ಕೇರ್ಗಳ್ಳಿಯಲ್ಲಿ ಭಾನುವಾರ ಮುಂಜಾನೆ ಬೋನಿಗೆ ಬಿದ್ದ ಚಿರತೆ
ಮೈಸೂರು

ಕೇರ್ಗಳ್ಳಿಯಲ್ಲಿ ಭಾನುವಾರ ಮುಂಜಾನೆ ಬೋನಿಗೆ ಬಿದ್ದ ಚಿರತೆ

May 6, 2019

ಮೈಸೂರು: ಮೈಸೂರಿನ ದಟ್ಟಗಳ್ಳಿ, ಕೇರ್ಗಳ್ಳಿ ಸೇರಿದಂತೆ ವಿವಿ ಧೆಡೆ ಸಾಕುನಾಯಿ ಮತ್ತು ಕುರಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ಮುಂಜಾನೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಸ್ಥಳೀ ಯರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ದಟ್ಟಗಳ್ಳಿ, ಕೇರ್ಗಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಚಿರತೆ ಯೊಂದು ಕಾಣಿಸಿಕೊಳ್ಳುತ್ತಾ ಕುರಿ ಹಾಗೂ ಸಾಕುನಾಯಿಗಳನ್ನು ತಿಂದು ಪರಾರಿ ಯಾಗುತ್ತಿತ್ತು. ಮನೆಯ ಹೊರಗೆ ಕಟ್ಟಿಹಾಕಿದ್ದ ನಾಯಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ, ಹಾಡಹಗಲೇ ಹೊಲದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ದಾಳಿ ನಡೆಸಿ, ತಿಂದು ಪರಾರಿಯಾಗುತ್ತಿತ್ತು. ಸುಮಾರು 10ಕ್ಕೂ ಹೆಚ್ಚು ಕುರಿಗಳನ್ನು ಚಿರತೆ ತಿಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಸ್ಥಳೀಯರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ 2 ದಿನದ ಹಿಂದಷ್ಟೆ ಬಸಪ್ಪ ಎಂಬು ವರ ತೋಟದಲ್ಲಿ ಬೋನಿಟ್ಟು, ಅದರ ಮತ್ತೊಂದು ಬದಿಯಲ್ಲಿ ನಾಯಿಯೊಂದನ್ನು ಕಟ್ಟಿ ಹಾಕಲಾಗಿತ್ತು. ಆದರೆ ಇಂದು ಮುಂಜಾನೆ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ ಬೋನಿಗೆ ಬಿದ್ದಿತ್ತು. ಚೀರಾಟ ಕೇಳಿ ಇಂದು ಬೆಳಿಗ್ಗೆ ಸ್ಥಳೀಯರು ಬಂದು ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆರ್‍ಎಫ್‍ಒ ದೇವರಾಜು ಹಾಗೂ ಇನ್ನಿತರರು ಸ್ಥಳಕ್ಕೆ ಬಂದು ಚಿರತೆಯನ್ನು ಬೋನ್‍ನೊಂದಿಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ತಂದು ಪರಿಶೀಲಿಸಿದರು. ಸೆರೆ ಸಿಕ್ಕ ಚಿರತೆ 2 ವರ್ಷದ ಗಂಡು ಚಿರತೆಯಾಗಿದ್ದು, ಆರೋಗ್ಯ ವಾಗಿತ್ತು. ಸಂಜೆ ಅದನ್ನು ಕೊಂಡೊಯ್ದು ಬಂಡೀಪುರಕ್ಕೆ ಬಿಟ್ಟು ಬರಲಾಯಿತು.

 

Translate »