ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಬೋಧನಾ ತರಗತಿ ಸೌಲಭ್ಯ
ಮೈಸೂರು

ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಬೋಧನಾ ತರಗತಿ ಸೌಲಭ್ಯ

May 4, 2019

ಮೈಸೂರು: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳು ದೃತಿಗೆಡದೆ ಮಾನಸಿಕ ಗಟ್ಟಿತನ ಹಾಗೂ ಆತ್ಮವಿಶ್ವಾಸದಿಂದ ಪೂರಕ ಪರೀಕ್ಷೆ ಎದುರಿಸಿ ಉತ್ತೀರ್ಣರಾಗುವತ್ತ ಗಮನ ಹರಿಸಬೇಕು ಎಂದು ಲೇಖಕ ಬನ್ನೂರು ಕೆ.ರಾಜು ಸಲಹೆ ನೀಡಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ, ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಗಳ ಉಪನ್ಯಾಸಕರು ಹಾಗೂ ಪ್ರಾಂಶು ಪಾಲರ ಸಂಘಟನೆಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳ ಉಚಿತ ಬೋಧನಾ ತರಗತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ಕಾರಣ ಗಳಿಂದ ಹಲವು ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳೆಲ್ಲ ದಡ್ಡ ರಲ್ಲ, ಉತ್ತೀರ್ಣರಾದವರೆಲ್ಲ ಬುದ್ಧಿವಂತ ರಲ್ಲ. ಇದನ್ನು ಪೋಷಕರು ಹಾಗೂ ವಿದ್ಯಾರ್ಥಿ ಗಳು ಅರಿತುಕೊಳ್ಳಬೇಕು. ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಜೀವನವಲ್ಲ. ತರ ಗತಿಯಲ್ಲಿನ ಕಲಿಕೆ ಸಾಂಪ್ರದಾಯಿಕ ವಿಧಾನ. ನಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವು ದರೊಂದಿಗೆ ಜ್ಞಾನವನ್ನು ವಿಕಸನಗೊಳಿಸಿ ಕೊಳ್ಳುವತ್ತ ಗಮನ ಹರಿಸಬೇಕು. ಪರೀಕ್ಷೆಯ ಭಯ, ಒತ್ತಡ ಹಾಗೂ ಕೆಲ ಮಾನಸಿಕ ಕಾಯಿಲೆಗಳು ಅನುತ್ತೀರ್ಣರಾಗಲು ಕಾರಣ. ಹಾಗಾಗಿ, ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ಅನುತ್ತೀರ್ಣರಾಗಿದ್ದಕ್ಕೆ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವ ಮೂಲಕ ಉತ್ತರ ಕಂಡು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ ಮಾತ ನಾಡಿ, ಮೈಸೂರು ಜಿಲ್ಲೆಯಲ್ಲಿ 130ಕ್ಕೂ ಹೆಚ್ಚು ಕಾಲೇಜುಗಳಿವೆ. ಈ ಎಲ್ಲಾ ಕಾಲೇಜು ಗಳ ಅನುತ್ತೀರ್ಣ ವಿದ್ಯಾರ್ಥಿಗಳು ಈ ವಿಶೇಷ ತರಗತಿ ಸೌಲಭ್ಯವನ್ನು ಸದುಪ ಯೋಗಪಡಿಸಿಕೊಳ್ಳಬೇಕು. ಬುದ್ಧಿಶಕ್ತಿಗೂ, ಅನುತ್ತೀರ್ಣರಾಗುವುದಕ್ಕೂ ಸಂಬಂಧ ವಿಲ್ಲ. ನಮ್ಮ ಪ್ರಯತ್ನ, ಕಲಿಕೆ ಮುಖ್ಯ. ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಲಾಭ ಬಯಸದೇ, ವಿದ್ಯಾರ್ಥಿ ಗಳ ಭವಿಷ್ಯದ ದೃಷ್ಠಿಯಿಂದ ಈ ಕಾರ್ಯ ಕ್ರಮವನ್ನು ನಡೆಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಅಖಿಲ ಕರ್ನಾ ಟಕ ಪದವಿ ಪೂರ್ವ ಕಾಲೇಜುಗಳ ಉಪ ನ್ಯಾಸಕರ ಹಿತರಕ್ಷಣಾ ಸಂಘದ ರಾಜ್ಯಾ ಧ್ಯಕ್ಷ ಕಾಡ್ನೂರು ಶಿವೇಗೌಡ, ಪಿಯು ಒಕ್ಕೂ ಟದ ಅಧ್ಯಕ್ಷ ನಾಗಮಲ್ಲೇಶ್, ಗೌರವಾಧ್ಯಕ್ಷ ಎಸ್.ಬಾಲಸುಬ್ರಹ್ಮಣ್ಯಂ, ಹೆಮ್ಮರಗಾಲದ ಸ.ಪ.ಪೂ.ಕಾಲೇಜು ಪ್ರಾಚಾರ್ಯ ಕೆ.ಎಂ. ಜಗದೀಶ್, ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಸ.ಪ.ಪೂ.ಕಾಲೇಜು ಪ್ರಾಂಶು ಪಾಲ ಹೆಚ್.ಎನ್.ಸತೀಶ್‍ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »