ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ‘ಫ್ರೆಂಡ್ಲಿ ಫೈಟ್’ಗೆ ದೋಸ್ತಿ ನಿರ್ಧಾರ
ಮೈಸೂರು

ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ‘ಫ್ರೆಂಡ್ಲಿ ಫೈಟ್’ಗೆ ದೋಸ್ತಿ ನಿರ್ಧಾರ

May 5, 2019

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ರಾಜ್ಯದಲ್ಲಿ ಮುಂದೆ ಇನ್ನಾವುದೇ ಚುನಾವಣೆ ಎದುರಾದರೂ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಫ್ರೆಂಡ್ಲಿ ಫೈಟ್ ನಡೆಸಲು ತೀರ್ಮಾನಿಸಿವೆ.

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೂ ಸ್ಥಳೀಯವಾಗಿ ಕಾರ್ಯಕರ್ತರು ಒಬ್ಬರನ್ನೊಬ್ಬರು ತೆಗಳಿಕೊಂಡಿದ್ದು ಪ್ರತಿಪಕ್ಷ ಬಿಜೆಪಿಗೆ ಅನುಕೂಲವಾಯಿತು. ಬಿಜೆಪಿಗೆ ಎಲ್ಲಿ ನೆಲೆ ಇರಲಿಲ್ಲವೋ ಅಂತಹ ಕಡೆ ಉಭಯ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಆ ಪಕ್ಷದ ಅಭ್ಯರ್ಥಿಗೆ ನೆರವಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜ್ಯ ನಾಯಕರು ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದ್ದಲ್ಲದೆ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಂಟಿಯಾಗಿ ಪ್ರಚಾರ, ಕಾರ್ಯ ಕರ್ತರ ಸಭೆ ನಡೆಸಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ದೊರೆಯಲಿಲ್ಲ. ಕಾಂಗ್ರೆಸ್ ಭದ್ರ ಕೋಟೆಯಾ ಗಿದ್ದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ವೈಮನಸ್ಸಿ ನಿಂದ ಬಿಜೆಪಿಗೆ ಲಾಭ ಆಗಿದೆ ಎಂಬುದು ಉಭಯ ಪಕ್ಷಗಳ ಮುಖಂಡರ ಲೆಕ್ಕಾಚಾರ. ಇದೇ ರೀತಿ ಜೆಡಿಎಸ್‍ಗೂ ಮಂಡ್ಯ, ತುಮಕೂರು ಹಾಗೂ ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ. ಅದರಲ್ಲೂ ಮಂಡ್ಯದಲ್ಲಂತೂ ಪಕ್ಷೇತರ ಅಭ್ಯರ್ಥಿ ಪರ ಬಹು ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರೇ ಬೆಂಬಲವಾಗಿ ನಿಂತಿದ್ದು ಪಕ್ಷಕ್ಕೆ ತುಂಬಾ ಮುಜುಗರ ತಂದಿತು. ಸ್ಥಳೀಯ ಮಟ್ಟದಲ್ಲಿ ಕಾರ್ಯ ಕರ್ತರು ಒಂದಾಗದೆ, ಪ್ರತಿಪಕ್ಷಕ್ಕೆ ತಾವೇ ನೆಲೆ ಒದಗಿಸಿ ದಂತಾಗುತ್ತಿದೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಬದಲು ಮುಂದೆ ನಡೆಯುವ ಚುನಾವಣೆಗಳಲ್ಲಿ ಸ್ಥಳೀಯ ವಾಗಿ ಯಾವ ಪಕ್ಷದ ಬಲಾಢ್ಯ ಅಭ್ಯರ್ಥಿ ಇರುತ್ತಾರೋ ಅವರನ್ನೇ ಕಣಕ್ಕಿಳಿಸುವುದು. ಫ್ರೆಂಡ್ಲಿ ಪಕ್ಷದಿಂದಲೂ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮತದಾರ ನಿಗೆ ಆಯ್ಕೆ ನೀಡಿ ಎದುರಾಳಿ ಪಕ್ಷದ ಅಭ್ಯರ್ಥಿ ಆಟ ನಡೆಯದಂತೆ ಮಾಡುವುದು ನಾಯಕರ ಉದ್ದೇಶ. ನಗರ ಸ್ಥಳೀಯ ಸಂಸ್ಥೆಗಳ
ಚುನಾವಣೆಯಲ್ಲಿ ಇದೇ ಮಾನದಂಡ ಬಳಸಿ ಸ್ಥಳೀಯ ಮುಖಂಡರು ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಿದ್ದಾರೆ. ಇಂತಹ ಫ್ರೆಂಡ್ಲಿ ಫೈಟ್‍ನಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗುವುದಿಲ್ಲ, ಇತ್ತ ಪ್ರತಿಪಕ್ಷ ಬೆಳೆಯದಂತೆ ತಡೆಗಟ್ಟಬಹುದು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ನೋಟಕ್ಕೆ ಮೈತ್ರಿ ಕಂಡುಬಂದರೂ ಸ್ಥಳೀಯವಾಗಿ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗಲೇ ಇಲ್ಲ. ತಮ್ಮ ಹಳೇ ರಾಜಕೀಯ ದ್ವೇಷಗಳನ್ನು ತೀರಿಸಿಕೊಳ್ಳುವ ಪ್ರಯತ್ನ ಈ ಚುನಾವಣೆಯಲ್ಲಿ ನಡೆಯಿತು.

ಕೆಲವರು ಬಹಿರಂಗವಾಗಿ ದ್ವೇಷ ಸಾಧಿಸಿದರೆ, ಇನ್ನು ಕೆಲವರು ಒಳಗೊಳಗೇ ಈ ಕೃತ್ಯ ಎಸಗಿದರು, ಕೆಲವೆಡೆ ಜಾತಿ ರಾಜಕೀಯವೂ ಕೆಲಸ ಮಾಡಿತು.

Translate »