ಕಾರ್ಮಿಕ ದಿನಾಚರಣೆ ಹಿನ್ನೆಲೆ: ಪೌರ ಕಾರ್ಮಿಕರಿಗೆ ಸನ್ಮಾನ
ಮೈಸೂರು

ಕಾರ್ಮಿಕ ದಿನಾಚರಣೆ ಹಿನ್ನೆಲೆ: ಪೌರ ಕಾರ್ಮಿಕರಿಗೆ ಸನ್ಮಾನ

May 5, 2019

ಮೈಸೂರು: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ 45ನೇ ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯ ನಿರತ ಪೌರಕಾರ್ಮಿಕರನ್ನು ಸನ್ಮಾನಿಸಿ, ಶುಭ ಕೋರಲಾಯಿತು.

ಮೈಸೂರಿನ ನಿವೇದಿತನಗರದ ಸುಬ್ಬ ರಾವ್ ಉದ್ಯಾನವನದಲ್ಲಿ ಬ್ಯಾಕ್‍ಬೋನ್ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಪೌರಕಾರ್ಮಿಕರ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ಮೈಸೂರು ನಗರವನ್ನು ಸ್ವಚ್ಛವಾಗಿಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸ್ವಚ್ಛನಗರ ಎಂದು ಗುರುತಿಸಿ ಕೊಳ್ಳುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದೆ. ಪ್ರತಿ ದಿನ ಸರಿಯಾದ ಸಮಯಕ್ಕೆ ನಗರವನ್ನು ಸ್ವಚ್ಛಗೊಳಿಸಲು ಸಜ್ಜಾಗುತ್ತಾರೆ. ಇದಕ್ಕೆ ಮೈಸೂರಿನ ನಾಗರಿಕರು, ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು. ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸುವಾಗ ಯಂತ್ರಗಳನ್ನು ಬಳಸ ಬೇಕು. ಬರಿಗೈಯಲ್ಲಿ ಕೆಲಸ ಮಾಡದೆ, ಗ್ಲೌಸ್, ಗಮ್ ಬೂಟ್ ಧರಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸು ವುದರೊಂದಿಗೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಅವರು, ಎಲ್ಲಾ ಪೌರಕಾರ್ಮಿಕರಿಗೆ ಶುಭಾ ಶಯ ಕೋರಿದರು. ಈ ಸಂದರ್ಭದಲ್ಲಿ ಬ್ಯಾಕ್‍ಬೋನ್ ಸೇವಾ ಸಂಸ್ಥೆಯ ಕಾರ್ಯ ದರ್ಶಿ ಅಶ್ವಿನಿ, ಶ್ರೀಲಕ್ಷ್ಮಿ, ವೀಣಾ, ಯತೀಶ್, ಅಮಿತ್‍ರಾಜ್, ಮುಖಂಡ ರಾದ ಸುಗ್ಗಿಹಟ್ಟಿ ಹರೀಶ್, ರೋಟರಿ ಹೆರಿಟೇಜ್ ಅಧ್ಯಕ್ಷ ಶಿವರುದ್ರಪ್ಪ, ಮುಖಂಡ ರಾದ ಮರೀಗೌಡ, ಚಲುವೇಗೌಡ, ನವೀನ್, ಪ್ರಶಾಂತ್ ಉಪಸ್ಥಿತರಿದ್ದರು.

Translate »