ಖ್ಯಾತ ಗಾಯಕಿ ಎಸ್.ಜಾನಕಿ ಡಿಸ್ಚಾರ್ಜ್
ಮೈಸೂರು

ಖ್ಯಾತ ಗಾಯಕಿ ಎಸ್.ಜಾನಕಿ ಡಿಸ್ಚಾರ್ಜ್

May 4, 2019

ಮೈಸೂರು: ಸೊಂಟದ ಮೂಳೆ ಮುರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕಿ ಗಾನ ಕೋಗಿಲೆ ಎಸ್.ಜಾನಕಿ ಅವರು ಇಂದು ಮಧ್ಯಾಹ್ನ ಬಿಡುಗಡೆಯಾದರು. ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದ ಜಾನಕಿ ಅವರು ಹೊಸಲು ದಾಟುವಾಗ ಕಾಲಿ ಜಾರಿ ಬಿದ್ದು ಸೊಂಟದ ಮೂಳೆ ಮುರಿದ ಕಾರಣ 5 ದಿನಗಳ ಹಿಂದೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3.45ಗಂಟೆ ವೇಳೆ ಡಿಸ್ಚಾರ್ಜ್ ಮಾಡಲಾ ಯಿತು. ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ನಿತಿನ್ ಅವರು ಎಸ್.ಜಾನಕಿ ಅವ ರಿಗೆ ಚಿಕಿತ್ಸೆ ನೀಡಿದ್ದರು.

ಈ ಸಂದರ್ಭ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಾನಕಿ ಅವರು, ಕನ್ನಡ ನಾಡಿನ ಮಕ್ಕಳ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ಇಡೀ ಕನ್ನಡದ ಮಕ್ಕಳು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಅವರ ಆಶಯ ದಂತೆ ನಾನು ಚೆನ್ನಾಗಿಯೇ ಇರ್ತೀನಿ ಎಂದರು.

ನಾನು ಸ್ನೇಹಿತರ ಮನೆಗೆ ಬಂದಿದ್ದೆ. ಅಲ್ಲಿ ಬಾಗಿಲ ಹೊಸಲು ದಾಟುವಾಗ ಜಾರಿ ಬಿದ್ದಿದ್ದೆ. ತುಂಬಾ ನೋವಾಯ್ತು ಆಗ. ನಂತರ ಆಸ್ಪತ್ರೆಗೆ ಸೇರಿಸಿ ಆಪರೇಷನ್ ಮಾಡಿಸಿದ್ದಾರೆ ಎಂದ ಜಾನಕಿ ಅವರು, ನನಗೆ ಮೈಸೂರು ತುಂಬಾ ಇಷ್ಟ. ಯಾಕೆ ಅಂತ ಗೊತ್ತಿಲ್ಲ. ನನಗೆ ಮೈಸೂರಿನ ಜೊತೆ ಜನ್ಮಾಂ ತರದ ಋಣವಿದೆ. ಅದಕ್ಕೆ ಈ ಊರೆಂದರೆ ನನಗೆ ಇಷ್ಟ. ಸ್ವಲ್ಪ ದಿನ ಮೈಸೂರಲ್ಲೇ ವಿಶ್ರಾಂತಿ ಪಡೆಯುತ್ತೇನೆ ಎಂದರು.

Translate »