ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
ಮೈಸೂರು

ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

May 5, 2019

ಮೈಸೂರು: ಖಾಲಿ ಜಾಗ ಸ್ವಚ್ಛಗೊಳಿಸುವ ವೇಳೆ ಗುದ್ದಲಿಗೆ ಸಿಲುಕಿ ಗಾಯಗೊಂಡಿದ್ದ ನಾಗರಹಾವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಡಲಾಗಿದೆ. ರಸ್ತೆ ಡಾಂಬರ್ ಕೆಲಸ ಮಾಡುವ ಒರಿಸ್ಸಾ, ಮಹಾರಾಷ್ಟ್ರ ಮೂಲದ 15 ಮಂದಿ ಕೂಲಿ ಕಾರ್ಮಿ ಕರು ಉಳಿದುಕೊಳ್ಳಲು ಲಲಿತಾ ದ್ರಿಪುರ ಬಳಿ ರಿಂಗ್ ರಸ್ತೆಯ ಲ್ಲಿನ ಮುಡಾಕ್ಕೆ ಸೇರಿದ ಖಾಲಿ ಜಾಗವನ್ನು ಶನಿವಾರ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ನಾಗರಹಾವೊಂದು ಗುದ್ದಲಿ ಏಟಿಗೆ ಸಿಲುಕಿ ಗಾಯಗೊಂಡಿದೆ. ಇದರಿಂದ ಗಾಬರಿಗೊಂಡ ಚಂದ್ರು ಎಂಬುವರು ಉರಗ ಸಂರಕ್ಷಕ ಕೆಂಪರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ಕೆಂಪರಾಜು ಸ್ಥಳಕ್ಕಾಗಮಿಸಿ, ಬಿಲವೊಂದರಲ್ಲಿ ಅಡಗಿದ್ದ ನಾಗರಹಾವು ಮತ್ತು ಅದರ ಮರಿಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಈ ವೇಳೆ ನಾಗರಹಾವಿನ ಹೆಡೆ ಮತ್ತು ಹೊಟ್ಟೆಯ ಭಾಗ ಗಾಯಗೊಂಡಿತ್ತು. ನಂತರ ಕೆಂಪರಾಜು, ಧನ್ವಂತ್ರಿ ರಸ್ತೆಯಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಾದ ತಿರುಮಲಗೌಡ ಮತ್ತು ಯಶ್ವಂತ್ ಅವರಿಂದ ಚಿಕಿತ್ಸೆ ಕೊಡಿಸಿ, ಅರಣ್ಯಕ್ಕೆ ಬಿಟ್ಟಿದ್ದಾರೆ.

Translate »