ಮೈಸೂರು

ತಕ್ಷಣಕ್ಕೆ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ
ಮೈಸೂರು

ತಕ್ಷಣಕ್ಕೆ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ

May 9, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿದರೆ, ಏನು ಮಾಡಕ್ಕಾಗುತ್ತೆ ಎಂದು ಪ್ರಶ್ನಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಅಡ ಗೂರು ಎಚ್. ವಿಶ್ವನಾಥ್, ಹಗಲುಗನಸು ಕಾಣುತ್ತಿರುವ ಸಿದ್ದರಾಮಯ್ಯ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಮಾನ ಮನಸ್ಕರು ಸೇರಿದರೂ ಕಾಂಗ್ರೆಸ್ 113ರ ಮ್ಯಾಜಿಕ್ ಸಂಖ್ಯೆ ಮುಟ್ಟಲ್ಲ ಎಂದರು. ಹಾಗಾಗಿ ತಕ್ಷಣಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ, ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟವರು ಇದನ್ನು ಅರ್ಥ ಮಾಡಿಕೊಳ್ಳಬೇಕು…

‘ಹಾಸನದಲ್ಲಿ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ಹೊಣೆ’
ಮೈಸೂರು, ಹಾಸನ

‘ಹಾಸನದಲ್ಲಿ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ಹೊಣೆ’

May 9, 2019

ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ವಿತರಣಾ ವ್ಯವಸ್ಥೆ ಯಲ್ಲಿ ಲೋಪ ಉಂಟಾಗಿ, ಗೋಲಿಬಾರ್ ಏನಾದರೂ ಆದರೆ, ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾ ವಣೆ ಮುಗಿದು ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿ ಗಾಗಿ ಸರ್ಕಾರ ಜಿಲ್ಲೆಗೆ 8 ಕೋಟಿ ಬಿಡು ಗಡೆ ಮಾಡಿದೆ….

ಪ್ರಾಣಿ ತ್ಯಾಜ್ಯದಿಂದ ಮೀನಿನ ಆಹಾರ, ಬಯೋಗ್ಯಾಸ್, ಕಾಂಪೋಸ್ಟ್  ತಯಾರಿಕೆ
ಮೈಸೂರು

ಪ್ರಾಣಿ ತ್ಯಾಜ್ಯದಿಂದ ಮೀನಿನ ಆಹಾರ, ಬಯೋಗ್ಯಾಸ್, ಕಾಂಪೋಸ್ಟ್ ತಯಾರಿಕೆ

May 9, 2019

ಮೈಸೂರು: ಕಸದಿಂದ ಕಾಸು ಮಾಡುವ ಮಹತ್ವದ ಯೋಜನೆಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಮೈಸೂರು ನಗರದ ಮಾಂಸ, ಕೋಳಿ ಹಾಗೂ ಮೀನಿನ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯ ಬಳಸಿ ಬಯೋಗ್ಯಾಸ್, ಕಾಂಪೋಸ್ಟ್ ಹಾಗೂ ಅಕ್ವಾಫೀಡ್ (ಮೀನಿನ ಆಹಾರ) ತಯಾರಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿ ಸಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಮೈಸೂರು ನಗರದಲ್ಲಿರುವ ಸಾವಿರಾರು ಮಾಂಸ, ಕೋಳಿ ಹಾಗೂ ಮೀನು ಮಾರಾಟ ಮಳಿಗೆಗಳಿಂದ ಪ್ರತೀ ದಿನ ಸುಮಾರು 10 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು…

ಬೆಂಗಳೂರು ಮೆಟ್ರೋ: ಅನುಮಾನಾಸ್ಪದ ವ್ಯಕ್ತಿಗೆ ಪೀಕಲಾಟ!
ಮೈಸೂರು

ಬೆಂಗಳೂರು ಮೆಟ್ರೋ: ಅನುಮಾನಾಸ್ಪದ ವ್ಯಕ್ತಿಗೆ ಪೀಕಲಾಟ!

May 9, 2019

ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ವೇಳೆ ಪರಾರಿಯಾಗಿದ್ದ ಅನುಮಾನಾಸ್ಪದ ವ್ಯಕ್ತಿ ಸ್ವತಃ ಡಿಸಿಪಿ ಕಚೇರಿಗೆ ಬಂದು ನೀಡಿ ನಿಜ ಘಟನೆಯನ್ನು ವಿವರಿಸಿದ್ದಾರೆ. ವೈರಲ್ ಆದ ವಿಡಿಯೋದಲ್ಲಿರುವ ವ್ಯಕ್ತಿ ರಿಯಾಜ್ ಅಹ್ಮದ್(70) ಆಗಿದ್ದು, ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುವ ವ್ಯಕ್ತಿಯಾಗಿದ್ದಾನೆ. ಅವರು ಬೆಂಗಳೂರು ಪಶ್ಚಿಮ ವಿಭಾ ಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರ ವನ್ನು ನೀಡಿದ್ದಾರೆ. ನಾನು ನಾಯಂಡ ಹಳ್ಳಿ ನಿವಾಸಿಯಾಗಿದ್ದು, ಮೆಜೆಸ್ಟಿಕ್ ನಲ್ಲಿ ವಾಚ್ ರಿಪೇರಿ…

ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ
ಮೈಸೂರು

ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ

May 9, 2019

ಮೈಸೂರು: ಮೈಸೂರಿನಲ್ಲಿ ಬುಧವಾರ ಸಂಜೆ ಗಾಳಿ, ಗುಡುಗು ಸಹಿತ ಸುರಿದ ಜೋರು ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತಾದರೂ ಸಂಜೆ 6.30ರವೇಳೆಗೆ ಗಾಳಿ, ಮಿಂಚು-ಗುಡುಗಿನೊಂದಿಗೆ ಜೋರು ಮಳೆ ಸುರಿಯಿತು. ಇದರಿಂದ ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿಬದಿ ವ್ಯಾಪಾರಿಗಳು…

ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ
ಮೈಸೂರು

ಕ್ಯಾನ್ಸರ್ ರೋಗ ದೇಹಾದ್ಯಂತ ಹರಡದಂತೆ ತಡೆಯುವ ಚಿಕಿತ್ಸಾ ವಿಧಾನ ಬೆಳಕಿಗೆ

May 9, 2019

ಪ್ರೊ. ಕೆ.ಎಸ್.ರಂಗಪ್ಪ ನೇತೃತ್ವದ ಮೈಸೂರು ವಿವಿ ವಿಜ್ಞಾನಿಗಳ ತಂಡದಿಂದ ವಿಶ್ವಮಾನ್ಯ ಯಶಸ್ವಿ ಸಂಶೋಧನೆ ಮೈಸೂರು: ಕ್ಯಾನ್ಸರ್ ತಡೆಗೆ ಔಷಧಿಗಳನ್ನು ವಿನ್ಯಾಸ ಗೊಳಿಸುವಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದ ಸಂಶೋಧನಾ ತಂಡ ಯಶಸ್ವಿ ಯಾಗಿ, ವಿಶ್ವ ಮಾನ್ಯತೆಗೆ ಪಾತ್ರವಾಗಿದೆ. ಈ ತಂಡದ `Targeting Hepar anase in Cancer’ ಸಂಶೋಧನಾ ಲೇಖನ ವಿಶ್ವದ ಪ್ರಸಿದ್ಧ `iScience’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ಇದು ಮೈಸೂರಿಗರು ಮಾತ್ರವಲ್ಲ ಇಡೀ ದೇಶವೇ ಹೆಮ್ಮೆ ಪಡುವ…

ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ
ಮೈಸೂರು

ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ

May 9, 2019

ಮೈಸೂರು: ಶತ ಮಾನದಷ್ಟು ಹಳೆಯ ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಅಧಿಕಾರಿ ಭುಜಂಗರಾವ್ ಅವರ ಪ್ರತಿಮೆ ಬುಧವಾರ ಸುರಕ್ಷಿತವಾಗಿ ಸ್ಥಳಾಂತರಗೊಂಡಿತು. ಸುರಕ್ಷಿತ-ಸಂಪ್ರದಾಯಿಕ ವಿಧಾನದ ಮೂಲಕ ಮಂಗಳವಾರ ಅಂಚೆ ವಿತರಕ ಬಸಪ್ಪ ಪ್ರತಿಮೆ ಸ್ಥಳಾಂತರ ಯಶಸ್ವಿಗೊಂಡಿತ್ತು. ಇಂದು ಅದೇ ವಿಧಾನದಲ್ಲಿ ಭುಜಂಗರಾವ್ ಪ್ರತಿಮೆ ಸ್ಥಳಾಂತರಗೊಳಿ ಸಲಾಯಿತು. ಇದೀಗ ಎರಡೂ ಪ್ರತಿಮೆ ಗಳು ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಆರ್‍ಪಿ) ಅಶ್ವಾರೋಹಿ ದಳದ ಆವರಣದಲ್ಲಿ ಸುರಕ್ಷಿತಗೊಂಡಂತಾಗಿದೆ. ಈ ಮೊದಲೇ ಭುಜಂಗರಾವ್ ಪ್ರತಿಮೆಗೆ ಪೇಪರ್ ಹುಲ್ಲು,…

ಸರಗಳ್ಳತನದ ಬಗ್ಗೆ ಜಾಗೃತಿ
ಮೈಸೂರು

ಸರಗಳ್ಳತನದ ಬಗ್ಗೆ ಜಾಗೃತಿ

May 9, 2019

ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಹಿನ್ನಲೆ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವ ದಲ್ಲಿ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜನ ಜಾಗೃತಿ ಮೂಡಿಸಲಾಯಿತು. ಬೆಲೆ ಬಾಳುವ ಒಡವೆಗಳನ್ನು ಧರಿಸಿ ಒಂಟಿಯಾಗಿ ತಿರುಗಾಡಬೇಡಿ, ಚಿನ್ನದ ಆಭರಣಗಳನ್ನು ಧರಿಸಿ ತಿರುಗಾಡುವ ಸಂದರ್ಭದಲ್ಲಿ ಬಟ್ಟೆಯಿಂದ ಮರೆಮಾಡಿ ಕೊಳ್ಳಿ, ನಗ-ನಾಣ್ಯಗಳನ್ನು ಪರ್ಸ್, ವ್ಯಾನಿಟಿ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗುವಾಗ ಜಾಗೃತರಾಗಿರಿ ಎಂಬಿ ತ್ಯಾದಿ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿ ಸುವ ಮೂಲಕ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಪ್ರಮೀಳಾ…

ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ
ಮೈಸೂರು

ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ

May 9, 2019

ಮೈಸೂರು: ಇಂದು ಔಷಧಿಗಳ ಬಳಕೆ ಹೆಚ್ಚಾಗಿದ್ದು, ಔಷಧಿ ಗಳೇ ಆಹಾರವಾಗಿ ಬದಲಾಗಿವೆ ಎಂದು ಆರೋಗ್ಯ ನಿರ್ವಹಣೆ ತಜ್ಞ ಡಾ.ಬಿ.ಆರ್.ಪೈ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮುದ್ರೆಯಿಂದ ನೋವು ನಿರ್ವಹಣೆ’ ಕುರಿತ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವರ್ಷ ದಿಂದ ವರ್ಷಕ್ಕೆ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಮನುಷ್ಯ ಔಷಧಿಯ ದಾಸನಾಗುತ್ತಿದ್ದಾನೆ ಎಂದರು. ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ವುಳ್ಳ ಆಹಾರವನ್ನು ಸೇವಸುವುದರ ಜತೆಗೆ ದೈಹಿಕ ವ್ಯಾಯಾಮಗಳನ್ನು ಮಾಡುವ ಬದಲು ತಕ್ಷಣವೇ…

ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು
ಮೈಸೂರು

ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು

May 9, 2019

ಮೈಸೂರು: ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಯಾವುದೇ ಮಳೆ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯುವ ಕಾರ್ಯ ಆರಂಭಿಸಿದೆ. ಜತೆಗೆ ಮೂರು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ರಚಿಸಿದೆ. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ, ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಮೈಸೂರು ನಗರ ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಆಯುಕ್ತರಾದ ಶಿಲ್ಪಾನಾಗ್ ‘ಮೈಸೂರು ಮಿತ್ರ’ನೊಂ ದಿಗೆ ಬುಧವಾರ ಮಾತನಾಡಿದರು. ಈ ಬಾರಿ ನಗರಪಾಲಿಕೆ ಮಳೆಗಾಲದಲ್ಲಿ ಎದು ರಾಗುವ ಸಮಸ್ಯೆಗಳನ್ನು…

1 1,001 1,002 1,003 1,004 1,005 1,611
Translate »