ವಿ.ಪೇಟೆಯಲ್ಲಿ ಕೃತ್ಯ, ಮೂವರ ಬಂಧನ ವಿರಾಜಪೇಟೆ: ಹಣಕಾಸು ವಿಚಾ ರಕ್ಕೆ ಸಂಬಂಧಿಸಿದಂತೆ ಬಾಲ್ಯ ಸ್ನೇಹಿತನೇ ಇತರ ಇಬ್ಬರೊಂದಿಗೆ ಸೇರಿ ಕಾಫಿ ವ್ಯಾಪಾ ರಿಯನ್ನು ಡ್ರ್ಯಾಗರ್‍ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಸಾರ್ವಜನಿಕರು ಹಾಗೂ ಪೊಲೀ ಸರ ಸಮಯ ಪ್ರಜ್ಞೆಯಿಂದಾಗಿ ರೌಡಿಶೀಟರ್ ಸೇರಿ ಮೂವರನ್ನು ಬಂಧಿಸಲಾಗಿದೆ. ವಿರಾಜಪೇಟೆ ಪಟ್ಟಣ ವ್ಯಾಪ್ತಿಯ ಮಂಜು ನಾಥನಗರ ನಿವಾಸಿ ಕಾಫಿ ವ್ಯಾಪಾರಿ ಶಫೀಕ್ ಹತ್ಯೆಗೀಡಾದವರಾಗಿದ್ದು, ಇವರ ಬಾಲ್ಯ ಸ್ನೇಹಿತ ದರ್ಶನ್, ಆತನ ತೋಟದ ಕಾರ್ಮಿಕ ಅಸ್ಸಾಂ ಮೂಲಕ ಮಹಮದ್…
ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಹಿಂದೂ ಸ್ಮಶಾನ ಭೂಮಿ ಒತ್ತುವರಿ ತೆರವು
February 7, 2019ಸಿದ್ದಾಪುರ: ಹಿಂದೂ ಸ್ಮಶಾನ ಭೂಮಿಯನ್ನು ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡಿದ್ದನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸುರ್ಪದಿಗೆ ಒಪ್ಪಿಸು ವಲ್ಲಿ ಯಶಸ್ವಿಯಾಗಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ 20ಕ್ಕೂ ಹೆಚ್ಚು ಸೆಂಟ್ ಸಾರ್ವ ಜನಿಕ ಸ್ಮಶಾನ ಭೂಮಿಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ನರ್ಸರಿ ಕೃಷಿ ಮಾಡುತ್ತಿದ್ದರೆನ್ನಲಾಗಿದೆ. ಇದ ರಿಂದ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇಲ್ಲದೇ ಶವಸಂಸ್ಕಾರಕ್ಕೆ ಪರ ದಾಡುವಂತಹ ಪರಿಸ್ಥಿತಿ…
ಸಾಲಬಾಧೆ: ಕಾಫಿ ಬೆಳೆಗಾರ ಆತ್ಮಹತ್ಯೆ
February 7, 2019ಗೋಣಿಕೊಪ್ಪ: ಸಾಲಬಾಧೆಯಿಂದ ಬೇಸತ್ತ ಕಾಫಿ ಬೆಳೆಗಾರರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ವೀರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿಯ ತೈಲ ಗ್ರಾಮದ ಅಜ್ಜಿಕುಟ್ಟಿರ ವಿನೋಜ್ ಎಂಬುವರೇ ತಮ್ಮ ಬಂದೂಕಿನಿಂದ ಗುಂಡು ಹಾರಿಸಿ ಕೊಂಡು ಸಾವಿಗೆ ಶರಣಾಗಿರುವ ಕಾಫಿ ಬೆಳೆ ಗಾರರಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ವಿನೋಜ್ (36) ಅವರು ಮೀನು ಹಿಡಿಯಲು ಹೋಗುವುದಾಗಿ ಮನೆ ಯಲ್ಲಿ ತಿಳಿಸಿ ತೆರಳಿದ್ದಾರೆ. ಆದರೆ ಮನೆ ಸಮೀಪವಿರುವ ಕಾಫಿ ತೋಟದೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಜ್ ಅವರು ಸಾಲಬಾಧೆಯಿಂದ…
ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಸಿಂಚನ
February 7, 2019ನಾಪೋಕ್ಲು: ವರ್ಷದ ಮೊದಲ ವರ್ಷಧಾರೆಗೆ ನಾಪೋಕ್ಲು ಪಟ್ಟಣ ತೊಯ್ದಿದ್ದು, ಗುಡುಗು ಸಹಿತ ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಸೊರಗಿದ್ದ ಕೊಡಗಿನಲ್ಲಿ ಆರೇಳು ತಿಂಗಳ ಬಿಸಿಲ ಝಳದ ಬಳಿಕ, ಇದೀಗ ತಂಪೆರೆದಿದ್ದು, ಜನರು ಹರ್ಷಚಿತ್ತರಾಗಿದ್ದಾರೆ. ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಗಳಲ್ಲಿ ವರುಣನ ಸಿಂಚನವಾಗಿದೆ. ಈ ಮಳೆಯಿಂದ ಕಾಫಿ ಬೆಳೆಗಾರರು ಕಳೆ ಗುಂದುವಂತಾಗಿದ್ದು, ಅಷ್ಟಿಷ್ಟು ಕಾಫಿ ಫಸಲು ದಿಢೀರ್ ಮಳೆಗೆ ಒದ್ದೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ, ಮಳೆಯಾಗು ತ್ತದೆಂಬ ನಿರೀಕ್ಷೆ ಇರಲಿಲ್ಲ….
ಯುವ ಭವನ ಹಸ್ತಾಂತರಕ್ಕಾಗಿ ಯುವ ಒಕ್ಕೂಟದಿಂದ ಶಾಸಕರಿಗೆ ಮನವಿ
February 5, 2019ಮಡಿಕೇರಿ: ಯುವ ಚಟುವಟಿಕೆ ಗಳಿಗಾಗಿ ನಗರದ ಸುದರ್ಶನ ಅತಿಥಿ ಗೃಹದ ರಸ್ತೆ ಸಮೀಪ ಸುಮಾರು 6 ವರ್ಷಗಳ ಹಿಂದೆ ನಿರ್ಮಾಣಗೊಂಡು ಇದೀಗ ಮಹಿಳಾ ಕಾಲೇಜು ವಶದಲ್ಲಿರುವ ಯುವ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಜಿಲ್ಲಾ ಯುವ ಒಕ್ಕೂಟದ ಪ್ರಮುಖರು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸೋಮವಾರಪೇಟೆಯಲ್ಲಿ ಶಾಸಕರ ಕಚೇರಿಯಲ್ಲಿ ರಂಜನ್ ಅವರನ್ನು ಭೇಟಿ ಯಾದ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್…
ಹಸು ಸಾಕಾಣಿಕೆಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣ ಅಭಿಮತ
February 5, 2019ಗೋಣಿಕೊಪ್ಪಲು: ಹಸು ಸಾಕಾಣೆಯಿಂದ ಆರ್ಥಿಕ ಅಭಿವೃದ್ದಿಯನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯ್ತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರ ಜೀವನ ಮಟ್ಟ ಸುಧಾರಿಸಲು ಹೈನುಗಾರಿಕೆ ಉತ್ತಮ ವಾಗಲಿದೆ….
ಶಾಸಕರಿಂದ ಪೊನ್ನಂಗಾಲ ತಮ್ಮೆ ದೇವಸ್ಥಾನದ ರಸ್ತೆ ಉದ್ಘಾಟನೆ
February 5, 2019ವಿರಾಜಪೇಟೆ: ರಸ್ತೆ ಅಭಿವೃದ್ಧಿ ಕಾರ್ಯ ಗಳನ್ನು ಮಾಡುವ ಸಂದರ್ಭ ತೋಟದ ಮಾಲಿಕರು ರಸ್ತೆಗೆ ಸಂಬಾಂದಿಸಿದ ಜಾಗವನ್ನು ಬಿಟ್ಟು ಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಯಾಲು ಪೊನ್ನಂಗಾಲ ತಮ್ಮೆ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಲೋಕೊಪ ಯೋಗಿ ಇಲಾಖೆಯ ವಿಶೇಷ ಘಟಕದಿಂದ ರೂ,10 ಲಕ್ಷದ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ರೂ,5 ಲಕ್ಷದ ಕಾಮಗಾರಿ ಡಾಂಬರೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದ ಶಾಸಕ…
ಗೋಡ್ಸೆಗೆ ಜಯಕಾರ ಹಾಕಿದವರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
February 5, 2019ಮಡಿಕೇರಿ: ಉತ್ತರ ಪ್ರದೇಶದಲ್ಲಿ ಜನವರಿ 30ರಂದು ಮಹಾತ್ಮ ಗಾಂಧಿ ಅವರ ಹತೈ ಘಟನೆಯನ್ನು ಮರುಸೃಷ್ಟಿಸಿ, ನಾಥುರಾಮ್ ಗೋಡ್ಸೆಯ ಪರ ಘೋಷಣೆ ಕೂಗಿದ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪಕ್ಷ ಮುಖಂಡರು ಮತ್ತು ಕಾರ್ಯಕರ್ತರು ಹಿಂದೂ ಮಹಾ ಸಭಾವನ್ನು ನಿಷೇಧಿಸುವಂತೆ ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ…
7ನೇ ಹೊಸಕೋಟೆಯಲ್ಲಿ ಕಾಡಾನೆ ಹಾವಳಿ
February 5, 2019ಸುಂಟಿಕೊಪ್ಪ: ಹಲವು ದಿನಗಳಿಂದ 7ನೇ ಹೊಸಕೋಟೆ ಗ್ರಾಮದಲ್ಲಿ 23 ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ, ಕರಿಮೆಣಸು ತೋಟಗಳನ್ನು ದ್ವಂಸಗೊಳಿಸಿ ಭಾರಿ ಪ್ರಮಾಣದಲ್ಲಿ ತೋಟದ ಮಾಲೀಕರಿಗೆ ನಷ್ಟಪಡಿಸಿರುವ ಬಗ್ಗೆ ವರದಿಯಾಗಿದೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಕೆ.ಎ.ತಿಮ್ಮಯ್ಯ ಎಂಬುವವರಿಗೆ ಸೇರಿದ ಚಿಣ್ಣಿÉ ಎಸ್ಟೇಟಿನ ಕಾಫಿ ತೋಟಕ್ಕೆ ನುಗ್ಗಿದ 23 ಕಾಡಾನೆಗಳ ಹಿಂಡು ಕಾಫಿ ಹಣ್ಣುಗಳನ್ನು ತಿಂದು ಅಲ್ಲೇ ಲದ್ದಿಗಳನ್ನು ಹಾಕಿ ಕಾಫಿ, ಕಾಳುಮೆಣಸು ಗಿಡ ಗಳನ್ನು ದ್ವಂಸಗೊಳಿಸಿದ್ದು ಅಂದಾಜು ಸುಮಾರು ರೂ.70 ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು…
ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಟ್ರಸ್ಟ್ ಮತ್ತು ಸ್ಮಾರಕ’ ನಿರ್ಮಾಣಕ್ಕೆ ಮನವಿ
February 4, 2019ಕುಶಾಲನಗರ: ಕೊಡಗಿನ ಹೆಸ ರಾಂತ ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಗೌರಮ್ಮ ಟ್ರಸ್ಟ್’ ಆರಂಭಿಸುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂ ಧರ ಭೂಪತಿ ಮನವಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವ ಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸುನಿತಾ ಲೋಕೇಶ್ ಅವರು ಬರೆದಿರುವ ‘ಲಲಿತ ಪ್ರಬಂಧ ಪುಸ್ತಕ’ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಮಹಿಳಾ ಸಾಹಿತ್ಯ…