ಮೈಸೂರು: ಹೂಳೆತ್ತಿಸಿ, ಸಾಕಷ್ಟು ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಮೈಸೂರಿನ ಲಿಂಗಾಂಬುದಿ ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆರೆ ಅಭಿವೃದ್ಧಿಗೊಳಿಸುವಂತೆ ಮೈಸೂರು ವಿಶ್ವವಿದ್ಯಾನಿಲಯ ಬಡಾ ವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಣಯ್ಯ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಚಿವರು, ಸಾವಿರಾರು ಜೀವರಾಶಿಗಳ ಆಶ್ರಯ ತಾಣವಾಗಿರುವ ಕೆರೆಯ ಸುತ್ತಲ ಪ್ರದೇಶದ ನೈಸರ್ಗಿಕ ಸಮ ತೋಲನ ಕಾಪಾಡಲು ಅಂತರ್ಜಲ ವೃದ್ಧಿಸಬೇಕಾಗಿರುವುದರಿಂದ ಕೆರೆಯ ಹೂಳೆತ್ತಿಸಿ, ಅಭಿವೃದ್ಧಿಪಡಿಸಿ…
ಆದಿವಾಸಿ ಮಹದೇವಯ್ಯ ಹತ್ಯೆ ಪ್ರಕರಣ: ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಪ್ರತಿಭಟನೆ
May 7, 2019ಮೈಸೂರು: ಹುಣ ಸೂರು ತಾಲೂಕು ಹನಗೋಡು ಹೋಬಳಿ ಹರಳಹಳ್ಳಿ ಹಾಡಿಯ ಜೇನು ಕುರುಬ ಸಮುದಾಯಕ್ಕೆ ಸೇರಿದ ಆದಿವಾಸಿ ಮಹ ದೇವಯ್ಯ (55) ಹತ್ಯೆ ಪ್ರಕರಣದ ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಕರ್ನಾ ಟಕ ಆದಿವಾಸಿ ರಕ್ಷಣಾ ಪರಿಷತ್ ಆಶ್ರಯ ದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಪರಿಷತ್ ರಾಜ್ಯಾ ಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹರಳಹಳ್ಳಿ ಗ್ರಾಮದ…
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
May 7, 2019ಮೈಸೂರು: ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ರಾಜ್ಯದ ಸಮ್ಮಿಶ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಗೃಹ ಸಚಿವ ಎಂ.ಬಿ.ಪಾಟೀಲ್ ರಾಜಕೀಯ ಎದುರಾಳಿಗಳ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ನಡೆಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತ ನಾಡುವ ಮಾಧ್ಯಮ ಸೇರಿದಂತೆ ಎದುರಾಳಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ದ ಪ್ರಕರಣ ದಾಖಲಿಸುವ ಹುನ್ನಾರ ನಡೆಸಲಾಗುತ್ತದೆ. ಅನೇಕ…
ಗುಣಮಟ್ಟದ ಬೋಧನೆಗೆ ಕೌಶಲ್ಯ ಬೋಧಕರಿಗೆ ಇರಬೇಕು
May 7, 2019ಮೈಸೂರು: ಬೋಧಕರು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ತುಂಬುವುದರೊಂದಿಗೆ ಪರಿಸರ ಕಾಳಜಿ ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ ಹಿರಿಯ ಸಂಪನ್ಮೂಲ ವ್ಯಕ್ತಿ ಡಾ.ಬಿ.ದಿವಾಕರ್ ಸಲಹೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನ ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ (ಎಂಜಿಎನ್‍ಸಿಆರ್‍ಇ)ಯು ಸೋಮವಾರ ಆಯೋಜಿಸಿದ್ದ ‘ಶಾಲೆ ಮತ್ತು ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಅನುಭವದ ಕಲಿಕೆ ಮತ್ತು ಶಿಕ್ಷಣ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ…
ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಕ್ಯಾನ್ಸರ್‍ಗೆ ನಾಂದಿ
May 7, 2019ಮೈಸೂರು: ಕ್ಯಾಲ್ಸಿಯಂ ಕಾರ್ಬೈಡ್‍ನಂತಹ ರಾಸಾಯನಿಕ ಬಳಸಿ ಮಾಗಿಸುವ ಮಾವಿನ ಹಣ್ಣು ಸೇವನೆ ಹಲವು ರೀತಿಯ ಕ್ಯಾನ್ಸರ್‍ಗೆ ಕಾರಣವಾಗ ಲಿದ್ದು, ಈ ಹಿನ್ನೆಲೆಯಲ್ಲಿ ಮಾವು ಮಾಗಿ ಸಲು ಈ ರಾಸಾಯನಿಕ ಬಳಕೆ ನಿಷೇಧಿ ಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯೂ ಆದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು. ಮೈಸೂರಿನ ಕರ್ಜನ್ ಪಾರ್ಕ್ ಆವರಣ ದಲ್ಲಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಮಾವು ಮಾಗಿ ಸುವ ಸಂಬಂಧ ಬೆಳೆಗಾರರು,…
ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ದೃಷ್ಟಿಯಿಂದ ಸುರಕ್ಷಿತವಲ್ಲ
May 7, 2019ಮೈಸೂರು: ಗಾರ್ಮೆಂಟ್ಸ್ ಸೇರಿದಂತೆ ಇತರೆ ಕಾರ್ಖಾನೆಗಳ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಮತ್ತು ವಾಪಸಾಗುವಾಗ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂ ನಿನ ಪ್ರಕಾರ ಸರಿಯಲ್ಲ. ಹಾಗೂ ಸುರಕ್ಷತೆ ದೃಷ್ಟಿಯಿಂ ದಲೂ ಒಳ್ಳೆಯದಲ್ಲ ಎಂದು ಸೋಮವಾರ ಮೈಸೂ ರಿನ ಹೊರ ವಲಯದ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿ ಟೆಡ್‍ನ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು. ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳಾ ಮತ್ತು…
ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ ಅಪಘಾತ: 18 ಮಂದಿಗೆ ಗಾಯಚಾಲಕನ ಅಜಾಗರೂಕ ಚಾಲನೆ ಆರೋಪ
May 7, 2019ಮೈಸೂರು: ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಗೋಬಿ, ಪಾನಿಪುರಿ ಗಾಡಿ ಹಾಗೂ 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿ ಬಳಿ ನಡೆದಿದೆ. ಸೋಮವಾರ ಸಂಜೆ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ ವೊಂದರ ಕಾರ್ಮಿಕರಿದ್ದ ಪ್ಯಾಸೆಂಜರ್ ಆಟೋ, ಕೆಆರ್‍ಎಸ್ ರಸ್ತೆಯಲ್ಲಿ ಹೋಗುತ್ತಿ ದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಈ ಘಟನೆ ನಡೆದಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಕಾರ್ಮಿಕರು, ಗೋಬಿ ಹಾಗೂ ಪಾನಿಪುರಿ ಗಾಡಿ…
ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಚಿನ್ನ ಗೆದ್ದ ಮೈಸೂರಿನ ವಿಕಲಚೇತನ
May 7, 2019ಮೈಸೂರು: ವಿಕಲಚೇತನ ಎಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂಬು ನೀಡುವಂತೆ ಮೈಸೂರಿನ ವ್ಯಕ್ತಿಯೊಬ್ಬರು ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿಕಲಚೇತನತೆ ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಸಾಧನೆಗೈದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಪಟು ಆರ್.ಮಂಜುನಾಥ್. ಇವರು 2019ರ ಏ.15-16ರಂದು ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾ ನಿಲಯದಲ್ಲಿ ನಡೆದ 3ನೇ ಎಟಿಟಿಎಫ್ ಅಂತರ ರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಮಂಜುನಾಥ್, ಜಾವ ಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಡಿಸ್ಕಸ್ ಥ್ರೋನಲ್ಲಿ…
ಬಸವ ಪಥದತ್ತ ನಮ್ಮ ಹೆಜ್ಜೆ
May 7, 2019ಮೈಸೂರು: ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಬಸವ ಪಥದತ್ತ ನಮ್ಮ ಹೆಜ್ಜೆ ಜಾಗೃತಿ ಕಾರ್ಯ ಕ್ರಮವು ಯಶಸ್ವಿಯಾಗಿ ಜರುಗಿತು. ಗುಂಡ್ಲುಪೇಟೆ ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಈ ಕಾರ್ಯಾಗಾರದ ನೇತೃತ್ವ ವಹಿಸಿ, ಜಾಥಾ ಪೂರ್ಣಗೊಳಿಸಿದರು. ಅಗ್ರಹಾರದ ಬಸವ ಪುತ್ಥಳಿಯಿಂದ ಹೊರಟ `ನಮ್ಮ ನಡೆ ಬಸವ ಪಥದೆಡೆ, ಜಾಥಾವು ರಾಮಸ್ವಾಮಿ ವೃತ್ತದಿಂದ ನ್ಯಾಯಾಲಯದ ಮುಂಭಾಗ ತಲುಪಿ ಅಲ್ಲಿಂದ ಅಗ್ರಹಾರದ ವೃತ್ತ, ನೂರ ಒಂದು ಗಣಪತಿ ದೇವಸ್ಥಾನ ಅಲ್ಲಿಂದ ಜೆ.ಎಸ್.ಎಸ್. ಆಸ್ಪತ್ರೆಯ…
ತ.ನಾಡು ದೇವಾಲಯದಲ್ಲಿ ಇಂದು ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ
May 7, 2019ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ತಿರುಚೆಂ ದೂರು ಮುರುಗನ್ ದೇವಾಲಯದಲ್ಲಿ ನಾಳೆ(ಮೇ7) ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಗಳು ಕುಟುಂಬ ಸಮೇತ ರಾಗಿ ನಾಳೆ ಬೆಳಿಗ್ಗೆ 8ಗಂಟೆಗೆ ಬೆಂಗಳೂರಿನಿಂದ ತಮಿಳುನಾಡಿ ನತ್ತ ಪ್ರಯಾಣ ಬೆಳೆಸಲಿದ್ದಾರೆ. ತಮಿಳುನಾಡಿನಲ್ಲಿರುವ ಪ್ರಸಿದ್ಧ ಆರು ಮುರುಗನ್ ದೇವಾಲಯಗಳಲ್ಲಿ ತಿರುಚೆಂದೂರು ಕೂಡ ಒಂದಾಗಿದ್ದು, ಈ ದೇವಾಲಯವು ಸಮುದ್ರದ ತೀರದಲ್ಲಿರುವುದು ವಿಶೇಷ.










