ಪರಿಚಯಸ್ಥರ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ
ಮೈಸೂರು

ಪರಿಚಯಸ್ಥರ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆ

May 5, 2019

ಮೈಸೂರು: ಪರಿಚಯಿಸ್ತರ ಮನೆಗೆ ಬಂದಿದ್ದ ಗೃಹಿಣಿಯೋರ್ವರು ತಮ್ಮ ಸಹೋದರಿ ಮತ್ತು ಮಗಳನ್ನು ಬಿಟ್ಟು ನಾಪತ್ತೆ ಯಾದ ಘಟನೆ ಮೈಸೂ ರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿ ಯಿಂದ ತಡವಾಗಿ ವರದಿ ಯಾಗಿದೆ. ಸುಮಾರು 38 ವರ್ಷದ ಮಹಾಲಕ್ಷ್ಮಿ ಎಂಬುವರು ತಮ್ಮ ಸಹೋದರಿ ಜಿ.ಸುಮಾ ಮತ್ತು ಮಗಳು ಗಾನವಿ ಮೂರ್ತಿ (5) ಅವರೊಂದಿಗೆ ಪರಿ ಚಯಸ್ಥರಾದ ಟಿ.ಆರ್.ಸಂಧ್ಯಾ ಅವರ ಮನೆಗೆ ಬಂದಿದ್ದರು. 2018ರ ಡಿ.6ರಂದು ರಾತ್ರಿ 10 ಗಂಟೆಗೆ ಸುಮಾರಿನಲ್ಲಿ ಮಹಾ ಲಕ್ಷ್ಮಿ ಅವರ ಮೊಬೈಲ್‍ಗೆ ಕರೆ ಬಂದು ಅವರು ಯಾರನ್ನೋ ಭೇಟಿ ಮಾಡಬೇ ಕೆಂದು ಹೋದವರು ಮತ್ತೆ ಮನೆಗೆ ವಾಪ ಸ್ಸಾಗಿಲ್ಲ ಎಂದು ಟಿ.ಆರ್.ಸಂಧ್ಯಾ ಪೊಲೀಸ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈಕೆಯ ಬಗ್ಗೆ ಮಾಹಿತಿ ಇರುವವರು ವಿವಿ ಪುರಂ ಪೊಲೀಸ್ ಠಾಣೆ ದೂರ ವಾಣಿ ಸಂಖ್ಯೆ 0821-2418314 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿಸುವುದು.

Translate »