ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ
ಮೈಸೂರು

ಬಿಜೆಪಿ ಕಾರ್ಯಕರ್ತರ ಹತ್ತಿಕ್ಕುವ ಯತ್ನಕ್ಕೆ ಖಂಡನೆ

May 4, 2019

ಬೆಂಗಳೂರು: ರಾಜಕೀಯ ದ್ವೇಷ ಸಾಧನೆಗೆ ಗೃಹಇಲಾಖೆಯನ್ನು ಸಚಿವ ಎಂ.ಬಿ. ಪಾಟೀಲ್  ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಆರೋಪಿಸಿದೆ.ವಿನಾಕಾರಣ ನಮ್ಮ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ನಡೆಯುತ್ತಿದೆ, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನ ಪರಿಷತ್ತಿನಲ್ಲಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಔರಾದ್ಕರ್ ವರದಿ ಜಾರಿಗೊಳಿಸಿ, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು, ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ ಮನಸ್ಸು ಕೊಟ್ಟು ಅಕಾರಣ ವಾಗಿ ನಮ್ಮ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರು ವುದನ್ನು ಖಂಡಿಸುತ್ತೇನೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸಂಘ ಪರಿವಾರದ ಕಾರ್ಯಕರ್ತ ಮಹೇಶ ಹೆಗಡೆಯವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಶೃತಿ ಬೆಳ್ಳಕ್ಕಿ ಅವರನ್ನು ವಿನಾಕಾರಣ ಬಂಧಿಸಿ ಅವಮಾನಿ ಸಿದ್ದು, ರಾತ್ರೋರಾತ್ರಿ ಅಜಿತ್ ಶೆಟ್ಟಿ ಹೇರಂಜೆಯನ್ನು ಬಂಧಿಸಿ ಭಯೋತ್ಪಾದಕರ ಮಾದರಿಯಲ್ಲಿ ನಡೆಸಿ ಕೊಂಡಿದ್ದು, ಹೇಮಂತ್ ಕುಮಾರ್ ಮತ್ತು ಶಾರದ ಬಂಧನ, ಒಟ್ಟಾರೆ, ಲಿಂಗಾಯತ ಧರ್ಮದ ವಿಚಾರವಾಗಿ ಬಂದಿರುವ ಸುದ್ದಿಗೆ ಇಡೀ ಕರ್ನಾಟಕದ ಬಹುತೇಕ ಬಿಜೆಪಿ ಕಾರ್ಯ ಕರ್ತರನ್ನು ಗುರುತಿಸಿ ಬಂಧಿಸಿರುವ ತಮ್ಮ ನಡವಳಿಕೆ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ ಎಂದಿದ್ದಾರೆ.

ಸರ್ಕಾರ ನಡೆಸುವವರನ್ನು ಟೀಕಿಸುವ, ವಿಮರ್ಶಿಸುವ ಹಕ್ಕು ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಇದೆ. ಬಿಜೆಪಿ ಕಾರ್ಯಕರ್ತರು ಇದನ್ನೇ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕಾರಣದ ದ್ವೇಷವನ್ನು ಸೃಷ್ಟಿಸಿ, ವಿಪಕ್ಷದವರನ್ನು ತುರ್ತು ಪರಿಸ್ಥಿತಿಯ ಮಾದರಿ ಯಲ್ಲಿ ನಡೆಸಿಕೊಳ್ಳುವ ನಡವಳಿಕೆಯನ್ನು ಗೃಹ ಸಚಿವರು ಸುಧಾರಿಸಿಕೊಂಡು ಅಮಾಯಕರನ್ನು ತಕ್ಷಣ ಬಿಡುಗಡೆ ಗೊಳಿಸದಿದ್ದರೆ ನಿಮ್ಮ ವಿರುದ್ಧವೇ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹತ್ತಾರು ಗಂಭೀರ ಆರೋಪ ಹೊತ್ತ, ಕೊಲೆ ಸುಲಿಗೆಯಲ್ಲಿ ಭಾಗಿಯಾಗಿದ್ದ ಮಂಗಳೂರಿನ 110 ಜನರ ವಿರುದ್ಧ ಹೂಡಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಇದೇ ವೇಳೆ ಬಿಜೆಪಿ ಕಾರ್ಯ ಕರ್ತರ ಮೇಲೆ ಅತ್ಯಾಚಾರದಂತಹ ಸುಳ್ಳು ಆರೋಪ ಗಳನ್ನು ಹೊರಿಸಿ ಜೈಲಿಗಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳೇ, ನಿಮ್ಮ ಪಂಚಕರ್ಮ ಚಿಕಿತ್ಸೆ ಪೂರ್ಣವಾಗಿದ್ದರೆ, ಈಗಲಾದರೂ ರಾಜ್ಯದಲ್ಲಿನ ಸ್ಥಿತಿಯ ಕಡೆ ಗಮನ ಕೊಡಿ. ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಒತ್ತಾಯಿಸಿದರು.

ಬಿಜೆಪಿಗೆ ವೋಟ್ ಹಾಕಿದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿಕೆ ನೀಡಿರುವುದು ಹುಚ್ಚುತನದ ಪರಮಾವಧಿ, ಮುಖ್ಯಮಂತ್ರಿಗಳು, ಈ ಸಚಿವರನ್ನು ಕರೆದು ಸರಿಯಾಗಿ ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದರು.

Translate »