ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ದೃಷ್ಟಿಯಿಂದ ಸುರಕ್ಷಿತವಲ್ಲ
ಮೈಸೂರು

ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ದೃಷ್ಟಿಯಿಂದ ಸುರಕ್ಷಿತವಲ್ಲ

May 7, 2019

ಮೈಸೂರು: ಗಾರ್ಮೆಂಟ್ಸ್ ಸೇರಿದಂತೆ ಇತರೆ ಕಾರ್ಖಾನೆಗಳ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಮತ್ತು ವಾಪಸಾಗುವಾಗ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂ ನಿನ ಪ್ರಕಾರ ಸರಿಯಲ್ಲ. ಹಾಗೂ ಸುರಕ್ಷತೆ ದೃಷ್ಟಿಯಿಂ ದಲೂ ಒಳ್ಳೆಯದಲ್ಲ ಎಂದು ಸೋಮವಾರ ಮೈಸೂ ರಿನ ಹೊರ ವಲಯದ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿ ಟೆಡ್‍ನ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.

ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಕಾರ್ಮಿಕರು ಕೆಲಸ ಮಾಡು ತ್ತಿದ್ದಾರೆ. ಅವರಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಮೈಸೂರು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ ಜಂಟಿಯಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಏರ್ಪಡಿಸಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗೂಡ್ಸ್ ವಾಹನಗಳಲ್ಲಿ ಓಡಾಡುವಾಗ ವಾಹನ ಅಪಘಾತಕ್ಕೀ ಡಾಗಿ ಅನಾಹುತ ಸಂಭವಿಸಿದರೆ ಕಾರ್ಮಿಕರಿಗೆ ಪರಿ ಹಾರ ಸಿಗುವುದಿಲ್ಲ. ಕಾರ್ಮಿಕರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲ ಎನ್.ಸುಂದರ್‍ರಾಜ್ `ಮೋಟಾರು ವಾಹನ ಕಾಯ್ದೆ’ ಕುರಿತು ಮಾತನಾಡಿ, ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ಕೊಡಬೇಡಿ. ಮಕ್ಕಳು ಅಪಘಾತ ಮಾಡಿದರೆ, ಪೋಷಕರು ಅಥವಾ ವಾಹನ ಮಾಲೀ ಕರು ಜೈಲಿಗೆ ಹೋಗುವ ಅಥವಾ ದಂಡ ಕಟ್ಟಬೇಕಾ ಗುತ್ತದೆ. ಮಕ್ಕಳಿಗೆ 18 ವರ್ಷ ತುಂಬುವ ಮುನ್ನ ವಾಹನಗಳನ್ನು ನೀಡಬಾರದು ಎಂದು ಹೇಳಿದರು. ಹಾಗೂ ನೀಡಿದರೆ ವಾಹನ ಮಾಲೀಕರೇ ಹೊಣೆ ಗಾರರಾಗಬೇಕಾಗುತ್ತದೆ. ಇಂತಹ ವಿಚಾರಗಳನ್ನು ಮನೆಯ ಇತರೆ ಸದಸ್ಯರಿಗೆ ಮತ್ತು ಇತರರಿಗೂ ನೀಡಬೇಕು ಎಂದು ಸಲಹೆ ನೀಡಿದರು.

ಶಾಹಿ ಎಕ್ಸ್‍ಪೋರ್ಟ್ ಪ್ರೈ.ಲಿಮಿಟೆಡ್‍ನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಪ್ರಸಾದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ.ತಮ್ಮಣ್ಣ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಪಿ.ಎಂ.ನಿಖಿಲ್‍ಚಂದ್ರ, ಜಿ.ಬಿ.ವೀಣಾ, ವಕೀಲರಾದ ಎ.ಸಿ.ತಮ್ಮಣ್ಣ, ಜ್ಯೋತಿ, ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂತೋಷ್, ಮಾನವ ಸಂಪನ್ಮೂಲ ವಿಭಾಗದ ಶಿಲ್ಪಾ, ಸೌಮ್ಯ ಇನ್ನಿತರರು ಉಪಸ್ಥಿತರಿದ್ದರು.

Translate »