ಪಾರಂಪರಿಕ ವಿದ್ಯುತ್ ಕಂಬ ನಾಪತ್ತೆ
ಮೈಸೂರು

ಪಾರಂಪರಿಕ ವಿದ್ಯುತ್ ಕಂಬ ನಾಪತ್ತೆ

May 5, 2019

ಮೈಸೂರು: ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದಲ್ಲಿದ್ದ ಪಾರಂಪರಿಕ ಮಾದರಿ ವಿದ್ಯುತ್ ಕಂಬವೊಂದು ಕಣ್ಮರೆಯಾಗಿದೆ.

ಎರಡೂವರೆ ವರ್ಷಗಳ ಹಿಂದೆ ವೃತ್ತವನ್ನು ಅಭಿವೃದ್ಧಿಪಡಿಸಿ, ಜಯ ಚಾಮರಾಜ ಒಡೆಯರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಸುತ್ತಲೂ ರಸ್ತೆ ಬದಿಯಲ್ಲಿ ಪಾರಂಪರಿಕ ಮಾದರಿಯ ಹತ್ತಾರು ವಿದ್ಯುತ್ ಕಂಬಗಳನ್ನು ಅಳವಡಿ ಸಲಾಗಿದೆ. ಇದರಲ್ಲಿ ನೀಲಗಿರಿ ರಸ್ತೆ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆ ನಡುವೆ ಬಸ್ ನಿಲುಗಡೆ ಸ್ಥಳದಲ್ಲಿದ್ದ ಕಂಬವೊಂದು ಕಣ್ಮರೆ ಯಾಗಿದೆ. ಬುಡಮಟ್ಟದ ಭಾಗ ಮಾತ್ರ ಉಳಿದಿದ್ದು, ಯಾವುದೋ ಆಯುಧದಲ್ಲಿ ಕಟ್ ಮಾಡಿರುವಂತೆ ಕಾಣುತ್ತದೆ.

ಕಂಬಗಳು ಫುಟ್‍ಪಾತ್‍ಗೆ ಹೊಂದಿ ಕೊಂಡಂತೆ ಇರುವುದರಿಂದ ವಾಹನ ಡಿಕ್ಕಿ ಯಿಂದ ಹೀಗಾಗುವುದಕ್ಕೆ ಸಾಧ್ಯವಿಲ್ಲ. ಯಾರೋ ಕಿಡಿಗೇಡಿಗಳು ಕಂಬವನ್ನು ಹಾಳು ಮಾಡಿದ್ದಾರೆಯೇ?, ಗಾಳಿಯ ರಭಸಕ್ಕೆ ಮುರಿ ದಿದೆಯೇ? ಅಥವಾ ಕಳ್ಳತನವಾಗಿದೆಯೇ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಇದೇ ಸ್ಥಳ ದಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಇಟ್ಟಿ ರುವುದರಿಂದ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕಂಬವೊಂದು ಕಣ್ಮರೆಯಾಗಿರುವುದು ಗೊತ್ತಾಗುತ್ತದೆ. ಮೈಸೂರನ್ನು ಪಾರಂಪರಿಕ, ಸಾಂಸ್ಕøತಿಕ, ಸುಂದರ, ಸ್ವಚ್ಛ, ಅರಮನೆಗಳ ನಗರಿ ಎಂದೆಲ್ಲಾ ಕೊಂಡಾಡುವಾಗ ಮಹಾರಾಜರ ಕೊಡುಗೆ ಕಣ್ಮುಂದೆ ಬರುತ್ತದೆ. ಹಾಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಪಾರಂ ಪರಿಕ ಸೊಬಗನ್ನು ಕಾಯ್ದು ಕೊಳ್ಳುವ ಪ್ರಯತ್ನವಾಗುತ್ತಿದೆ. ಹಾಗೆಯೇ ಮೈಸೂರಿನ ಹಲವು ರಸ್ತೆಗಳಲ್ಲಿ ಪಾರಂಪರಿಕ ಮಾದರಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇವು ನೋಡಲು ಆಕರ್ಷಕ ವಾಗಿದ್ದರೂ ಹಿಂದಿನ ಕಂಬಗಳಂತೆ ಗಟ್ಟಿಮುಟ್ಟಾಗಿಲ್ಲ. ಹಾಗಾಗಿ ಕಿಡಿಗೇಡಿಗಳಿಂದ ಕೆಲ ಕಂಬಗಳು ಹಾನಿಗೊಳಗಾಗಿವೆ. ಇದೀಗ ಜಯಚಾಮರಾಜ ವೃತ್ತದಲ್ಲಿದ್ದ ಕಂಬವೇ ಕಣ್ಮರೆಯಾಗಿದೆ. ಏನೇ ಆಗಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬಾರದೆಂಬ ಕನಿಷ್ಠ ಅರಿವು ಎಲ್ಲರಲ್ಲಿದ್ದರೆ ಇಂತಹ ಘಟನೆಗಳು ನಡೆಯುವುದಿಲ್ಲ.

Translate »