ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ
ಮೈಸೂರು, ಹಾಸನ

ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ

November 28, 2018

ಹಾಸನ: ಹಾಸನದ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ (67) ಮಂಗಳವಾರ ಬೆಳಿಗ್ಗೆ ಬೆಂಗ ಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಅವರು ನ. 20ರಂದು ಆಸ್ಪತ್ರೆಗೆ ದಾಖ ಲಾಗಿದ್ದರು. ಇವರು ಪತ್ನಿ ಲಲಿತಾ ಪ್ರಕಾಶ್, ಕಂದಲಿ ಜಿಪಂ ಕ್ಷೇತ್ರದ ಸದಸ್ಯ ಹೆಚ್.ಪಿ. ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸಹೋದರರಾದ ನಗರ ಸಭೆಯ ಮಾಜಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್. ದೇವೇಂದ್ರ ಸೇರಿದಂತೆ ಅಪಾರ ಅಭಿಮಾನಿ ಬಳಗ ವನ್ನು ಅಗಲಿದ್ದಾರೆ. ಈ ಹಿಂದೆ ಪ್ರಕಾಶ್ ಅವರಿಗೆ ಲಿವರ್ ಮತ್ತು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಸಹ ಮಾಡಲಾಗಿತ್ತು. ಪ್ರಕಾಶ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ: ಹಾಸನದ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿ ಪ್ರಕಾಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ ಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಅಭಿ ಮಾನಿ ಗಳು ಧಾವಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇಂದು ಅಂತ್ಯಕ್ರಿಯೆ: ಶಾಂತಿ ಗ್ರಾಮ ಬಳಿ ಇರುವ ಆಲದಹಳ್ಳಿಯ ಅವರ ಜಮೀನಿ ನಲ್ಲಿ ನಾಳೆ (ನ.28) ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.

Translate »