ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ದುಷ್ಕರ್ಮಿಗಳು
ಕೊಡಗು

ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ದುಷ್ಕರ್ಮಿಗಳು

February 14, 2019

ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ
ಸಿದ್ದಾಪುರ: ಕಳೆದ 10 ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ಸಿದ್ದಾಪುರದ ಎಮ್ಮೆಗುಂಡಿ ಎಸ್ಟೇಟ್‍ನಿಂದ ನಿಗೂಢ ವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಆಕೆ ಯನ್ನು ಅತ್ಯಾಚಾರ ಎಸಗಿ ಕೊಲೆಗೈದಿ ರುವ ವಿಚಾರವನ್ನು ಬಯಲಿಗೆಳೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜಿತ್(21) ಮತ್ತು ಸಂದೀಪ್ (30) ಬಂಧಿತ ಆರೋಪಿಗಳು.

ಘಟನೆ ವಿವರ: ನೆಲ್ಯಹುದಿಕೇರಿಯ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಸಂಧ್ಯಾ ಎಂಬಾಕೆ ಫೆ.4ರಂದು ಸಂಜೆ ಕಾಲೇಜು ಮುಗಿಸಿ ತೋಟದ ಒಳ ಗಿನ ರಸ್ತೆಯಿಂದ ಮನೆಗೆ ತೆರಳುವ ಸಂದರ್ಭ ನಿಗೂಢ ರೀತಿಯಲ್ಲಿ ನಾಪತ್ತೆ ಯಾಗಿದ್ದಳು. ಗಾಬರಿಯಾದ ಆಕೆಯ ಪೋಷ ಕರು ತೋಟದಲ್ಲೆಲ್ಲ ಹುಡುಕಾಟ ನಡೆಸಿ ದ್ದರು. ಆದರೆ ಆಕೆ ಪತ್ತೆಯಾಗಿರಲಿಲ್ಲ. ತದನಂತರ ಸಿದ್ದಾಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು. ಪೊಲೀ ಸರು ಕಲಂ 363 ಐಪಿಸಿ ಸೆಕ್ಷನ್ ಅಡಿ ಯಲ್ಲಿ ಯುವತಿ ನಾಪತ್ತೆ ಪ್ರಕರಣ ದಾಖ ಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕೂಡ ತೋಟದ ಕೆರೆಯಲ್ಲಿ ಸಂಶಯದ ಶೋಧ ಕಾರ್ಯ ನಡೆಸಿದ್ದರು. ತದ ನಂತ ರವೂ ಆಕೆಯ ಬಗ್ಗೆ ಯಾವುದೇ ಸುಳಿವು ಲಭಿಸಿರಲಿಲ್ಲ. ಆದರೆ ತೋಟದ ಸಹ ಕಾರ್ಮಿಕರು ತೋಟದಲ್ಲಿ ನಿರಂತರ ಶೋಧ ನಡೆಸಿದಾಗ ಪೊದೆಯೊಂದರ ಒಳಗೆ ಆಕೆಯ ಶೂ, ಕಾಲೇಜು ಬ್ಯಾಗ್ ಪತ್ತೆಯಾಗಿತ್ತು.

ಈ ನಡುವೆ ಪ್ರಕೃಣವನ್ನು ಗಂಭೀರ ವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ, ಪ್ರಕರಣದ ತನಿಖೆಗಾಗಿ ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಸುಂದರ್ ರಾಜ್ ಮುಂದಾ ಳತ್ವದಲ್ಲಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ 2 ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು.

ಅದರಂತೆ ಅಪಹರಣಕ್ಕೆ ಒಳಗಾದ ಯುವತಿಯನ್ನು ಪತ್ತೆ ಹಚ್ಚುವ ಸಲುವಾಗಿ ಎಮ್ಮೆಗುಂಡಿ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರನ್ನು ಸೂಕ್ಷ್ಮವಾಗಿ ವಿಚಾರ ಣೆಗೆ ಒಳಪಡಿಸಿದ ಪೊಲೀಸ್ ತನಿಖಾಧಿಕಾ ರಿಗಳು ಕೆಲವು ವಿಚಾರಗಳನ್ನು ಕಲೆ ಹಾಕಿ ದ್ದರು. ಅದರಂತೆ ಯುವತಿ ಸಂಧ್ಯಾ, ಪಶ್ಚಿಮ ಬಂಗಾಳ, ಜಲಪೈ ಗುರಿಯ ಸಂಕೋಸ್ ಟೀ ಎಸ್ಟೇಟ್ ನಿವಾಸಿ ರಂಜಿತ್(21) ಮತ್ತು ಆತನ ಸ್ನೇಹಿತ ಪಶ್ಚಮ ಬಂಗಾಳದ, ಸಾವ್ ಗಾಂವ್ ನಿವಾಸಿ ಸಂದೀಪ್ (30) ಎಂಬುವರೊಂದಿಗೆ ಕೆಲವು ದಿನಗಳ ಹಿಂದೆ ಜಗಳವಾಡಿದ್ದ ಮಾಹಿತಿ ತಿಳಿದುಬಂದಿತ್ತು.

ಈ ಮಾಹಿತಿ ಆಧರಿಸಿ, ಎಮ್ಮೆಗುಂಡಿ ಎಸ್ಟೇಟ್‍ನ ಪಕ್ಕದ ಕರಡಿಕಾಡು ಎಸ್ಟೇಟ್ ನಲ್ಲಿ ಕಾರ್ಮಿಕನಾಗಿ ಕೆಲಸದಲ್ಲಿದ್ದ ರಂಜಿತ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆಕೆ ತನ್ನೊಂದಿಗೆ ಜಗಳವಾ ಡಿದ್ದ ಹಿನ್ನಲೆಯಲ್ಲಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ, ಪೂರ್ವ ತಯಾರಿಯಂತೆ ಫೆ.4 ರಂದು ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಈ ವಿಚಾರ ಬಹಿರಂಗವಾಗುತ್ತದೆಂದು ಆಕೆಯ ಕುತ್ತಿ ಗೆಗೆ ಹಗ್ಗ ಬಿಗಿದು ಕೊಲೆ ಮಾಡಿರುದಾಗಿ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ಮೃತ ದೇಹವನ್ನು ಸಂದೀಪ್ ನೆರವಿನೊಂದಿಗೆ ಎಸ್ಟೇಟ್ ಒಳಗಿರುವ ಗಣಪತಿ ದೇವಾಲ ಯದ ಕೆಳಭಾಗದ ಕಲ್ಲು ಗುಡ್ಡೆಯ ಕೆಳ ಭಾಗದ ಪೊದೆಗೆ ತುರುಕಿರುವುದಾಗಿ ಬಾಯ್ಬಿ ಟ್ಟಿದ್ದಾನೆ. ರಂಜಿತ್ ನೀಡಿದ ಮಾಹಿತಿ ಆಧ ರಿಸಿ ಸಂದೀಪ್ ನನ್ನು ವಿಚಾರಣೆ ನಡೆಸಿ ದಾಗ ಈ ಕೃತ್ಯದಲ್ಲಿ ತಾನೂ ಕೂಡ ಕೈಜೋ ಡಿಸಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್, ಸಿಬ್ಬಂದಿ ಗಳಾದ ಯೋಗೇಶ್ ಕುಮಾರ್, ವೆಂಕ ಟೇಶ್, ಅನಿಲ್, ವಸಂತ, ನಿರಂಜನ್, ಗಿರೀಶ್, ರಾಜೇಶ್, ಮಂಜುನಾಥ್, ಲವ ಕುಮಾರ್, ಪ್ರತೀಷ, ಮಲ್ಲಪ್ಪ, ಶಶಿ ಕುಮಾರ್, ಪೂವಯ್ಯ, ಮೋಹನ ಪಾಲ್ಗೊಂಡಿ ದ್ದರು.

ಅಸ್ಸಾಂ ಮತ್ತು ಹೊರ ರಾಜ್ಯಗಳ ಕಾರ್ಮಿಕರು ಜಿಲ್ಲೆಯ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಸಂಪೂರ್ಣ ದಾಖಲೆ ಸಹಿತ ತೋಟಗಳ ಮಾಲೀಕರು ಅಥವಾ ಸಂಬಂಧಿಸಿದವರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಖಡ್ಡಾಯವಾಗಿ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾ ಧಿಕಾರಿ ಡಾ. ಸುಮನ ಸೂಚನೆ ನೀಡಿದ್ದಾರೆ.

Translate »