ಮೈಸೂರು

ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ
ಮೈಸೂರು

ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ

May 4, 2019

ಮೈಸೂರು: ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಪ್ರದೇಶದ ಪಾತ್ರ ಪ್ರಮುಖವಾಗಿದ್ದರೂ, ಅಲ್ಲಿ ವಾಸಿ ಸುವ ಯುವ ಸಮುದಾಯದ ಕೌಶಲಾ ಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಮಿಳುನಾಡಿನ ನಿವೃತ್ತ ಡಿಜಿಪಿ ಡಾ.ಎಸ್.ಗಣಪತಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ನವದೆಹ ಲಿಯ ಮಹಾನ್ ಭಾರತ್ ಅಭಿಯಾನ್ ಹಾಗೂ ಮಹಾರಾಜ ಕಾಲೇಜಿನ ಸಂಯುಕ್ತಾಶ್ರಯದಲ್ಲಿ `ಗ್ರಾಮಗಳ ಪ್ರಗ ತಿಯೇ ದೇಶದ ಪ್ರಗತಿ’ ಘೋಷಣೆ ಯೊಂದಿಗೆ ನಗರ-ಗ್ರಾಮೀಣ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ…

ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ
ಮೈಸೂರು

ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ

May 4, 2019

ಬೆಂಗಳೂರು: ರಾಜಕೀಯ ದ್ವೇಷ ಸಾಧನೆಗೆ ಗೃಹಇಲಾಖೆಯನ್ನು ಸಚಿವ ಎಂ.ಬಿ. ಪಾಟೀಲ್  ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಆರೋಪಿಸಿದೆ.ವಿನಾಕಾರಣ ನಮ್ಮ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ನಡೆಯುತ್ತಿದೆ, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಔರಾದ್ಕರ್ ವರದಿ ಜಾರಿಗೊಳಿಸಿ, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು, ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ…

ಚಂಡಮಾರುತ ಸಂತ್ರಸ್ತರಿಗೆ ಸಿಎಫ್‍ಟಿಆರ್‍ಐ, ಡಿಎಫ್‍ಆರ್‍ಎಲ್ ಆಹಾರ
ಮೈಸೂರು

ಚಂಡಮಾರುತ ಸಂತ್ರಸ್ತರಿಗೆ ಸಿಎಫ್‍ಟಿಆರ್‍ಐ, ಡಿಎಫ್‍ಆರ್‍ಎಲ್ ಆಹಾರ

May 4, 2019

ಮೈಸೂರು: ಚಂಡಮಾರುತದಿಂದ ಸಂಕಷ್ಟದಲ್ಲಿರುವ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಸಂತ್ರಸ್ತರಿಗೆ ಆಹಾರ ಪೂರೈಸಲು ಮೈಸೂರಿನ ಪ್ರಮುಖ ಆಹಾರ ಸಂಶೋಧನಾ ಸಂಸ್ಥೆಗಳಾದ ಸಿಎಫ್‍ಟಿಆರ್‍ಐ ಮತ್ತು ಡಿಎಫ್‍ಆರ್‍ಎಲ್ ಮುಂದಾಗಿವೆ. ಸಿಎಫ್‍ಟಿಆರ್‍ಐ ನಿರ್ದೇಶಕ ಡಾ. ಕೆಎಸ್‍ಎಂಎಸ್. ರಾಘವರಾವ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ 1 ಲಕ್ಷ ಆಹಾರ ಪೊಟ್ಟಣವನ್ನು ಚಂಡಮಾರುತ ಸಂತ್ರಸ್ತರಿಗೆ ರವಾನಿಸಲು ಸಿದ್ಧಪಡಿಸುತ್ತಿದ್ದಾರೆ. ಅದೇ ರೀತಿ ಮೂರೂ ರಾಜ್ಯಗಳ ಸಂತ್ರಸ್ತರ ಸ್ಥಳಗಳಿಗೆ ಸುಮಾರು ಎರಡು ಟನ್ ಆಹಾರ ಕಳುಹಿಸಲು ಡಿಎಫ್‍ಆರ್‍ಎಲ್ ಸಂಸ್ಥೆಯು ತಯಾರಿ ನಡೆಸುತ್ತಿದೆ. ಈ ಕುರಿತು…

ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ
ಮೈಸೂರು

ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ

May 4, 2019

ಮೈಸೂರು: ವಿಶ್ವ ವ್ಯಂಗ್ಯ ಚಿತ್ರಗಾರರ ದಿನಾಚರಣೆ ಅಂಗವಾಗಿ ವ್ಯಂಗ್ಯ ಚಿತ್ರಗಾರ ಎಂ.ವಿ.ನಾಗೇಂದ್ರ ಬಾಬು ಅವರ ವ್ಯಂಗ್ಯ ಚಿತ್ರಗಳ ಎರಡು ದಿನದ ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು. ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ 12ನೇ ಕ್ರಾಸ್‍ನ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಬ್ಯಾಂಟರ್‍ಬಾಬು ಪಬ್ಲಿಕೇಷನ್ಸ್ ವತಿಯಿಂದ ಈ ಪ್ರದರ್ಶನ ಹಮ್ಮಿಕೊಳ್ಳ ಲಾಗಿದೆ. ಮೇ 5ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಬಹುದು. ಇಂದು ಉದ್ಘಾಟನೆ ನೆರವೇರಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮನಸ್ಸಿಗೆ ಮುದ…

ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ
ಮೈಸೂರು

ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ

May 4, 2019

ಮೈಸೂರು:-ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಮೆಣಸಿನಕಾಯಿ ಚೀಲಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂ ರಿನ ನಾಚನಹಳ್ಳಿ ಪಾಳ್ಯ, 8ನೇ ಕ್ರಾಸ್ ನಿವಾಸಿ ಸೈಯ್ಯದ್ ಇಕ್ಬಾಲ್ ಅವರ ಮಗ ಅಮ್ಮದ್ ಪಾಷಾ (31) ಬಂಧಿತ ಆರೋಪಿಯಾಗಿದ್ದು, ಆತನಿಂದ 1,60,000 ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ 5 ಮೆಣಸಿನಕಾಯಿ ಚೀಲವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ರಂಗ ನಾಥ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ…

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ

May 4, 2019

ಮೈಸೂರು: ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟದ ವತಿಯಿಂದ ಮೇ 6ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಒಕ್ಕೂಟಗಳ ಸಂಚಾಲಕ ಶೈಲೇಂದ್ರ ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಜಿಲ್ಲೆಯ ಹೆಚ್‍ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ 11ರಿಂದ ಅಹೋರಾತ್ರಿ…

ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿದ್ಯುತ್ ವ್ಯತ್ಯಯ

May 4, 2019

ಮೈಸೂರು: ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಮೇ 6ರ ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರ 1ನೇ ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾ ನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆಗೆ ಕೇಂದ್ರ ಶಿಫಾರಸು
ಮೈಸೂರು

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆಗೆ ಕೇಂದ್ರ ಶಿಫಾರಸು

May 4, 2019

ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ರಾತ್ರಿ ಸಂಚಾರ ನಿರ್ಬಂಧವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಮತ್ತೆ ಶಿಫಾರಸು ಮಾಡಿದ್ದು ಕೇರಳ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಸರ ಮತ್ತು ಅರಣ್ಯ ಸಚಿವಾಲಯ ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿ-212ರಲ್ಲಿ ರಾತ್ರಿ ವೇಳೆ ಸಂಚಾರದ ನಿಷೇಧ ನಿರ್ಬಂಧದ ಯಥಾಸ್ಥಿತಿ ಕಾಯ್ದುಕೊಳ್ಳು ವಂತೆ ಕಾರ್ಯದರ್ಶಿಗಳ ಸಮಿತಿ ಮಾಡಿರುವ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ…

ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ
ಮೈಸೂರು

ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ

May 4, 2019

ಮೈಸೂರು: ವರ್ಷದ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಲಭ್ಯವಿದ್ದು, ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಇನ್ನೂ ಕೃಷಿ ಚಟುವಟಿಕೆ ಚುರುಕುಗೊಂಡಿಲ್ಲ. ಪ್ರಸಕ್ತ ವರ್ಷದ ಜನವರಿಯಿಂದ ಈ ದಿನದವರೆಗೆ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಕಳೆದ ವರ್ಷದ ಈ ದಿನದವರೆಗಿನ ಪ್ರಮಾಣಕ್ಕಿಂತ ಸುಮಾರು 21 ಮಿ.ಮೀ ಹೆಚ್ಚಾಗಿ ರುವುದು ಸಮಾಧಾನದ ಸಂಗತಿಯಾಗಿದೆ. ಪ್ರಸಕ್ತ ಜನವರಿಯಿಂದ ಮೇ 3ರ ವರೆಗೆ 92.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಜನವರಿಯಲ್ಲಿ 1.3,…

200 ಕಿ.ಮೀ. ವೇಗದಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಿದ ‘ಫೊನಿ’ ಚಂಡಮಾರುತ
ಮೈಸೂರು

200 ಕಿ.ಮೀ. ವೇಗದಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಿದ ‘ಫೊನಿ’ ಚಂಡಮಾರುತ

May 4, 2019

ಭುವನೇಶ್ವರ: ನಿರೀಕ್ಷೆ ಯಂತೆಯೇ ಫೊನಿ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಚಂಡಮಾರುತದ ವೇಗಕ್ಕೆ ಪುರಿ ಕಡಲ ತೀರದಲ್ಲಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸೇವೆ ಸ್ಥಗಿತವಾಗಿದೆ. ಬರೋಬ್ಬರಿ ಪ್ರತೀ ಗಂಟೆಗೆ 200 ಕಿ.ಮೀ ವೇಗದಲ್ಲಿ ಫೊನಿ ಚಂಡಮಾರುತ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಅಲ್ಲಲ್ಲಿ ಭೂ ಕುಸಿತವಾದ ವರದಿಯಾಗಿದೆ. ಚಂಡ ಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಕೇರಳದಲ್ಲಿ ಮುಂಜಾನೆ ಯಿಂದಲೇ ಭಾರಿ ಪ್ರಮಾಣದ ಬಿರು ಗಾಳಿ ಸಹಿತ ಮಳೆ…

1 1,009 1,010 1,011 1,012 1,013 1,611
Translate »