ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ
ಮೈಸೂರು

ನಾಗೇಂದ್ರಬಾಬು ವ್ಯಂಗ್ಯಚಿತ್ರಗಳ ಪ್ರದರ್ಶನ

May 4, 2019

ಮೈಸೂರು: ವಿಶ್ವ ವ್ಯಂಗ್ಯ ಚಿತ್ರಗಾರರ ದಿನಾಚರಣೆ ಅಂಗವಾಗಿ ವ್ಯಂಗ್ಯ ಚಿತ್ರಗಾರ ಎಂ.ವಿ.ನಾಗೇಂದ್ರ ಬಾಬು ಅವರ ವ್ಯಂಗ್ಯ ಚಿತ್ರಗಳ ಎರಡು ದಿನದ ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು.

ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ 12ನೇ ಕ್ರಾಸ್‍ನ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಬ್ಯಾಂಟರ್‍ಬಾಬು ಪಬ್ಲಿಕೇಷನ್ಸ್ ವತಿಯಿಂದ ಈ ಪ್ರದರ್ಶನ ಹಮ್ಮಿಕೊಳ್ಳ ಲಾಗಿದೆ. ಮೇ 5ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಬಹುದು.
ಇಂದು ಉದ್ಘಾಟನೆ ನೆರವೇರಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮನಸ್ಸಿಗೆ ಮುದ ನೀಡುವ, ಸಮಾಜ ತಿದ್ದುವ ಅತ್ಯಂತ ಸೂಕ್ಷ್ಮಕಲೆ ವ್ಯಂಗ್ಯಚಿತ್ರ. ಕಳೆದ 30 ವರ್ಷಗಳಿಂದ ಸತತವಾಗಿ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿರುವ ನಾಗೇಂದ್ರಬಾಬು ಅವರು ಸಾಧನೆಯ ಹಾದಿ ಕ್ರಮಿಸಿದ್ದು, ಇದು ಸಾಮಾನ್ಯ ಸಂಗತಿಯಲ್ಲ ಎಂದು ಶ್ಲಾಘಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜ ಪೇಯಿ ಮಾತನಾಡಿ, ಸಾಹಿತ್ಯದಲ್ಲಿ ಬೀಚಿ ಹಾಗೂ ನಾಟಕದಲ್ಲಿ ಮಾಸ್ಟರ್ ಹಿರಣ್ಣಯ್ಯ ವ್ಯಂಗ್ಯವಾಗಿ ಸಮಾಜಕ್ಕೆ ಚಾಟಿ ಬೀಸು ತ್ತಿದ್ದರು. ಅದೇ ರೀತಿ ನಾಗೇಂದ್ರಬಾಬು ತಮ್ಮ ಮೊನಚಾದ ವ್ಯಂಗ್ಯಚಿತ್ರಗಳ ಮೂಲಕ ಮನೆಮಾತಾಗಿದ್ದಾರೆ. ಇಲ್ಲಿ ಅನಾವರಣ ಗೊಂಡಿರುವ ಅವರ ವ್ಯಂಗ್ಯಚಿತ್ರಗಳು ಸಮಾಜದ ಲೋಪ-ದೋಷಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿವೆ. ಇಂತಹ ವೈವಿಧ್ಯಮಯ ವ್ಯಂಗ್ಯಚಿತ್ರ ಗಳನ್ನು ನೀಡಿರುವ ನಾಗೇಂದ್ರಬಾಬು ರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಪರಂಪರೆ ಮುಂದುವರೆ ಸುವಂತಾಗಲಿ ಎಂದು ಆಶಿಸಿದರು.

ಶಿಲ್ಪಕಲಾವಿದ ಎಲ್.ಶಿವಲಿಂಗಯ್ಯ ಮಾತನಾಡಿ, ವ್ಯಂಗ್ಯಚಿತ್ರಗಳ ಗೂಢಾರ್ಥ ವನ್ನು ಸಮಾಜ ಅರಿಯಬೇಕು. ಪ್ರಸ್ತುತ ದಲ್ಲಿ ಬಹುತೇಕ ಮುದ್ರಣ ಮಾಧ್ಯಮಗಳು ಈ ಕಲೆಯ ಬಗ್ಗೆ ನಿರ್ಲಕ್ಷ್ಯ ತಾಳಿವೆ. ಇದರಿಂದ ವ್ಯಂಗ್ಯ ಚಿತ್ರಕಲೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.

ರಾಜಕೀಯ, ಸಾಮಾಜಿಕ ವ್ಯಂಗ್ಯಚಿತ್ರ ಹಾಗೂ ವ್ಯಂಗ್ಯಭಾವಚಿತ್ರ ಎಂಬ ಮೂರು ವಿಭಾಗಗಳಲ್ಲಿ ಪ್ರದರ್ಶನವಿದ್ದು, ಒಟ್ಟು 34 ವ್ಯಂಗ್ಯ ಚಿತ್ರಗಳು ಪ್ರದರ್ಶನ ದಲ್ಲಿವೆ. ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರ ಬಾಬು, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »