ಗುಂಡ್ಲುಪೇಟೆ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.9 ಕೋಟಿ ಮೌಲ್ಯದ 7.6 ಕೆ.ಜಿ. ಚಿನ್ನ ವಶ
ಮೈಸೂರು

ಗುಂಡ್ಲುಪೇಟೆ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.9 ಕೋಟಿ ಮೌಲ್ಯದ 7.6 ಕೆ.ಜಿ. ಚಿನ್ನ ವಶ

May 4, 2019

ಬೆಂಗಳೂರು: ಅಕ್ರಮವಾಗಿ ಚಿನ್ನಾ ಭರಣ ಸಾಗಿ ಸುತ್ತಿದ್ದ ವ್ಯಕ್ತಿ ಯೋರ್ವ ನನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗುಂಡ್ಲುಪೇಟೆ ಮೂಲದ ಮೊಹಮ್ಮದ್ ಆಯೂಬ್ ಅಬ್ದುಲ್ ಬಂಧಿತ ಆರೋಪಿ. ಈತನಿಂದ ಸುಮಾರು 1.19 ಕೋಟಿ ಮೌಲ್ಯದ 7.6 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ಆಯೂಬ್ ಅಬ್ದುಲ್ ಇತ್ತೀಚೆಗೆ ದುಬೈಗೆ ತೆರಳಿದ್ದ. ಈತ ದುಬೈನಿಂದ ಬರು ವಾಗ ಕಬ್ಬಿಣದ ಉಪಕರಣಗಳ ನಡುವೆ ಚಿನ್ನಾ ಭರಣ ಬಚ್ಚಿಟ್ಟುಕೊಂಡು ಬಂದಿದ್ದ ಎನ್ನ ಲಾಗಿದೆ. ದುಬೈನಿಂದ ಬಂದಿಳಿದ ಈತನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಚಿನ್ನಾಭರಣ ಪತ್ತೆಯಾಗಿದೆ. ಈತ ಚಿನ್ನವನ್ನು ಎಲ್ಲಿಗೆ ತೆಗೆದು ಕೊಂಡು ಹೊರಟಿದ್ದ ಎಂಬುದು ವಿಚಾರಣೆ ಯಿಂದ ತಿಳಿಯಬೇಕಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Translate »