ಮೈಸೂರು: ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿತಗೊಳಿ ಸುವ ವಿಧಾನಗಳನ್ನು ಕಟ್ಟಡ ನಿರ್ಮಾಣ ದಲ್ಲಿ ಅಳವಡಿಸಿಕೊಳ್ಳಲು ಸಿವಿಲ್ ಇಂಜಿನಿ ಯರ್‍ಗಳು ಹಾಗೂ ವಾಸ್ತುಶಿಲ್ಪಿಗಳು ಮುಂದಾಗಬೇಕು ಎಂದು ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್‍ನ ಕಾರ್ಯಕ್ರಮ ನಿರ್ದೇಶಕ ರಜನೇಶ್ ಸರೇನ್ ತಿಳಿಸಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವೈರ್ನ ಮೆಂಟ್ ಹಾಗೂ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ (ಎಸ್‍ಪಿಎ) ಜಂಟಿ ಆಶ್ರಯದಲ್ಲಿ `ನಿರ್ಮಿತ…
ಅಧಿಕಾರಿಗಳೊಂದಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ ಸಭೆ
May 9, 2019ಮೈಸೂರು: ವಿವಿಧ ಇಲಾಖೆಗಳ ಕಾರ್ಯಚಟುವಟಿಕೆ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ವರದಿ ಪಡೆದಿದ್ದು, ಅಗತ್ಯವಿದ್ದರೆ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು. ಮೈಸೂರಿನ ಲೋಕಾಯುಕ್ತ ಎಸ್‍ಪಿ ಕಚೇರಿಯಲ್ಲಿ ಬುಧವಾರ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಮ್ಮ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದಲ್ಲಿ ಸಿದ್ಧಪಡಿಸಿ ರುವ ವರದಿ ಅವಲೋಕಿಸಿ, ಅವರಿಂದ ಅಗತ್ಯವಿದ್ದ ಮಾಹಿತಿ ಪಡೆದಿದ್ದೇನೆ. ಈ ಸಂಬಂಧ ಪರಿಶೀಲಿಸಿ ಅಗತ್ಯವಿದ್ದರೆ ಸ್ವಯಂ ಪ್ರೇರಿತ (ಸುಮೊಟೊ ಪ್ರಕರಣ) ಪ್ರಕರಣ…
ಕೌಟಿಲ್ಯ ವಿದ್ಯಾಲಯದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ.ಎಪಿಜೆ ಅಬ್ದುಲ್ ಕಲಾಂ’ ಪ್ರಶಸ್ತಿ
May 9, 2019ಮೈಸೂರು: ಮೈಸೂರು ಕೌಟಿಲ್ಯ ವಿದ್ಯಾ ಲಯದ ಪ್ರಾಂಶುಪಾಲ ರಾದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗಳನ್ನು ಗುರುತಿಸಿ ನವದೆಹಲಿಯ ‘ಅವಂತಿಕಾ’ ಸಮಕಾಲೀನ ಕಲಾವಿದರು ಮತ್ತು ಬುದ್ಧಿ ಜೀವಿಗಳ ಸಂಘಟನೆ 2019 ನೇ ಸಾಲಿನ ಪ್ರಶಸ್ತಿಗೆ ಡಾ. ಎಲ್.ಸವಿತಾ ಅವರನ್ನು ಆಯ್ಕೆ ಮಾಡಿದೆ. ಮೈಸೂ ರಿನ ಬಹದ್ದೂರ್ ಇನ್ಸ್‍ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‍ನ ಪ್ರ್ರಾಧ್ಯಾಪಕ ಡಾ.ಪ್ರಸಾದ್ ಸಂಸ್ಥೆಯ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು.
ಚಿಪ್ಪು ಹಂದಿ ಮಾರಾಟ: ವ್ಯಕ್ತಿ ಬಂಧನ
May 9, 2019ಮೈಸೂರು: ಅಕ್ರಮ ವಾಗಿ ಕಾಡು ಚಿಪ್ಪು ಹಂದಿ (ಪೆಂಗೋಲಿ ಯನ್) ಮಾರಾಟ ಮಾಡುತ್ತಿದ್ಧ ವ್ಯಕ್ತಿಯನ್ನು ಅರಣ್ಯ ಸಂಚಾರ ದಳ(Forest mobile squad)ದ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸಿದ್ದಯ್ಯ ನಗರ ನಿವಾಸಿ ಲೇಟ್ ಎಲ್ಲಯ್ಯ ಅವರ ಮಗ ಅಣ್ಣಪ್ಪ(30) ಬಂಧಿತ. ಆತನಿಂದ ಎರಡೂವರೆ ಕೆ.ಜಿ. ತೂಕದ ಕಾಡು ಚಿಪ್ಪುಹಂದಿ, ಎರಡು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ಗಳೊಂದಿಗೆ ಕಾರ್ಯಾಚರಣೆ ನಡೆಸಿದ ಮೈಸೂರು ಜಿಲ್ಲೆಯ ಅರಣ್ಯ ಸಂಚಾರಿ ದಳದ ಪ್ರಭಾರ ಸಬ್‍ಇನ್ಸ್‍ಸ್ಪೆಕ್ಟರ್ ಎಂ.ಬಿ. ರಮೇಶ್, ಕೆ.ಆರ್.ನಗರ ತಾಲೂಕು,…
ರಂಗಾಯಣ ಚಿಣ್ಣರ ಮೇಳಕ್ಕೆ ಸಂತಸದ ತೆರೆ
May 9, 2019ಮೈಸೂರು: ಬೆಂಕಿ ಅವಘಡ ನಿಯಂತ್ರಿಸುವ ಮತ್ತು ಮುಂಜಾ ಗೃತಾ ಕ್ರಮಗಳ ಕುರಿತು ಜಾಗೃತಿ, ಓಕುಳಿಯ ರಂಗು, ಡ್ರಮ್ಸ್‍ನ ನಿನಾದಕ್ಕೆ ಚಿಣ್ಣರು ಹೆಜ್ಜೆಹಾಕಿ ಕುಳಿದು ಕುಪ್ಪಳಿಸುವ ಮೂಲಕ ಚಿಣ್ಣರ ಮೇಳಕ್ಕೆ ವರ್ಣರಂಜಿತ ತೆರೆಬಿತ್ತು. ರಂಗಾಯಣದ ಆವರಣದಲ್ಲಿ ಏ.13 ರಿಂದ ಮೇ 8ವರಗೆ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡ ಗಿದ್ದ ಚಿಣ್ಣರು ಬುಧವಾರ, ಗುಜರಿ ಸಂತೆ, ಓಕುಳಿ ಎರಚಾಟ, ಡ್ರಮ್ ಸೌಂಡಿಗೆ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು. ರಂಗಾಯಣದ ಅಂಗಳದಲ್ಲಿ ಮಕ್ಕಳೇ ತಯಾರಿಸಿದ ಫ್ರೂಟ್ ಸಲಾಡ್, ಚಿರು…
ಮೈತ್ರಿ ಸರಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ: ವಸತಿ ಸಚಿವ ಕಿಡಿ
May 9, 2019ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮತ್ತೆ ಕಾಂಗ್ರೆಸ್ ಸಚಿವರು, ಶಾಸಕರು ಕಿಡಿಕಾರಲಾಂಭಿಸಿದ್ದಾರೆ. ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟೂ ಬೇಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೊಸಕೋಟೆಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಸಚಿವರು, ಮೈತ್ರಿ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ನಮ್ಮ ವೇಗಕ್ಕೆ ಪೂರಕ ಸಹಕಾರ ಸಿಗುತ್ತಿಲ್ಲ. ಬಹಳ ಅಡೆತಡೆಗಳಿವೆ. ಸಂಪುಟ ಸಹೋದ್ಯೋಗಿಗಳಲ್ಲಿ ಬಹಳಷ್ಟು ಮಂದಿ ಅತೃಪ್ತಿಯಿಂದಿದ್ದಾರೆ. ಸಚಿವನಾ ದರೂ ನನಗೆ…
ಪರಮ ತೃಪ್ತ ಶರಣರನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ
May 8, 2019ಮೈಸೂರು: ಯಾರು ಪರಮ ತೃಪ್ತಿ ಹೊಂದಿರು ತ್ತಾರೋ ಅವರು ಶರಣರು. ಅಂತಹ ಪರಮ ತೃಪ್ತ ಶರಣರನ್ನು ಯಾರಿಂ ದಲೂ, ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಲಿಂಗಾಯತ ಸಂಘ-ಸಂಸ್ಥೆಗಳ ಒಕ್ಕೂಟ, ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಬಾಹ್ಯ ಸಂಪತ್ತಿನಿಂದ ಇವರು ಶ್ರೀಮಂತರು, ಬಡ ವರು…
ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸಲಿ
May 8, 2019ಮೈಸೂರು: ಆರು ಲಕ್ಷ ರೈತರಿಗೆ ಸಾಲ ಮನ್ನಾ ಪ್ರಯೋಜನ ವಾಗಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಯಲ್ಲಿ ನಂಬಿಕೆಯಿಲ್ಲ. ಹೀಗಾಗಿ ಇದು ವರೆಗೆ ಎಷ್ಟು ಜನರಿಗೆ ಸಾಲಮನ್ನಾ ಮಾಡ ಲಾಗಿದೆ? ಸಾಲಮನ್ನಾ ಯೋಜನೆಯಡಿ ಇದುವರೆಗೆ ಸರ್ಕಾರದಿಂದ ರೈತರಿಗೆ ಆಗಿರುವ ಪ್ರಯೋಜನ ಇನ್ನಿತರ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿ, ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಗ್ರಹಿಸಿದೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ, ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಬುಧವಾರ…
ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ
May 8, 2019ಮೈಸೂರು: ಸರಸ್ವತಿಪುರಂ ನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಮೇ 7 ರಂದು ಬಸವ ಜಯಂತಿಯನ್ನು ಆಚರಿಸ ಲಾಯಿತು. ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇ ಜಿನ ಪ್ರಾಂಶುಪಾಲರಾದ ಟಿ.ಎಸ್. ಶ್ರೀಕಂಠ ಶರ್ಮ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಬಸವಜಯಂತಿಯ ಮಹತ್ವವನ್ನು ತಿಳಿಸಿಕೊಟ್ಟರು. 12ನೇ ಶತಮಾನದಲ್ಲಿ ರಚಿತವಾದ ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯಕ್ಕೆ ದೈವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟಿದೆಯಲ್ಲದೆ, 800 ವರ್ಷಗಳ ಹಿನ್ನೆಲೆಯನ್ನೊಳಗೊಂಡ ಈ ವಚನಗಳು ಇಂದಿಗೂ ಜನ ಸಾಮಾನ್ಯರು…
ವೈದ್ಯನ ಮನೆಯಲ್ಲಿ ಭಾರೀ ಕಳವು ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರಆರೋಪಿಗಳ ಪತ್ತೆಗೆ ತೀವ್ರ ಶೋಧ
May 8, 2019ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಡಾ. ರಾಜೀವ್ ಅವರ ಮನೆಯಲ್ಲಿ ನಡೆದಿದ್ದ ಭಾರೀ ಕಳವು ಪ್ರಕರಣದ ತನಿಖೆ ಯನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಲಾಗಿದೆ. ಏಪ್ರಿಲ್ 11 ರಂದು ಬೆಳಿಗ್ಗೆ ಕಳ್ಳತನ ನಡೆದಿತ್ತು. ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ಸ್ಥಳಕ್ಕೆ ಧಾವಿಸಿ, ಮಹಜರು ನಡೆಸಿದಾಗ ಡಾ. ರಾಜೀವ್ ಅವರ ಮನೆಯ ಮೊದಲ ಮಹಡಿಯ ಮಾಸ್ಟರ್ ಬೆಡ್‍ರೂಮಿನ ಮಂಚದಡಿ ನೆಲದಲ್ಲಿ ಅಳವಡಿಸಿದ್ದ ಮರದ ಬಾಕ್ಸ್ ಒಳಗಿನ ಗಾದ್ರೆಜ್ ಲಾಕರ್ ಒಡೆದು 1.5 ಕೋಟಿ ರೂ. ಮೌಲ್ಯದ 5…










