ಆರೋಗ್ಯ, ಸಂತೋಷವಿದ್ದರೆ ಮಾತ್ರ ದೇಶ ಸದೃಢ
ಮೈಸೂರು

ಆರೋಗ್ಯ, ಸಂತೋಷವಿದ್ದರೆ ಮಾತ್ರ ದೇಶ ಸದೃಢ

May 5, 2019

ಮೈಸೂರು: ಭಾರತವನ್ನು ಸದೃಢವಾಗಿ ರೂಪಿಸ ಬೇಕಾದರೆ ದೇಶದಲ್ಲಿ ಆರೋಗ್ಯ ಮತ್ತು ಸಂತೋಷವಿರಬೇಕು. ಇಂತಹ ಸದೃಢ ದೇಶವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಗ್ರಹಾರದ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂ ಗಣದಲ್ಲಿ ಶನಿವಾರ ಆಯೋಜಿಸಿದ್ದ ಫಿಜಿಯೋ ಥೆರಪಿ ಕಾಲೇಜಿನ ದ್ವಿದಶಕ ಸಮಾರಂಭ, 6ನೇ ವರ್ಷದ ಪದವಿ ಪ್ರದಾನ, ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಾಗೂ ಕಾಲೇಜು ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಸದೃಢವಾಗಿ ರೂಪಿಸಬೇಕಾದರೆ ನಾವೆಲ್ಲರೂ ದೇಶ- ಜನರನ್ನು ಪ್ರೀತಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಮನುಷ್ಯನಿಗೆ ಸ್ವಚ್ಛತೆ, ಆರೋಗ್ಯ ಮತ್ತು ಶಾಂತಿ ಬಹಳ ಮುಖ್ಯ. ನಮ್ಮ ದೇಹ ಆರೋಗ್ಯವಾಗಿದ್ದರೆ, ಮನಸ್ಸು ಆರೋಗ್ಯ ವಾಗಿರುತ್ತದೆ. ಮನುಷ್ಯನಿಗೆ ಸಾಕಷ್ಟು ಆಸೆಗಳಿದ್ದು, ಈಡೇರಿಸಿಕೊಳ್ಳಲು ಪ್ರಾಮಾ ಣಿಕ ಪ್ರಯತ್ನ ಮಾಡಬೇಕು ಎಂದರು.
ಪಂಜಾಬ್ ವಿವಿಯ ಫಿಜಿಯೋ ಥೆರಪಿ ಪ್ರಾಧ್ಯಾಪಕ ಡಾ.ಎಜಿಕೆ ಸಿನ್ಹ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅಥವಾ ವೃತ್ತಿಯ ಬಗ್ಗೆ ಯಾರು ಏನೇ ಮಾತನಾಡಿ ದರೂ ತಲೆಕೆಡಿಸಿಕೊಳ್ಳದೆ ನಿಮ್ಮ ಕೋರ್ಸ್ ಮತ್ತು ವೃತ್ತಿಯಲ್ಲಿ ಮಾತ್ರ ನಂಬಿಕೆ ಇಟ್ಟು ಕೊಳ್ಳಬೇಕು. ಈ ವೃತ್ತಿಗೆ ಸಂಬಂಧಿಸಿ ದಂತೆ ಸಾಕಷ್ಟು ಸವಾಲುಗಳಿದ್ದು, ಎದುರಿ ಸುವ ನಿಟ್ಟಿನಲ್ಲಿ ಮಾನಸಿಕವಾಗಿ ಸಿದ್ಧರಾಗ ಬೇಕು. ಇತ್ತಿಚಿನ ದಿನಗಳಲ್ಲಿ ಫಿಜಿಯೋ ಥೆರಪಿ ಕೋರ್ಸ್‍ನೆಡೆಗೂ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಚುಲರ್ ಆಫ್ ಫಿಜಿಯೋ ಥೆರಪಿ 19 ಮತ್ತು ಮಾಸ್ಟರ್ ಆಫ್ ಫಿಜಿಯೋ ಥೆರಪಿ 5 ವಿದ್ಯಾರ್ಥಿ ಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪಿ.ಅನುಷಾ-`ಅತ್ಯುತ್ತಮ ಇಂಟರ್ನ್’, ಸಂದೀಪ್-`ಅತ್ಯುತ್ತಮ ಫಿಜಿಯೋ ಥೆರಪಿ ಶಿಕ್ಷಕ’, ಸೈಯದ್ ಆಸಿಫ್ ಮತ್ತು ಶರತ್-`ಅತ್ಯುತ್ತಮ ವೈದ್ಯಕೀಯ ಮಾದರಿ’, ರೇಣುಕಾ ಅವರಿಗೆ `ಅತ್ಯುತ್ತಮ ಆಡಳಿ ತಾತ್ಮಕ ಸಿಬ್ಬಂದಿ’ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಅಂಗರಚನಾಶಾಸ್ತ್ರದ ಡಾ.ಮಲ್ಲಾರ್ ಮತ್ತು ಸಮುದಾಯ ಔಷಧ ಇಲಾಖೆಯ ಡಾ.ಪ್ರವೀಣ್ ಕುಲಕರ್ಣಿ ಅವರಿಗೆ `ಅತ್ಯು ತ್ತಮ ಬಾಹ್ಯಬೋಧನಾ ಸಿಬ್ಬಂದಿ ಪ್ರಶಸ್ತಿ’ ನೀಡಲಾಯಿತು. ನಂತರ ಪಠ್ಯೇತರ ಚಟು ವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜಿನ 20 ವರ್ಷದ ಪಯಣದ ಕುರಿತ `ಓಜಸ್’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯ ದರ್ಶಿ ಡಾ.ಸಿ.ಬಿ.ಬೆಟಸೂರಮಠ್, ಕಾಲೇ ಜಿನ ಪ್ರಾಂಶುಪಾಲೆ ಡಾ.ಕವಿತಾ ರಾಜಾ ಮತ್ತಿತರರು ಉಪಸ್ಥಿತರಿದ್ದರು.

Translate »