ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ
ಮೈಸೂರು

ಗ್ರಾಮೀಣ ಯುವಕರಿಗೆ ಕೌಶಲಾಭಿವೃದ್ಧಿಗೆ ಆದ್ಯತೆ ಅವಶ್ಯ

May 4, 2019

ಮೈಸೂರು: ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಪ್ರದೇಶದ ಪಾತ್ರ ಪ್ರಮುಖವಾಗಿದ್ದರೂ, ಅಲ್ಲಿ ವಾಸಿ ಸುವ ಯುವ ಸಮುದಾಯದ ಕೌಶಲಾ ಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಮಿಳುನಾಡಿನ ನಿವೃತ್ತ ಡಿಜಿಪಿ ಡಾ.ಎಸ್.ಗಣಪತಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ನವದೆಹ ಲಿಯ ಮಹಾನ್ ಭಾರತ್ ಅಭಿಯಾನ್ ಹಾಗೂ ಮಹಾರಾಜ ಕಾಲೇಜಿನ ಸಂಯುಕ್ತಾಶ್ರಯದಲ್ಲಿ `ಗ್ರಾಮಗಳ ಪ್ರಗ ತಿಯೇ ದೇಶದ ಪ್ರಗತಿ’ ಘೋಷಣೆ ಯೊಂದಿಗೆ ನಗರ-ಗ್ರಾಮೀಣ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ ದಿಂದ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ರಾಷ್ಟ್ರೀಯ ಆರ್ಥಿಕ ಪುನರ್ವಸತಿ, ಗ್ರಾಮೀಣ ನಿವಾಸಿಗಳಿಗೆ ನಗರದ ಸಂಪರ್ಕ ಕಲ್ಪಿಸುವುದು. ಸರ್ಕಾರ ದಿಂದ ಆಗದಂತಹ ಕಾರ್ಯಗಳನ್ನು ನೆರ ವೇರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ದೇಶದ ಜನಸಂಖ್ಯೆಯಲ್ಲಿ ಶೇ.67ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸು ತ್ತಿದ್ದಾರೆ. ಹೆಚ್ಚಿನ ಪ್ರಮಾಣದ ಯುವಕ-ಯುವತಿಯರು ಗ್ರಾಮೀಣ ಪ್ರದೇಶದಲ್ಲೇ ಇದ್ದಾರೆ. ಈ ಯುವ ಸಮುದಾಯಕ್ಕೆ ಕೌಶಲಾಭಿವೃದ್ಧಿಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಕೌಶಲ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರೆ, ದೇಶ ಮತ್ತಷ್ಟು ಪ್ರತಿಭೆಗಳನ್ನು ಕಾಣುತ್ತಿತ್ತು ಎಂದರು.

ವಿಶ್ವದಲ್ಲಿಯೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರಿದ್ದಾರೆ. ಚೀನಾದಲ್ಲಿ 39 ವರ್ಷ ಒಳಪಟ್ಟವರು, ಜಪಾನ್‍ನಲ್ಲಿ 48 ವರ್ಷ ಒಳಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೌಶಲಾಭಿ ವೃದ್ಧಿ ಅಲ್ಲಿನ ಜನರಲ್ಲಿರುವುದರಿಂದ ಆ ದೇಶ ಪ್ರಗತಿಯಲ್ಲಿ ಇತರೆ ದೇಶಗಳಿಗೆ ಮಾದರಿಯಾಗಿವೆ. ನಮ್ಮ ದೇಶದಲ್ಲಿಯೂ ಯೋಜನೆಗಳನ್ನು ಜಾರಿಗೆ ತಂದು ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರೆ ಇನ್ನಷ್ಟು ಪ್ರಗತಿ ಸಾಧಿಸ ಬಹುದು ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶದೊಂದಿಗೆ ಸ್ವಾತಂತ್ರ್ಯ ಪಡೆದ ಚಿಕ್ಕ ದೇಶ ದಕ್ಷಿಣಾ ಕೊರಿಯಾ ಕೌಶಲಾಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿದೆ. ಆ ದೇಶದ ಯುವಕರಲ್ಲಿ ಕೌಶ ಲಾಭಿವೃದ್ಧಿ ವೃದ್ಧಿಸಿಕೊಳ್ಳುವ ಸಾಮಥ್ರ್ಯ ಹೆಚ್ಚಾಗಿದ್ದರೂ, ಕೇವಲ ಶೇ.2.5ರಷ್ಟು ಯುವಕರ ಮಾತ್ರ ಕೌಶಲಾಭಿವೃದ್ಧಿ ವೃದ್ಧಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಹುಂಡೈ ಕಾರ್ ಕಂಪನಿಯ ಕಾರ್ಖಾನೆ ಯಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ್ದ 17 ವರ್ಷದೊಳಗಿನ ಯುವಕರೇ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಪರಿ ಶ್ರಮದ ಮೂಲಕ ತಮಗೆ ನೀಡಿರುವ ಟಾರ್ಗೆಟ್ ಗಳನ್ನು ನಿಗದಿತ ಸಮಯಕ್ಕೆ ಮುಂಚಿತ ವಾಗಿಯೇ ಪೂರೈಸುವ ಮೂಲಕ ತಮ್ಮ ಕೌಶಲ್ಯದ ಸಾಮಥ್ರ್ಯವನ್ನು ಸಾಬೀತು ಪಡಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಎಲ್ಲೆಡೆ ಯುವಕರಿಗೆ ಕೌಶಲಾಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದರೆ ಸಾಧನೆ ಮಾಡು ವುದು ಸುಲಭವಾಗಲಿದೆ ಎಂದರು.

ನವದೆಹಲಿಯಲ್ಲಿ ಆರಂಭವಾಗಿರುವ ಈ `ಗ್ರಾಮೀಣ ಪರಿವರ್ತನೆ ಗ್ರಾಮೋ ದಯ’ ಅಭಿಯಾನವು ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆಸಲಾಗಿದೆ. ರಾಜ್ಯದಲ್ಲಿಯೂ ಈ ಯೋಜನೆಯನ್ನು ವಿಸ್ತರಿಸುವ ಸಲುವಾಗಿ ಮಹಾನ್ ಭಾರತ್ ಅಭಿಯಾನ್ ಸಂಸ್ಥೆ ಈ ಅಭಿಯಾನ ಆರಂಭಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಗ್ರಾಮೀಣ ಪರಿ ವರ್ತನೆ ಗ್ರಾಮೋದಯ ಅಭಿಯಾನದ ಮೈಸೂರು ವಿಭಾಗದ ಅಧ್ಯಕ್ಷೆ ಹೆಚ್.ಎಂ. ವಸಂತಮ್ಮ, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತ, ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಅನಿತಾ ವಿಮಲ್ ಬ್ರಾಗ್ಸ್, ಮೇಲುಕೋಟೆಯ ಎಂ.ಕೆ.ಲಕ್ಷ್ಮಿತಾತಾಚಾರ್ಯ, ನಾರಾ ಯಣಾಚಾರ್ಯ, ನಾರ್ವೆಯ ಅಲೆನ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

 

Translate »