ಇಂದು ಸೇತುರಾಂ `ದಹನ’ ನಾಟಕ ಪ್ರದರ್ಶನ
ಮೈಸೂರು

ಇಂದು ಸೇತುರಾಂ `ದಹನ’ ನಾಟಕ ಪ್ರದರ್ಶನ

May 4, 2019

ಮೈಸೂರು: ಬೆಂಗಳೂರಿನ ರಂಗ ಮಿತ್ರರು ತಂಡದ ಕಲಾ ವಿದರು ನಾಳೆ(ಮೇ 5) ಸಂಜೆ 4 ಮತ್ತು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರ ದಲ್ಲಿ ಹಿರಿಯ ರಂಗಕರ್ಮಿ ಹಾಗೂ ಕಿರುತೆರೆ ಕಲಾವಿದ ಸೇತುರಾಂ ಅವರ ಕಥೆಯನ್ನಾಧರಿಸಿದ `ದಹನ’ ನಾಟಕ ಪ್ರದರ್ಶಿಸಲಿದ್ದಾರೆ. ರಂಗರೂಪ ಮತ್ತು ನಿರ್ದೇಶನ ರಾಘವೇಂದ್ರ ನಾಯಕ್ ಅವರದ್ದಾಗಿದೆ. ಸ್ವಘೋಷಿತ ಬುದ್ದಿ ಜೀವಿ ಹೆÀಚ್.ಬಿ.ಆರ್. ಹೆಸರಿನ ಪಾತ್ರ ಧಾರಿಯೊಬ್ಬ ಹೆಣ್ಣಿನ ಮನಸ್ಸು ಹೊಕ್ಕಿ, ಆಕೆಯ ಅಂತರಾಳದ ನೋವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ ಬರೆ ಯುವ ಈತನಿಗೆ, ಅಕ್ಷತಾ ಎನ್ನುವ ಅಭಿಮಾನಿಯೊಬ್ಬಳು, ತನ್ನ ಸಮಸ್ಯೆ ಹೇಳಿಕೊಳ್ಳಬೇಕು, ಮನೆಗೆ ಬರುವಿರಾ? ಎಂದು ಬರುವ ಫೋನ್ ಕರೆಯಿಂದ ಶುರುವಾಗುವ ಕಥಾವಸ್ತು ಮುಂದೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಪ್ರಪಂಚದ ಕಣ್ಣಿಗೆ ಬಲು ಸಭ್ಯನಾಗಿರುವ ಹೆಚ್.ಬಿ.ಆರ್.ನ ಬಳಿ ತನ್ನ ಸಾಂಸಾರಿಕ ಜೀವನದ ಸಮಸ್ಯೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾ, ತನ್ನನ್ನು ತಾನು ಕಂಡು ಕೊಳ್ಳಲು ಪ್ರಯತ್ನಿಸುವ ಅಕ್ಷತಾ ಒಂದು ಕಡೆ. ಹೊರ ಜಗತ್ತಿಗೆ ಸ್ತ್ರೀ ಸಂವೇದನಾ ಬರಹಗಳಿಂದಲೇ ಬಲು ಪ್ರಸಿದ್ಧನಾದರೂ, ಅಂತರಾತ್ಮದಲ್ಲಿ ಗಂಡು ಎಂಬ ಅಹಂಕಾರ, ಅವಕಾಶ ಸಿಕ್ಕರೆ ಹೆಣ್ಣಿನ ಅಸಹಾಯಕತೆ ದುರುಪಯೋಗಪಡಿಸಿಕೊಳ್ಳಲು ಹವಣಿಸುವ ಹೆಚ್.ಬಿ.ಆರ್. ಇನ್ನೊಂದು ಕಡೆ. ಇವರಿಬ್ಬರ ನಡುವಿನ ಸಂಭಾಷಣೆಗಳಲ್ಲಿ ಅಕ್ಷತಾ, ಹೆÀಚ್.ಬಿ.ಆರ್.ನ ಬರಹಗಳಲ್ಲಿ ಕಂಡಿದ್ದ ದೇವರನ್ನು ಆತನ ನಿಜರೂಪದಲ್ಲೂ ಕಂಡುಕೊಳ್ಳಲು ಪ್ರಯತ್ನಿ ಸಿದರೆ, ಹೆಚ್.ಬಿ.ಆರ್. ದೇವರ ಪಟ್ಟ ಕಳಚಿಕೊಂಡು, ಸಾಮಾನ್ಯ ಮನುಷ್ಯನಂತೆ ಸುಖ ಪಡೆಯಲು ಪ್ರಯತ್ನಿಸುವನು. ಈ ಎಲ್ಲಾ ಸನ್ನಿವೇಶಗಳನ್ನು ಹೊಂದಿರುವ ಕಥಾವಸ್ತುವನ್ನು `ದಹನ’ ನಾಟಕ ಹೊಂದಿದ್ದು, ನಾಳೆ ಎರಡು ಪ್ರದರ್ಶನವಿದೆ. ಹೆಚ್ಚಿನ ಮಾಹಿತಿಗಾಗಿ 9945655155, 9886711381 ಸಂಪರ್ಕಿಸಬಹುದಾಗಿದೆ.

Translate »