ಮೈಸೂರು

ಇದು ಮಾವಿನ ಹಣ್ಣಿನ ಸುವಾಸನೆ ಸಮಯ
ಮೈಸೂರು

ಇದು ಮಾವಿನ ಹಣ್ಣಿನ ಸುವಾಸನೆ ಸಮಯ

May 6, 2019

ಮೈಸೂರು: ಇದು ಮಾವಿನ ಹಣ್ಣಿನ ಸುವಾಸನೆ ಸೂಸುವ ಸಮಯ. ಆದರೆ ತಾಪಮಾನ ತಂದ ಆಪತ್ತಿನಿಂದ ಇದರ ಸುವಾಸನೆ ಕಳೆದ ವರ್ಷಕ್ಕಿಂತ ಕಡಿಮೆ ಆಗಲಿದೆ ಎಂದು ಅಂದಾಜಿಸಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ನಿರಾಸೆ ಮೂಡಿಸಿದೆ. ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 61,025 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. 2017-18ರ ಸಾಲಿ ನಲ್ಲಿ ಜಿಲ್ಲೆಯಲ್ಲಿ 4,144 ಹೆಕ್ಟೇರ್ ಪ್ರದೇಶ ಗಳಲ್ಲಿ ಮಾವು ಬೆಳೆಯಲಾಗಿದ್ದು, ಒಟ್ಟು 34,701 ಟನ್‍ಗಳಷ್ಟು ಇಳುವರಿ ಲಭಿಸಿತ್ತು ಎಂಬುದನ್ನು ತೋಟಗಾರಿಕೆ ಇಲಾಖೆ…

ಸರಗಳ್ಳರಿಗಾಗಿ ಪೊಲೀಸರ ಮುಂದುವರೆದ ಕಾರ್ಯಾಚರಣೆ
ಮೈಸೂರು

ಸರಗಳ್ಳರಿಗಾಗಿ ಪೊಲೀಸರ ಮುಂದುವರೆದ ಕಾರ್ಯಾಚರಣೆ

May 6, 2019

ಮೈಸೂರು: ಸರಣಿ ಸರಗಳವು ಪ್ರಕರಣದಿಂದ ಕಂಗೆ ಟ್ಟಿರುವ ಪೊಲೀಸರು ಭಾನುವಾರವೂ ಮೈಸೂರಿನ ವಿವಿಧೆಡೆ ಮಫ್ತಿಯಲ್ಲಿ ಗಸ್ತು ನಡೆಸುವುದರೊಂದಿಗೆ ಸರಗಳ್ಳರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರು. ಮೈಸೂರಿನಲ್ಲಿ ಮಂಗಳವಾರ ಹಾಡ ಹಗಲೇ ಇರಾನಿ ತಂಡದ ಕಳ್ಳರು ಎಂದು ಶಂಕಿಸಲಾದ ಇಬ್ಬರು ವಿವಿಧೆಡೆ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಕೊಂಡು 7 ಸ್ಥಳಗಳಲ್ಲಿ ಸರ ಅಪಹರಣ ಮಾಡಿ ಪರಾರಿಯಾಗಿದ್ದರು. ಇದರಿಂದ ಮೈಸೂರು ನಗರದ ವಿವಿಧೆಡೆ 87 ಚೆಕ್ ಪಾಯಿಂಟ್‍ಗಳನ್ನು ಸ್ಥಾಪಿಸಿ ವಾಹನ ತಪಾಸಣೆ ಬಿಗಿಗೊಳಿಸಿದ್ದರು. ಬುಧ ವಾರದಿಂದಲೇ `ಆಪರೇಷನ್ ಫಾಸ್ಟ್ ಟ್ರ್ಯಾಕ್’…

ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ
ಮೈಸೂರು

ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ

May 6, 2019

ಮೈಸೂರು: ಎಲ್ಲೆಲ್ಲೂ ತಳಿರು-ತೋರಣ. ನೆಲ ಸಾರಿಸಿ, ರಂಗೋಲಿ ಬಿಡಿಸಿ, ಮುಂಭಾಗಿಲ ಹೊಸ್ತಿ ಲಲ್ಲಿ ಬಾಳೆಕಂಬವನ್ನಿಟ್ಟು ಹಬ್ಬದ ವಾತಾ ವರಣ ನಿರ್ಮಿಸಿದ್ದ ಶಿಬಿರಾರ್ಥಿಗಳು (ಚಿಣ್ಣರು), ಕಂಸಾಳೆ ನೃತ್ಯ, ಜಾನಪದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಇಂತಹ ಹಬ್ಬದ ವಾತಾವರಣ ಕಂಡು ಬಂದಿದ್ದು ಹೂಟಗಳ್ಳಿಯ ಒಡನಾಡಿಯ ಮಡಿಲು ಆವರಣದಲ್ಲಿ. ವಿ-ಕೇರ್ ಸಂಸ್ಥೆಯು ಒಡನಾಡಿ ಮಡಿಲು ಆವರಣದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ `ಜಾನಪದ ಕಲಾ ಶಿಬಿರ-2019ರ ಕೊನೆಯ ದಿನವಾದ ಭಾನು ವಾರ ಶಿಬಿರಾರ್ಥಿಗಳು, ತಾವೇ ತಳಿರು-ತೋರಣಗಳನ್ನು ಕಟ್ಟಿ. ನೆಲ ಸಾರಿಸಿ, ರಂಗೋಲಿ…

ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ
ಮೈಸೂರು

ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ

May 6, 2019

ಮೈಸೂರು: ಟೈಲರ್ ವೃತ್ತಿ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಟೈಲರ್‍ಗಳೂ ಕಾರ್ಮಿಕರೇ ಆಗಿದ್ದು, ಅಂಥವರನ್ನು ಸನ್ಮಾನಿಸುವ ಮೂಲಕ ಭಾವಸಾರ್ ವಿಜನ್ ಇಂಡಿಯಾ ಕಾರ್ಮಿ ಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದೆ ಎಂದು ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಮೈಸೂರಿನ ಕಬೀರ್ ರಸ್ತೆ ಶ್ರೀ ಪಾಂಡು ರಂಗಸ್ವಾಮಿ ದೇವಸ್ಥಾನದಲ್ಲಿ ಭಾವಸಾರ್ ವಿಜûನ್ ಇಂಡಿಯಾ ಮೈಸೂರು ವಲಯ 108ರ ಘಟಕವು ಭಾನುವಾರ ಆಯೋ ಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು….

ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ
ಮೈಸೂರು

ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ

May 6, 2019

ಮೈಸೂರು: ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ತನ್ನ ಹೆಜ್ಜೆ ಗಳನ್ನು ಮೂಡಿಸುವ ಪ್ರಯತ್ನ ನಡೆಸಿ ರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಇದರ ಅಧ್ಯಕ್ಷರೇ ಕುಲಪತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ವಿಜಯನಗರ ಒಂದನೇ ಹಂತದಲ್ಲಿ ರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನು ವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿ ಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ- ಗೀತ…

ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು
ಮೈಸೂರು

ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು

May 6, 2019

ಮೈಸೂರು: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ `ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)’ ಭಾನುವಾರ ಮೈಸೂರಿನ 29 ಕೇಂದ್ರಗಳಲ್ಲಿ ನಡೆಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಹೆಚ್ ಆರ್‍ಡಿ) ಸ್ಥಾಪಿಸಿರುವ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‍ಟಿಎ) ನೀಟ್ ಪರೀಕ್ಷೆ ನಡೆಸುವ ಹೊಣೆ ಹೊಂದಿದ್ದು, ಮೈಸೂರಿನ 29 ಕೇಂದ್ರಗಳಿಂದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ದೇಶದ 100ಕ್ಕೂ ಹೆಚ್ಚು ನಗರಗಳು ಸೇರಿದಂತೆ ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ,…

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಇಂದಿನಿಂದ ಅಹೋರಾತ್ರಿ ಧರಣಿ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಇಂದಿನಿಂದ ಅಹೋರಾತ್ರಿ ಧರಣಿ

May 6, 2019

ಮೈಸೂರು: ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿ ಗಳ ಒಕ್ಕೂಟದ ವತಿಯಿಂದ ಮೇ 6ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗು ವುದು ಎಂದು ಒಕ್ಕೂಟಗಳ ಸಂಚಾಲಕ ಶೈಲೇಂದ್ರಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಜಿಲ್ಲೆಯ ಹೆಚ್‍ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ 11ರಿಂದ…

ಕೇರ್ಗಳ್ಳಿಯಲ್ಲಿ ಭಾನುವಾರ ಮುಂಜಾನೆ ಬೋನಿಗೆ ಬಿದ್ದ ಚಿರತೆ
ಮೈಸೂರು

ಕೇರ್ಗಳ್ಳಿಯಲ್ಲಿ ಭಾನುವಾರ ಮುಂಜಾನೆ ಬೋನಿಗೆ ಬಿದ್ದ ಚಿರತೆ

May 6, 2019

ಮೈಸೂರು: ಮೈಸೂರಿನ ದಟ್ಟಗಳ್ಳಿ, ಕೇರ್ಗಳ್ಳಿ ಸೇರಿದಂತೆ ವಿವಿ ಧೆಡೆ ಸಾಕುನಾಯಿ ಮತ್ತು ಕುರಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ಮುಂಜಾನೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಸ್ಥಳೀ ಯರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ದಟ್ಟಗಳ್ಳಿ, ಕೇರ್ಗಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಚಿರತೆ ಯೊಂದು ಕಾಣಿಸಿಕೊಳ್ಳುತ್ತಾ ಕುರಿ ಹಾಗೂ ಸಾಕುನಾಯಿಗಳನ್ನು ತಿಂದು ಪರಾರಿ ಯಾಗುತ್ತಿತ್ತು. ಮನೆಯ ಹೊರಗೆ ಕಟ್ಟಿಹಾಕಿದ್ದ ನಾಯಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ, ಹಾಡಹಗಲೇ ಹೊಲದಲ್ಲಿ ಮೇಯುತ್ತಿದ್ದ…

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

May 6, 2019

ಮೈಸೂರು: ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೇ 6ರಂದು ಬೆಳಿಗ್ಗೆ 10ರಿಂದ ಸಂಜೆ 5 ಘಂಟೆಯವರೆಗೆ66/11 ಏಗಿ ಜ್ಯೋತಿ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ಅವಧಿಯ ತುರ್ತು ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತ ಮಾರನಹಳ್ಳಿ, ಶಾಂತಿನಗರ 1 ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯ ನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾನಗರ, ರಾಘ…

ಗೃಹಿಣಿ ನಾಪತ್ತೆ
ಮೈಸೂರು

ಗೃಹಿಣಿ ನಾಪತ್ತೆ

May 6, 2019

ಮೈಸೂರು: ಜಯಪುರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಗೃಹಿಣಿಯೋರ್ವರು ನಾಪತ್ತೆಯಾಗಿದ್ದಾರೆ. ಮೈಸೂರು ತಾಲೂಕಿನ ಮಾರ್ಗಳ್ಳಿಹುಂಡಿ ನಿವಾಸಿ ಸಿದ್ದರಾಮ ಅವರ ಪತ್ನಿ ಲಕ್ಷ್ಮಿ ನಾಪತ್ತೆಯಾದವರು. ಈ ಹಿಂದೆ ಗಂಡ ಹೆಂಡತಿ ಸಂಸಾ ರದ ವಿಚಾರದಲ್ಲಿ ಸಣ್ಣಪುಟ್ಟ ಜಗಳ ನಡೆದು ಎರಡು ಮನೆಯವರು ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಆದರೆ ಏ.30ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಲಕ್ಷ್ಮಿ ಗಂಡನ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದು, ಹೋಗುವಾಗ ಒಡವೆ ಮತ್ತು ಹಣ ತೆಗೆದುಕೊಂಡು ಹೋಗಿದ್ದಾಳೆ ಎಂದು ಆಕೆಯ ತಂದೆ ಮರಿದೊಡ್ಡೇಗೌಡ ದೂರು…

1 1,006 1,007 1,008 1,009 1,010 1,611
Translate »