ಮೈಸೂರು: 2019-20ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೆಣ ಭಾರ ಕಡಿಮೆ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಎನ್‍ಆರ್‍ಎಸ್ ನಾಧನ್ ಅವರು ಮೇ 3ರಂದು ಆದೇಶ ಹೊರಡಿಸಿದ್ದು, ಬ್ಯಾಗ್‍ನ ತೂಕವು ವಿದ್ಯಾರ್ಥಿ ದೇಹದ ಸರಾಸರಿ ತೂಕದ ಶೇ.10 ಮೀರದಂತಿರ ಬೇಕೆಂದು ಸೂಚಿಸಿದ್ದಾರೆ. 1…
ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ‘ಫ್ರೆಂಡ್ಲಿ ಫೈಟ್’ಗೆ ದೋಸ್ತಿ ನಿರ್ಧಾರ
May 5, 2019ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ರಾಜ್ಯದಲ್ಲಿ ಮುಂದೆ ಇನ್ನಾವುದೇ ಚುನಾವಣೆ ಎದುರಾದರೂ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಫ್ರೆಂಡ್ಲಿ ಫೈಟ್ ನಡೆಸಲು ತೀರ್ಮಾನಿಸಿವೆ. ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೂ ಸ್ಥಳೀಯವಾಗಿ ಕಾರ್ಯಕರ್ತರು ಒಬ್ಬರನ್ನೊಬ್ಬರು ತೆಗಳಿಕೊಂಡಿದ್ದು ಪ್ರತಿಪಕ್ಷ ಬಿಜೆಪಿಗೆ ಅನುಕೂಲವಾಯಿತು. ಬಿಜೆಪಿಗೆ ಎಲ್ಲಿ ನೆಲೆ ಇರಲಿಲ್ಲವೋ ಅಂತಹ ಕಡೆ ಉಭಯ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಆ ಪಕ್ಷದ ಅಭ್ಯರ್ಥಿಗೆ ನೆರವಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜ್ಯ ನಾಯಕರು ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದ್ದಲ್ಲದೆ,…
ಹೆಚ್.ಡಿ.ಕೋಟೆ-ಮೈಸೂರು ಗಡಿಯಲ್ಲಿ ಕಾಡಾನೆ ದಾಂಧಲೆಕೂಲಿ ಕಾರ್ಮಿಕ ಬಲಿ
May 5, 2019ಹೆಚ್.ಡಿ.ಕೋಟೆ: ತಾಲೂಕಿನ ಮಾದಾಪುರ ಗ್ರಾಮದ ಬಳಿ ಇಂದು ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೋರ್ವ ಬಲಿಯಾಗಿದ್ದಾನೆ. ಹನುಮಂತಪ್ಪ (35) ಮೃತರು. ಇವರು ಮೂಲತಃ ಯಾದಗಿರಿ ಜಿಲ್ಲೆ, ಸುರಪುರ ತಾಲೂಕು, ಕಕ್ಕೇರಿ ಗ್ರಾಮದವರಾಗಿದ್ದು, ತಾಲೂಕಿನ ಮಾದಾಪುರ ಗ್ರಾಮದ ಬಳಿ ನಾಲೆ ಆಧುನೀಕರಣ ಕಾಮಗಾರಿಗೆ ಕೂಲಿ ಕಾರ್ಮಿಕರಾಗಿ ಬಂದಿದ್ದರು. ಇಂದು ಬೆಳಿಗ್ಗೆ ತಾವು ತಂಗಿದ್ದ ಸ್ಥಳದಿಂದ, ಕಾಮಗಾರಿ ಸ್ಥಳಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಆನೆ ದಾಳಿ ನಡೆಸಿದೆ. ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಿಕೊಂಡು ಬರುತ್ತಿದ್ದ ಗ್ರಾಮಸ್ಥರು, ದಾರಿ ಬಿಡುವಂತೆ ಕೂಗಿದ್ದಾರೆ. ಆದರೆ…
ಮೈಸೂರಿನ ಸಿಐಎಸ್‍ಎಫ್ ಮುಖ್ಯ ಪೇದೆ ಹೃದಯಾಘಾತದಿಂದ ಸಾವು
May 5, 2019ಮೈಸೂರು: ಲೋಕಸಭಾ ಚುನಾವಣಾ ಭದ್ರತಾ ಕರ್ತವ್ಯಕ್ಕೆ ಉತ್ತರ ಪ್ರದೇಶಕ್ಕೆ ನಿಯೋಜಿತರಾಗಿದ್ದ ಮೈಸೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮುಖ್ಯಪೇದೆ ಆರ್.ಕೆ. ಪ್ರಕಾಶ್(48) ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೈಸೂರಿನ ಆರ್‍ಬಿಐನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಹುಂಚಹಾರ್ ಎಂಬ ಸ್ಥಳದಲ್ಲಿ ಚುನಾವಣಾ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇಂದು ಮುಂಜಾನೆ ತೀವ್ರ ಹೃದಯಾಘಾತ ಕ್ಕೊಳಗಾಗಿ ಪ್ರಕಾಶ್ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಇಂದು ಮಧ್ಯ ರಾತ್ರಿ ವೇಳೆಗೆ ಪಾರ್ಥಿವ ಶರೀರ…
ರೋಡ್ ಶೋ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಕಪಾಳಮೋಕ್ಷ
May 5, 2019ನವದೆಹಲಿ: ದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಶನಿವಾರ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ದೆಹಲಿಯ ಮೋತಿನಗರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕೇಜ್ರಿವಾಲ್ ಅವರ ಕಾರನ್ನು ಹತ್ತಿದ ಅಪರಿಚಿತ ಯುವಕ ಸಿಎಂಗೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ತಕ್ಷಣ ಕೇಜ್ರಿವಾಲ್ ಅವರ ರಕ್ಷಣೆಗೆ ಧಾವಿಸಿದ ಬೆಂಬಲಿಗರು, ಯುವಕನನ್ನು ಸೆರೆ ಹಿಡಿದು ಪೆÇಲೀಸರಿಗೊಪ್ಪಿಸಿದ್ದಾರೆ. ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ ಈ ವ್ಯಕ್ತಿ…
ಹೋಮ ಹವನ ಮುಗಿಸಿ ಬರುವಾಗ ಸಿಎಂ ಬೆಂಗಾವಲು ವಾಹನ ಪಲ್ಟಿ
May 5, 2019ಚಿಕ್ಕಮಗಳೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದೇವಾಲಯಕ್ಕೆ ಭೇಟಿ ನೀಡಿ, ಹಾಸನದತ್ತ ಬರುತ್ತಿದ್ದಾಗ ಅವರ ಬೆಂಗಾವಲು ವಾಹನ ಪಲ್ಟಿಯಾಗಿರುವ ಘಟನೆ ಶನಿವಾರ ನಡೆದಿದೆ. ಕೊಪ್ಪ ತಾಲೂಕಿನ ಕಮ್ಮರಡಿ ಬಳಿ, ಕುಡಿನಲ್ಲಿಯ ಸಮೀಪ ದಲ್ಲಿರುವ ಉಮಾ ಮಹೇಶ್ವರ ದೇವಾ ಲಯದಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಡೆದ ಹೋಮ, ಹವನ ಕೈಂಕರ್ಯ ದಲ್ಲಿ ಭಾಗಿಯಾದ ಬಳಿಕ ಹಾಸನಕ್ಕೆ ಪ್ರಯಾಣಿಸುತ್ತಿದ್ದಾಗ ಆಲ್ದೂರು ಬಳಿಯ ಶಂಕರ್ ಫಾಲ್ಸ್ ಸಮೀಪ ಈ ಘಟನೆ ನಡೆದಿದ್ದು, ಬೆಂಗಾವಲು ವಾಹನದಲ್ಲಿದ್ದ ಇನ್ಸ್‍ಪೆಕ್ಟರ್ ಪ್ರದೀಪ್ ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅದೃಷ್ಟವಶಾತ್…
ಆರೋಗ್ಯ, ಸಂತೋಷವಿದ್ದರೆ ಮಾತ್ರ ದೇಶ ಸದೃಢ
May 5, 2019ಮೈಸೂರು: ಭಾರತವನ್ನು ಸದೃಢವಾಗಿ ರೂಪಿಸ ಬೇಕಾದರೆ ದೇಶದಲ್ಲಿ ಆರೋಗ್ಯ ಮತ್ತು ಸಂತೋಷವಿರಬೇಕು. ಇಂತಹ ಸದೃಢ ದೇಶವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಗ್ರಹಾರದ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂ ಗಣದಲ್ಲಿ ಶನಿವಾರ ಆಯೋಜಿಸಿದ್ದ ಫಿಜಿಯೋ ಥೆರಪಿ ಕಾಲೇಜಿನ ದ್ವಿದಶಕ ಸಮಾರಂಭ, 6ನೇ ವರ್ಷದ ಪದವಿ ಪ್ರದಾನ, ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಾಗೂ ಕಾಲೇಜು ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,…
ಮಾಸ್ಟರ್ ಹಿರಣ್ಣಯ್ಯ ಚಿಂತನೆ ಆದರ್ಶಪ್ರಾಯ
May 5, 2019ಮೈಸೂರು: ರಂಗ ಭೂಮಿ ಕ್ಷೇತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ‘ಲಂಚಾವತಾರ’ ನಾಟಕ ಒಂದು ವಿಸ್ಮಯ ಎಂದು ಹಿರಿಯ ಸಾಹಿತಿ ಪೆÇ್ರ. ಎಂ.ಕೃಷ್ಣೇಗೌಡ ಅಭಿಪ್ರಾಯಿಸಿದರು. ಜಿಲ್ಲಾ ಕಸಾಪ ವತಿಯಿಂದ ವಿಜಯ ನಗರ ಮೊದಲ ಹಂತದಲ್ಲಿರುವ ಕಸಾಪ ಭವನದಲ್ಲಿ ಆಯೋಜಿಸಿದ್ದ ಹಿರಿಯ ರಂಗಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಂಚಾವತಾರ ನಾಟಕ 10 ಸಾವಿರಕ್ಕಿಂತ ಹೆಚ್ಚು ಪ್ರದರ್ಶನ ಕಂಡಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆಯೇ ಎಂದು ಮಾಸ್ಟರ್ ಹಿರಣ್ಣಯ್ಯ ಅವರನ್ನು ಕೇಳಿದಾಗ ‘ಹೌದು, ಸಮಾಜದಲ್ಲಿ ಶಾಶ್ವತವಾಗಿ ನಿಂತಿದೆ….
ಪಾರಂಪರಿಕ ವಿದ್ಯುತ್ ಕಂಬ ನಾಪತ್ತೆ
May 5, 2019ಮೈಸೂರು: ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದಲ್ಲಿದ್ದ ಪಾರಂಪರಿಕ ಮಾದರಿ ವಿದ್ಯುತ್ ಕಂಬವೊಂದು ಕಣ್ಮರೆಯಾಗಿದೆ. ಎರಡೂವರೆ ವರ್ಷಗಳ ಹಿಂದೆ ವೃತ್ತವನ್ನು ಅಭಿವೃದ್ಧಿಪಡಿಸಿ, ಜಯ ಚಾಮರಾಜ ಒಡೆಯರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಸುತ್ತಲೂ ರಸ್ತೆ ಬದಿಯಲ್ಲಿ ಪಾರಂಪರಿಕ ಮಾದರಿಯ ಹತ್ತಾರು ವಿದ್ಯುತ್ ಕಂಬಗಳನ್ನು ಅಳವಡಿ ಸಲಾಗಿದೆ. ಇದರಲ್ಲಿ ನೀಲಗಿರಿ ರಸ್ತೆ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆ ನಡುವೆ ಬಸ್ ನಿಲುಗಡೆ ಸ್ಥಳದಲ್ಲಿದ್ದ ಕಂಬವೊಂದು ಕಣ್ಮರೆ ಯಾಗಿದೆ. ಬುಡಮಟ್ಟದ ಭಾಗ ಮಾತ್ರ ಉಳಿದಿದ್ದು, ಯಾವುದೋ ಆಯುಧದಲ್ಲಿ ಕಟ್ ಮಾಡಿರುವಂತೆ…
ಕಾರ್ಮಿಕ ದಿನಾಚರಣೆ ಹಿನ್ನೆಲೆ: ಪೌರ ಕಾರ್ಮಿಕರಿಗೆ ಸನ್ಮಾನ
May 5, 2019ಮೈಸೂರು: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ 45ನೇ ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯ ನಿರತ ಪೌರಕಾರ್ಮಿಕರನ್ನು ಸನ್ಮಾನಿಸಿ, ಶುಭ ಕೋರಲಾಯಿತು. ಮೈಸೂರಿನ ನಿವೇದಿತನಗರದ ಸುಬ್ಬ ರಾವ್ ಉದ್ಯಾನವನದಲ್ಲಿ ಬ್ಯಾಕ್‍ಬೋನ್ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಪೌರಕಾರ್ಮಿಕರ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ಮೈಸೂರು ನಗರವನ್ನು ಸ್ವಚ್ಛವಾಗಿಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸ್ವಚ್ಛನಗರ ಎಂದು ಗುರುತಿಸಿ ಕೊಳ್ಳುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದೆ. ಪ್ರತಿ ದಿನ ಸರಿಯಾದ ಸಮಯಕ್ಕೆ…










