾಳ ಮಾಚಿ ದೇವರು 12ನೇ ಶತಮಾನದಲ್ಲಿ…

1 66 67 68 69 70 187
Translate »