ಕೊಡಗಿನ ನಾಲ್ವರ ದಾರುಣ ಸಾವು
ಮೈಸೂರು

ಕೊಡಗಿನ ನಾಲ್ವರ ದಾರುಣ ಸಾವು

October 2, 2019

ಮಡಿಕೇರಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಳ್ಯ ಸಮೀಪ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಮಂಗಳ ವಾರ ಮಧ್ಯಾಹ್ನ ನಡೆದಿದೆ.

ಕೊಡಗಿನ ನಾಪೋಕ್ಲು ಸಮೀಪದ ಕೊಟ್ಟ ಮುಡಿ ನಿವಾಸಿಗಳಾದ ಹಚ್ಚಯಾ ಹಾಜಿ (80), ಮಕ್ಕಳಾದ ಇಬ್ರಾಹಿಂ(45), ಉಮ್ಮರ್ (50), ಹ್ಯಾರಿಸ್(45) ಮೃತಪಟ್ಟ ವರು. ಮತ್ತೋರ್ವ ವ್ಯಕ್ತಿ ಉಮ್ಮರ್ ಫಾರುಕ್ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಕೊಟ್ಟಮುಡಿ ಗ್ರಾಮದ ನಿವಾಸಿ ಹಚ್ಚಯಾ ಹಾಜಿ, ತಮ್ಮ ಮಕ್ಕ ಳಾದ ಇಬ್ರಾಹಿಂ, ಉಮ್ಮರ್, ಹ್ಯಾರಿಸ್ ಹಾಗೂ ಉಮ್ಮರ್ ಫಾರುಕ್ ಅವರೊಂದಿಗೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಮಂಗಳೂರಿಗೆ ತೆರಳಿ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಿ ಕೊಂಡು ಮತ್ತೆ ತಮ್ಮ ಸ್ವಗ್ರಾಮ ಕೊಟ್ಟ ಮುಡಿಯತ್ತ ಹೊರಟಿದ್ದರು ಎನ್ನಲಾಗಿದೆ. ಮಧ್ಯಾಹ್ನ ಸುಮಾರು 2.30ರಲ್ಲಿ ಸುಳ್ಯ ಬಳಿಯ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಬರುತ್ತಿದ್ದಾಗ ಎದುರಿ ನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಚ್ಚಯಾ ಹಾಜಿ, ಇಬ್ರಾಹಿಂ, ಉಮ್ಮರ್, ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿ ದ್ದಾರೆ. ಉಮ್ಮರ್ ಫಾರುಕ್ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಮೃತ ಹಚ್ಚಯಾ ಹಾಜಿ ಅವರ ಪತ್ನಿ ಕಳೆದ ವರ್ಷ ನಿಧನರಾಗಿದ್ದರೆ, ಇವರ ಮಕ್ಕಳೆಲ್ಲ ವಿವಾಹಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Translate »