ಗೋಣಿಕೊಪ್ಪಲು: ಬೈಕ್ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವಿಗೀಡಾದ ಘಟನೆ ಸಮೀಪದ ಬೇಗೂರು ಎಂಬಲ್ಲಿ ನಡೆದಿದೆ. ಚೀನಿವಾಡ ಗ್ರಾಮದ ಲಲಿತಾ ಹಾಗೂ ಶಂಕರ್ ಎಂಬುವರ ಪುತ್ರ ಜನಾರ್ದನ (19) ಮೃತ ಯುವಕ.
ಬೆಳಗ್ಗೆ ಪೊನ್ನಂಪೇಟೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಬೈಕ್ ಜಖಂ ಆಗಿದೆ. ಜನಾರ್ಧನ್ ಅವರ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತರಾದರು. ಪೊನ್ನಂ ಪೇಟೆ ಸುದೇವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು