ಮೈಸೂರು

ಡಿಕೆಶಿ ಮನೆಗೆ ಬಿಎಸ್‍ವೈ ಭೇಟಿ: ಕುತೂಹಲ ಮೂಡಿಸಿದ ನಾಯಕರ ಮಾತುಕತೆ
ಮೈಸೂರು

ಡಿಕೆಶಿ ಮನೆಗೆ ಬಿಎಸ್‍ವೈ ಭೇಟಿ: ಕುತೂಹಲ ಮೂಡಿಸಿದ ನಾಯಕರ ಮಾತುಕತೆ

November 29, 2018

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರತಿಪಕ್ಷ ನಾಯಕ ಬಿಎಸ್‍ವೈ ಜಲಸಂಪನ್ಮೂಲ ಸಚಿವರೊಂ ದಿಗೆ ನಡೆಸಿದ ಮಾತುಕತೆಯ ವಿವರ ಬಹಿರಂಗವಾಗಿಲ್ಲ. ಆದರೆ ಡಿಕೆಶಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗ ನೀರಾವರಿ ಯೋಜನೆಗಳು ಬಗ್ಗೆ ಮತ್ತು ಸಿಗಂದೂರು ಸೇತುವೆ ನಿರ್ಮಾಣದ ಬಗ್ಗೆ ಶಿವಕುಮಾರ್ ಜೊತೆ ಚರ್ಚೆ ಮಾಡಿದ್ದೇನೆ ಎಂದರು. ಡಿ ಕೆ ಶಿವಕುಮಾರ್ ಅವರು…

ಬರಗಾಲ: ಕೃಷಿಕರು, ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ
ಮೈಸೂರು

ಬರಗಾಲ: ಕೃಷಿಕರು, ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ

November 29, 2018

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಕೃಷಿಕರು ಮತ್ತು ಕಾರ್ಮಿ ಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ 8.5 ಕೋಟಿ ಮಂದಿಗೆ ಉದ್ಯೋಗ ಕಲ್ಪಿಸಬೇ ಕೆಂಬ ಯೋಜನೆ ರೂಪಿಸಲಾಗಿತ್ತು. ಆದರೆ ನೂರು ತಾಲೂಕು ಗಳಲ್ಲಿ ಬರ ಭೀಕರವಾಗಿ ಕಾಣಿಸಿಕೊಂಡಿರುವುದರಿಂದ ಕೃಷಿಕರು ಮತ್ತು ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಈ…

ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ
ಮೈಸೂರು

ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ

November 29, 2018

ಮೈಸೂರು: ದೇಶದ ವಿವಿಧ ರಾಜ್ಯ ಗಳಲ್ಲಿರುವ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕರೂಪದ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಇಂದಿಗೂ ಬುಡಕಟ್ಟು ಜನರ ಏಳಿಗೆ ಸಾಧ್ಯವಾಗಿಲ್ಲ. ಇನ್ನಾದರೂ ಪ್ರತಿಯೊಂದು ಸಮುದಾಯ ಕೇಂದ್ರೀ ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯ ಮಾನವಶಾಸ್ತ್ರ ವಿಭಾಗದ ಪೆÇ್ರಫೆಸರ್ ಸಿ.ಜಿ.ಹುಸೇನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಬುಡಕಟ್ಟು…

ಪತಿ ಸೇರಿ ಐವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ
ಮೈಸೂರು

ಪತಿ ಸೇರಿ ಐವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ

November 29, 2018

ಮೈಸೂರು: ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿದರೆಂಬ ಆರೋಪದಡಿ ಪತಿ ಸೇರಿ ಐವರ ವಿರುದ್ಧ ಮೈಸೂರಿನ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಶ್ರೀರಾಂಪುರ 2ನೇ ಹಂತ ನಿವಾಸಿಗಳಾದ ಆರ್. ಮಂಜುನಾಥಪ್ರಸಾದ್, ಸಾವಿತ್ರಮ್ಮ, ರಾಮಸ್ವಾಮಿ, ಆರ್. ಪುಟ್ಟರಾಜು ಹಾಗೂ ಆರ್. ಸತ್ಯಮೂರ್ತಿ ಎಂಬುವರೇ ಆರೋಪ ಎದುರಿಸುತ್ತಿರುವವರು. ಮೈಸೂರಿನ ಜೆಪಿ ನಗರದ ಇಂಡಸ್ಟ್ರಿಯಲ್ ಸಬರ್ಬ್‍ನ ಒಷನಸ್ ರಾಯಲ್ ಅಪಾರ್ಟ್‍ಮೆಂಟ್‍ನ ನಿವಾಸಿ ಲೇಟ್ ಹೆಚ್.ಎಸ್. ಪಂಚಾಕ್ಷರಿ ಅವರ ಪುತ್ರಿ ಎಸ್.ಪಿ. ಸ್ವಾತಿ ಅವರು, ನವೆಂಬರ್ 10ರಂದು ನೀಡಿದ ದೂರಿನನ್ವಯ ವರದಕ್ಷಿಣೆ…

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ
ಮೈಸೂರು

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ

November 28, 2018

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿ ಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವ ಕುಮಾರ್, ಯೋಜನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ತಮಿಳುನಾಡಿಗೆ ಸಮಸ್ಯೆಯಾಗದ ರೀತಿ ಯೋಜನೆ ಜಾರಿಗೊಳಿಸುತ್ತೇವೆ. ಗಡಿ ಭಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ಬರುವುದರಿಂದ ಕೃಷಿಗೆ ನೀರು ಬಳಕೆ ಮಾಡು ವುದಿಲ್ಲ. ಅದೇ ಕಾಲಕ್ಕೆ ನ್ಯಾಯಾಲಯದ ಆದೇಶದಂತೆ ಅವರಿಗೆ ಬಿಡುವ ನೀರಿನಲ್ಲಿಯೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ತಮಿಳುನಾಡು ಬಯಸಿದರೆ ಮಾತು ಕತೆಗೆ ನಾವು ಸದಾಸಿದ್ಧ….

SSLC ಪರೀಕ್ಷೆಗೆ ವಾಚ್ ಕಟ್ಟಿ ಬಂದರೆ ಪ್ರವೇಶವಿಲ್ಲ!
ಮೈಸೂರು

SSLC ಪರೀಕ್ಷೆಗೆ ವಾಚ್ ಕಟ್ಟಿ ಬಂದರೆ ಪ್ರವೇಶವಿಲ್ಲ!

November 28, 2018

ಬೆಂಗಳೂರು: ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಕೈಗೆ ವಾಚು ಕಟ್ಟಿಕೊಂಡು ಹೋಗಕೂಡದು! ಒಂದು ವೇಳೆ ವಾಚ್ ಧರಿಸಿ ಹೋದರೆ ನಿಮಗೆ ಪ್ರವೇಶ ಸಿಗುವುದಿಲ್ಲ. ಏಕೆಂದರೆ ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಳ್ಳಬಾರದೆಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸುತ್ತೂೀಲೆ ಹೊರಡಿಸಿದೆ. ವರ್ಷದಿಂದ ವರ್ಷಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಸುಧಾರಣೆ ತರಲು ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರ, ಈ ಬಾರಿಯ ಪರೀಕ್ಷಾ ಸಮಯದಲ್ಲಿ ಕೈಗೆ ವಾಚ್ ಕಟ್ಟದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಸೂಚನೆ…

ರೈತರ ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ ಪ್ರಕ್ರಿಯೆ ಡಿ.5ರಿಂದ ಆರಂಭ
ಮೈಸೂರು

ರೈತರ ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ ಪ್ರಕ್ರಿಯೆ ಡಿ.5ರಿಂದ ಆರಂಭ

November 28, 2018

ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆ ಕುರಿತಂತೆ ಕೆಲವು ವಲಯಗಳಲ್ಲಿ ಅನಗತ್ಯ ಅಪಪ್ರಚಾರ ನಡೆಯುತ್ತಿದೆ. ರೈತರ ಆತಂಕ ದೂರವಾಗಬೇಕು. ಜಿಲ್ಲಾಧಿಕಾರಿಗಳು ಡಿಸೆಂಬರ್ 1 ರೊಳಗಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲಮನ್ನಾಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಡಿಸೆಂಬರ್ 5 ರಿಂದ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 33 ಬ್ಯಾಂಕುಗಳಿಂದ 20.8 ಲಕ್ಷ ರೈತರ ಬೆಳೆ…

ಕೊಡಗಿನ ನೆರೆ ಸಂತ್ರಸ್ತರಿಗೆ ವಾರದಲ್ಲಿ ಮನೆ ನಿರ್ಮಾಣ ಆರಂಭ
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ವಾರದಲ್ಲಿ ಮನೆ ನಿರ್ಮಾಣ ಆರಂಭ

November 28, 2018

ಬೆಂಗಳೂರು: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ನಿರ್ಧರಿಸಿದ್ದು, ವಾರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊಡಗಿನಲ್ಲಿ ಪ್ರವಾಹ ಉಂಟಾದಾಗ ನಿರ್ವಹಿಸಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೊಡಗು ಸೇರಿದಂತೆ ಅತಿವೃಷ್ಟಿಗೆ 4.50 ಕೋಟಿ ರೂ. ನಷ್ಟವಾಗಿತ್ತು. ಮಾರ್ಗಸೂಚಿ ಪ್ರಕಾರ, 722 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರ 546 ಕೋಟಿ ರೂ….

ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ
ಮೈಸೂರು, ಹಾಸನ

ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ

November 28, 2018

ಹಾಸನ: ಹಾಸನದ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ (67) ಮಂಗಳವಾರ ಬೆಳಿಗ್ಗೆ ಬೆಂಗ ಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಯಲ್ಲಿ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಅವರು ನ. 20ರಂದು ಆಸ್ಪತ್ರೆಗೆ ದಾಖ ಲಾಗಿದ್ದರು. ಇವರು ಪತ್ನಿ ಲಲಿತಾ ಪ್ರಕಾಶ್, ಕಂದಲಿ ಜಿಪಂ ಕ್ಷೇತ್ರದ ಸದಸ್ಯ ಹೆಚ್.ಪಿ. ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸಹೋದರರಾದ ನಗರ ಸಭೆಯ ಮಾಜಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್. ದೇವೇಂದ್ರ ಸೇರಿದಂತೆ ಅಪಾರ ಅಭಿಮಾನಿ ಬಳಗ…

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ
ಮಂಡ್ಯ, ಮೈಸೂರು

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ

November 28, 2018

ಕೆ.ಆರ್.ಪೇಟೆ: ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಚಿವ ಜಮೀರ್ ಅಹಮದ್ ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಸಾರ್ವಜನಿಕರೇ ತಡೆದು ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ. ರಾಜ್ಯದ ಪ್ರಭಾವಿ ಸಚಿವರಾಗಿರುವ ಜಮೀರ್ ಅಹಮದ್ ಒಡೆತನದ ನ್ಯಾಷ ನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಸುಗಳು ಪ್ರತಿನಿತ್ಯ ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ರಾಜಕುಮಾರ ಖಾಸಗಿ ಬಸ್ಸು ನಾಲೆಗೆ ಉರುಳಿ ಬಿದ್ದು 30…

1 1,260 1,261 1,262 1,263 1,264 1,611
Translate »