ಮೈಸೂರು: ಖಾಲಿ ಜಾಗ ಸ್ವಚ್ಛಗೊಳಿಸುವ ವೇಳೆ ಗುದ್ದಲಿಗೆ ಸಿಲುಕಿ ಗಾಯಗೊಂಡಿದ್ದ ನಾಗರಹಾವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಡಲಾಗಿದೆ. ರಸ್ತೆ ಡಾಂಬರ್ ಕೆಲಸ ಮಾಡುವ ಒರಿಸ್ಸಾ, ಮಹಾರಾಷ್ಟ್ರ ಮೂಲದ 15 ಮಂದಿ ಕೂಲಿ ಕಾರ್ಮಿ ಕರು ಉಳಿದುಕೊಳ್ಳಲು ಲಲಿತಾ ದ್ರಿಪುರ ಬಳಿ ರಿಂಗ್ ರಸ್ತೆಯ ಲ್ಲಿನ ಮುಡಾಕ್ಕೆ ಸೇರಿದ ಖಾಲಿ ಜಾಗವನ್ನು ಶನಿವಾರ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ನಾಗರಹಾವೊಂದು ಗುದ್ದಲಿ ಏಟಿಗೆ ಸಿಲುಕಿ ಗಾಯಗೊಂಡಿದೆ. ಇದರಿಂದ ಗಾಬರಿಗೊಂಡ ಚಂದ್ರು ಎಂಬುವರು ಉರಗ ಸಂರಕ್ಷಕ ಕೆಂಪರಾಜು ಅವರಿಗೆ ಕರೆ…
ರಸ್ತೆಗಿಳಿದಿವೆ ಹುಚ್ಚು ಕುದುರೆಗಳು!
May 5, 2019ಮೈಸೂರು: ಜೀವ ಬಲಿಯಾಗಿ ದ್ದರೂ ಬಿಡಾಡಿ ಕುದುರೆಗಳಿಗೆ ಕಡಿವಾಣ ಹಾಕುವಲ್ಲಿ ಮೈಸೂರು ನಗರಪಾಲಿಕೆ ನಿರ್ಲಕ್ಷ್ಯ ತಳೆದಿರುವುದು ವಿಷಾದನೀಯ. ಮೈಸೂರಿನ ಮಾನಸಗಂಗೋತ್ರಿ ಎಸ್‍ಜೆ ಸಿಇ ಮುಖ್ಯ ರಸ್ತೆಯಲ್ಲಿ ನಾಲ್ಕೈದು ಬಿಡಾಡಿ ಕುದುರೆಗಳು ಸ್ವಚ್ಛಂದವಾಗಿ ಅಡ್ಡಾಡುತ್ತಿದ್ದವು. ಕೆಲ ಹೊತ್ತು ಫುಟ್ ಪಾತ್‍ನಲ್ಲಿ ಹುಲ್ಲು ಮೇದು ಮತ್ತೆ ರಸ್ತೆಗೆ ಇಳಿಯುತ್ತಿದ್ದವು. ವಾಹನ ಹತ್ತಿರ ಬರುತ್ತಿದ್ದಂತೆ ಕುದುರೆಗಳು ಅಡ್ಡಾದಿಡ್ಡಿ ಯಾಗಿ ಓಡಾಡುತ್ತಿದ್ದವು. ಇದರಿಂದ ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಭಯದಿಂದಲೇ ಸಂಚರಿಸುತ್ತಿದ್ದರು. ಈ ರಸ್ತೆಯಲ್ಲಿ ಆಗಾಗ್ಗೆ ಕುದುರೆಗಳು ಓಡಾಡುತ್ತವೆ. ಇವು…
ಪರಿಚಯಸ್ಥರ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ
May 5, 2019ಮೈಸೂರು: ಪರಿಚಯಿಸ್ತರ ಮನೆಗೆ ಬಂದಿದ್ದ ಗೃಹಿಣಿಯೋರ್ವರು ತಮ್ಮ ಸಹೋದರಿ ಮತ್ತು ಮಗಳನ್ನು ಬಿಟ್ಟು ನಾಪತ್ತೆ ಯಾದ ಘಟನೆ ಮೈಸೂ ರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿ ಯಿಂದ ತಡವಾಗಿ ವರದಿ ಯಾಗಿದೆ. ಸುಮಾರು 38 ವರ್ಷದ ಮಹಾಲಕ್ಷ್ಮಿ ಎಂಬುವರು ತಮ್ಮ ಸಹೋದರಿ ಜಿ.ಸುಮಾ ಮತ್ತು ಮಗಳು ಗಾನವಿ ಮೂರ್ತಿ (5) ಅವರೊಂದಿಗೆ ಪರಿ ಚಯಸ್ಥರಾದ ಟಿ.ಆರ್.ಸಂಧ್ಯಾ ಅವರ ಮನೆಗೆ ಬಂದಿದ್ದರು. 2018ರ ಡಿ.6ರಂದು ರಾತ್ರಿ 10 ಗಂಟೆಗೆ ಸುಮಾರಿನಲ್ಲಿ ಮಹಾ ಲಕ್ಷ್ಮಿ ಅವರ ಮೊಬೈಲ್‍ಗೆ ಕರೆ…
ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಬೋಧನಾ ತರಗತಿ ಸೌಲಭ್ಯ
May 4, 2019ಮೈಸೂರು: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳು ದೃತಿಗೆಡದೆ ಮಾನಸಿಕ ಗಟ್ಟಿತನ ಹಾಗೂ ಆತ್ಮವಿಶ್ವಾಸದಿಂದ ಪೂರಕ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವತ್ತ ಗಮನ ಹರಿಸಬೇಕು ಎಂದು ಲೇಖಕ ಬನ್ನೂರು ಕೆ.ರಾಜು ಸಲಹೆ ನೀಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ, ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರು ಹಾಗೂ ಪ್ರಾಂಶು ಪಾಲರ ಸಂಘಟನೆಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ…
ಮೇ 7, 8ರಂದು ಮೈಸೂರಲ್ಲಿ ಅರ್ಥಪೂರ್ಣ ಬಸವ ಜಯಂತಿ ಆಚರಣೆ
May 4, 2019ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೇ 7 ಮತ್ತು 8ರಂದು ಬಸವ ಜಯಂತಿ ಆಯೋಜಿಸಲಾಗಿದೆ ಎಂದು ಬಸವ ಬಳಗಗಳ ಒಕ್ಕೂಟದ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಸ್.ಎಂ.ಜಂಬುಕೇಶ್ವರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ವರ್ಷಗಳಿಂದ ಮೈಸೂರಿನಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಜಯಂ ತಿಗೆ ಜಿಲ್ಲಾಡಳಿತದ ಸಹಯೋಗ ಇರುತ್ತಿತ್ತು. ಆದರೆ ಈ…
ಖ್ಯಾತ ಗಾಯಕಿ ಎಸ್.ಜಾನಕಿ ಡಿಸ್ಚಾರ್ಜ್
May 4, 2019ಮೈಸೂರು: ಸೊಂಟದ ಮೂಳೆ ಮುರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕಿ ಗಾನ ಕೋಗಿಲೆ ಎಸ್.ಜಾನಕಿ ಅವರು ಇಂದು ಮಧ್ಯಾಹ್ನ ಬಿಡುಗಡೆಯಾದರು. ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದ ಜಾನಕಿ ಅವರು ಹೊಸಲು ದಾಟುವಾಗ ಕಾಲಿ ಜಾರಿ ಬಿದ್ದು ಸೊಂಟದ ಮೂಳೆ ಮುರಿದ ಕಾರಣ 5 ದಿನಗಳ ಹಿಂದೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3.45ಗಂಟೆ ವೇಳೆ ಡಿಸ್ಚಾರ್ಜ್ ಮಾಡಲಾ ಯಿತು. ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ನಿತಿನ್ ಅವರು…
ಇಂದು ಸೇತುರಾಂ `ದಹನ’ ನಾಟಕ ಪ್ರದರ್ಶನ
May 4, 2019ಮೈಸೂರು: ಬೆಂಗಳೂರಿನ ರಂಗ ಮಿತ್ರರು ತಂಡದ ಕಲಾ ವಿದರು ನಾಳೆ(ಮೇ 5) ಸಂಜೆ 4 ಮತ್ತು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರ ದಲ್ಲಿ ಹಿರಿಯ ರಂಗಕರ್ಮಿ ಹಾಗೂ ಕಿರುತೆರೆ ಕಲಾವಿದ ಸೇತುರಾಂ ಅವರ ಕಥೆಯನ್ನಾಧರಿಸಿದ `ದಹನ’ ನಾಟಕ ಪ್ರದರ್ಶಿಸಲಿದ್ದಾರೆ. ರಂಗರೂಪ ಮತ್ತು ನಿರ್ದೇಶನ ರಾಘವೇಂದ್ರ ನಾಯಕ್ ಅವರದ್ದಾಗಿದೆ. ಸ್ವಘೋಷಿತ ಬುದ್ದಿ ಜೀವಿ ಹೆÀಚ್.ಬಿ.ಆರ್. ಹೆಸರಿನ ಪಾತ್ರ ಧಾರಿಯೊಬ್ಬ ಹೆಣ್ಣಿನ ಮನಸ್ಸು ಹೊಕ್ಕಿ, ಆಕೆಯ ಅಂತರಾಳದ ನೋವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ…
ಮಾಸ್ಟರ್ ಹಿರಣ್ಣಯ್ಯರ ಮೈಸೂರು ಕಾರ್ಯಕ್ರಮದಲ್ಲಿ ನಡೆದ ದಾಂಧಲೆ ಸಾರಸ್ವತ ಲೋಕಕ್ಕೆ ಕಪ್ಪುಚುಕ್ಕೆ
May 4, 2019ಮೈಸೂರು: ಕಳೆದ ಐದು ವರ್ಷಗಳ ಹಿಂದೆ ಮೈಸೂ ರಿನ ಸಾರ್ವಜನಿಕ ಸಮಾರಂಭವೊಂದ ರಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೇಳಿP Éಯನ್ನು ವಿರೋಧಿಸಿ ನಡೆಸಿದ ದಾಂಧಲೆ, ಮೈಸೂರಿನ ಸಾರಸ್ವತ ಲೋಕಕ್ಕೊಂದು ಕಪ್ಪುಚುಕ್ಕೆ ಎಂದು ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನಾಗನವ ಕಲಾ, ಸಾಹಿತ್ಯ ವೇದಿಕೆ ವತಿಯಿಂದ ಇಂದು ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನುಡಿನಮನ ಸಮಾ ರಂಭದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ತಮ್ಮ ಮೊನಚು ಮಾತಿನಿಂದ ರಾಜ್ಯದ ಆಡಳಿತ…
ಶಿಕ್ಷಕರ ತ್ರೈಮಾಸಿಕ ವೇತನ ಬಿಡುಗಡೆ
May 4, 2019ಮೈಸೂರು: 2019-20ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಶಿಕ್ಷಕರ ತ್ರೈಮಾಸಿಕ ವೇತನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸರ್ವ ಶಿಕ್ಷಣ ಅಭಿಯಾನದ 31,688.75 ಲಕ್ಷ ರೂ., ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 73.50 ಲಕ್ಷ ರೂ., ಆದರ್ಶ ಶಾಲೆಗಳ 3,571.74 ಲಕ್ಷ ರೂ. ಸೇರಿದಂತೆ ಒಟ್ಟು 35,333.99 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆರ್ಥಿಕ ಇಲಾಖೆಯ ಆದೇಶದನ್ವಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ…
ಗುಂಡ್ಲುಪೇಟೆ ವ್ಯಕ್ತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.9 ಕೋಟಿ ಮೌಲ್ಯದ 7.6 ಕೆ.ಜಿ. ಚಿನ್ನ ವಶ
May 4, 2019ಬೆಂಗಳೂರು: ಅಕ್ರಮವಾಗಿ ಚಿನ್ನಾ ಭರಣ ಸಾಗಿ ಸುತ್ತಿದ್ದ ವ್ಯಕ್ತಿ ಯೋರ್ವ ನನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಂಡ್ಲುಪೇಟೆ ಮೂಲದ ಮೊಹಮ್ಮದ್ ಆಯೂಬ್ ಅಬ್ದುಲ್ ಬಂಧಿತ ಆರೋಪಿ. ಈತನಿಂದ ಸುಮಾರು 1.19 ಕೋಟಿ ಮೌಲ್ಯದ 7.6 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ಆಯೂಬ್ ಅಬ್ದುಲ್ ಇತ್ತೀಚೆಗೆ ದುಬೈಗೆ ತೆರಳಿದ್ದ. ಈತ ದುಬೈನಿಂದ ಬರು ವಾಗ ಕಬ್ಬಿಣದ ಉಪಕರಣಗಳ ನಡುವೆ ಚಿನ್ನಾ ಭರಣ ಬಚ್ಚಿಟ್ಟುಕೊಂಡು ಬಂದಿದ್ದ ಎನ್ನ ಲಾಗಿದೆ. ದುಬೈನಿಂದ ಬಂದಿಳಿದ…










