ಶಿಕ್ಷಕರ ತ್ರೈಮಾಸಿಕ ವೇತನ ಬಿಡುಗಡೆ
ಮೈಸೂರು

ಶಿಕ್ಷಕರ ತ್ರೈಮಾಸಿಕ ವೇತನ ಬಿಡುಗಡೆ

May 4, 2019

ಮೈಸೂರು: 2019-20ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಶಿಕ್ಷಕರ ತ್ರೈಮಾಸಿಕ ವೇತನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಸರ್ವ ಶಿಕ್ಷಣ ಅಭಿಯಾನದ 31,688.75 ಲಕ್ಷ ರೂ., ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 73.50 ಲಕ್ಷ ರೂ., ಆದರ್ಶ ಶಾಲೆಗಳ 3,571.74 ಲಕ್ಷ ರೂ. ಸೇರಿದಂತೆ ಒಟ್ಟು 35,333.99 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.

ಆರ್ಥಿಕ ಇಲಾಖೆಯ ಆದೇಶದನ್ವಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ(ಯೋಜನೆ) ಎಸ್.ಆರ್.ಎಸ್.ನಾನ್ ಆದೇಶದಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ವೇತನ ಪಾವತಿಗೆ 2019-20ನೇ ಸಾಲಿನಲ್ಲಿ ಒದಗಿಸಿದ ಅನುದಾನಕ್ಕೆ ಅಗತ್ಯಾನುಸಾರ ಜಿಲ್ಲಾವಾರು/ ತಾಲೂಕುವಾರು ಹಂಚಿಕೆ ಮಾಡಲು 1ನೇ ತ್ರೈಮಾನಸಿಕ ಅನುದಾನ ಬಿಡುಗಡೆ ಮಾಡಲು ಆದೇಶಿಸಿದೆ ಎಂದು ತಿಳಿಸಿದ್ದಾರೆ.

Translate »