ಮೈಸೂರು

ಮೈಸೂರಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಮೈಸೂರು

ಮೈಸೂರಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

June 29, 2018

ಮೈಸೂರು:  ಮೈಸೂರಿನ ಕಲ್ಯಾಣ ಮಂಟಪವೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದಿರುವ ಘಟನೆ ಬುಧವಾರ ನಡೆದಿದೆ. ಆದರೆ ವಧು-ವರ ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಾರೆ. ಮೈಸೂರಿನ ರಾಘವೇಂದ್ರನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ 26 ವರ್ಷದ ಕುಮಾರ ಎಂಬಾತನಿಗೆ 17 ವರ್ಷದ ಬಾಲಕಿಯನ್ನು ಮದುವೆ ಮಾಡಲು ಸಿದ್ಧತೆಗಳು ನಡೆಯುತ್ತಿತ್ತು. ಇದರ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಹಾಯವಾಣ ಹಾಗೂ ಎನ್.ಆರ್.ಪೊಲೀಸರು ಕಲ್ಯಾಣ ಮಂಟಪದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದಾಗ ವಿಷಯ ತಿಳಿದ ಪೋಷಕರು…

ಮರು ನೇಮಕಕ್ಕೆ ಆಗ್ರಹಿಸಿ ವಜಾಗೊಂಡ ಬಿಎಸ್‍ಎನ್‍ಎಲ್ ನೌಕರರ ಪ್ರತಿಭಟನೆ
ಮೈಸೂರು

ಮರು ನೇಮಕಕ್ಕೆ ಆಗ್ರಹಿಸಿ ವಜಾಗೊಂಡ ಬಿಎಸ್‍ಎನ್‍ಎಲ್ ನೌಕರರ ಪ್ರತಿಭಟನೆ

June 29, 2018

ಮೈಸೂರು: ಹೈಕೋರ್ಟ್ ತೀರ್ಪು ನೀಡಿದ್ದರೂ ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿ ಬಳಿ ಗುರುವಾರ ವಜಾಗೊಂಡ ನೌಕರರು ಪ್ರತಿಭಟನೆ ನಡೆಸಿದರು. ಸಂಸ್ಥೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಸಂಸ್ಥೆಯ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ನಿಯಮ ಗಾಳಿಗೆ ತೂರಲಾಗಿದೆ. ಇವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದ್ದರೂ ಅಧಿಕಾರಿಗಳು ಮಾತ್ರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕು….

ಎಸ್. ಜಯಶೀಲಗೆ ಪಿಹೆಚ್.ಡಿ ಪದವಿ
ಮೈಸೂರು

ಎಸ್. ಜಯಶೀಲಗೆ ಪಿಹೆಚ್.ಡಿ ಪದವಿ

June 29, 2018

ಮೈಸೂರು: ಡಾ. ಎಸ್.ಕೆ. ಕಿರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸ್. ಜಯಶೀಲ ಅವರು ಮನೋವಿಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿಗೆ ಅಂಗೀಕರಿಸಿದೆ.

ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ನೀರು ಸರಬರಾಜಿನಲ್ಲಿ ವ್ಯತ್ಯಯ

June 29, 2018

ಮೈಸೂರು: ಮೈಸೂರಿನ ವಿಜಯನಗರ ಕೇಂದ್ರೀಯ ಜಲ ಸಂಗ್ರಹಾಗಾರದ ಆವರಣದಲ್ಲಿರುವ ಟ್ಯಾಂಕ್ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಜೂ.30 ಮತ್ತು ಜುಲೈ 1ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ಪಶ್ಚಿಮ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಆರ್‍ಎಂಪಿ, ಬಿಇಎಂಎಲ್, ವಿಜಯನಗರ 3ನೇ ಹಂತ, ಹೆಬ್ಬಾಳು 1, 2 ಮತ್ತು 3ನೇ ಹಂತ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕ ನಗರ, ಬಿ.ಎಂ.ಶ್ರೀ.ನಗರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು,…

ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’
ಮೈಸೂರು

ಇಂದಿನಿಂದ ಮೂರು ದಿನ `ಪಾಶ್ರ್ವ ಸಂಗೀತ’

June 29, 2018

ಮೈಸೂರು: ನಗರದ ಕಲಾಮಂದಿರದ ಆವರಣದಲ್ಲಿರುವ ನೂತನ ಕಿರು ರಂಗಮಂದಿರದಲ್ಲಿ ಜೂನ್ 29ರಿಂದ ಜುಲೈ 1ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ರಂಗವಲ್ಲಿ ತಂಡದಿಂದ ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕವು ಮರುಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ್ ಈ ನಾಟಕದ ನಿರ್ದೇಶಕರು. 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಅಂದಿನ ಕಾಲದ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು…

ಡ್ಯಾನ್ಸ್ ವಲ್ರ್ಡ್ ಕಪ್ ಫೈನಲ್‍ಗೆ ಆಗ್ನಿಕಾ ವಿಜಯಕುಮಾರ್ ಆಯ್ಕೆ
ಮೈಸೂರು

ಡ್ಯಾನ್ಸ್ ವಲ್ರ್ಡ್ ಕಪ್ ಫೈನಲ್‍ಗೆ ಆಗ್ನಿಕಾ ವಿಜಯಕುಮಾರ್ ಆಯ್ಕೆ

June 29, 2018

ಮೈಸೂರು: ಆಪ್ತಮಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್‍ರವರ ಶ್ರೀ ನಿಮಿಷಾಂಬ ನೃತ್ಯ ಶಾಲೆಯ ವಿದ್ಯಾರ್ಥಿನಿ ಕು. ಆಗ್ನಿಕಾ ಅಜಯ್ ಕುಮಾರ್ ಅವರು ಸ್ಪೇನ್‍ನ ಬಾರ್ಸಿಲೋನಾದಲ್ಲಿ ಜೂ. 30 ರವರೆಗೆ ನಡೆಯುವ ಡ್ಯಾನ್ಸ್ ವಲ್ರ್ಡ್ ಕಪ್ ಫೈನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ 54 ದೇಶಗಳ ಒಟ್ಟು 30,000 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಜನವರಿ 30 ರಂದು ಬೆಂಗಳೂರಿನಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಶಾಸ್ತ್ರೀಯ ನೃತ್ಯಗಳ ವಿಭಾಗದಲ್ಲಿ ಈಕೆ ಆಯ್ಕೆಯಾಗಿದ್ದರು. ಈಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಛೇರ್‍ಮನ್ ಡಾ. ಅಜಯ್‍ಕುಮಾರ್ ಮತ್ತು…

ಕು. ಎನ್.ಕೆ. ವರ್ಷಾಗೆ ಬಾಲಶ್ರೀ ಶಿಬಿರದಲ್ಲಿ ಬಹುಮಾನ
ಮೈಸೂರು

ಕು. ಎನ್.ಕೆ. ವರ್ಷಾಗೆ ಬಾಲಶ್ರೀ ಶಿಬಿರದಲ್ಲಿ ಬಹುಮಾನ

June 29, 2018

ಮೈಸೂರು: ಜೆಎಸ್‍ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನಳಾದ ಕು. ಎನ್.ಕೆ. ವರ್ಷಾ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬಾಲಶ್ರೀ ಶಿಬಿರದಲ್ಲಿ ಭಾಗವಹಿಸಿ ಮಾದರಿ ತಯಾರಿಕೆಯಲ್ಲಿ ಪ್ರಶಸ್ತಿ ಹಾಗೂ ರೂ. 5000 ನಗದು ಬಹುಮಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂವಾದ ಕಾರ್ಯಕ್ರಮ
ಮೈಸೂರು

ಸಂವಾದ ಕಾರ್ಯಕ್ರಮ

June 29, 2018

ಮೈಸೂರು:  ಮೈಸೂರಿನ ಮಾರ್ಕ್ಸ್ ವಾದಿ ಶಾಲೆ ವತಿಯಿಂದ ಜೂ. 1 ರಂದು ಫ್ರೆಂಚ್ ಮಹಾಕ್ರಾಂತಿ ಮತ್ತು ಪ್ಯಾರಿಸ್ ಕಮ್ಯೂನ್ ಕುರಿತು ನಗರದ ಕಲಾಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಂಗಳೂರಿನ ಸಮಕಾಲೀನ ವೇದಿಕೆ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್ ಅವರು ವಿಷಯ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಿದ್ಧ ಸಮಾಧಿ ಯೋಗ ಶಿಬಿರ
ಮೈಸೂರು

ಸಿದ್ಧ ಸಮಾಧಿ ಯೋಗ ಶಿಬಿರ

June 29, 2018

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಲ್ಲಿ ಹಾಗೂ ಬನ್ನೂರಿನಲ್ಲಿ ಜು. 2 ರಂದು 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ ಮತ್ತು ವ್ಯಕ್ತಿತ್ವ ವಿಕಾಸ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುವುದು. ಜು. 1 ರಂದು ಸಂಜೆ 6.15ಕ್ಕೆ ಋಷಿ ಸಂಸ್ಕøತಿ ವಿದ್ಯಾಕೇಂದ್ರದಲ್ಲಿ ಹಾಗೂ ಬನ್ನೂರಿನಲ್ಲಿ ಸಿದ್ಧ ಸಮಾಧಿ ಯೋಗದ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 94488 26304, 94805…

ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ
ಮೈಸೂರು

ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ

June 28, 2018

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 124 ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿರುವುದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಿವಿ ರಿಜಿಸ್ಟ್ರಾರ್ ರಾಜಣ್ಣ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ. 124 ಬೋಧಕೇತರ ಸಿಬ್ಬಂದಿಯನ್ನು ತಕ್ಷಣ ವಜಾ ಮಾಡಿ ಅನುಪಾಲನಾ ವರದಿ ಸಲ್ಲಿಸುವಂತೆ ಮೈಸೂರು ವಿವಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರು ವರದಿ ಸಲ್ಲಿಸಿದ್ದಾರೆ. ಮೈಸೂರು ವಿವಿಯಲ್ಲಿ 2007ರಿಂದ ಈಚೆಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ….

1 1,519 1,520 1,521 1,522 1,523 1,611
Translate »