ಮೈಸೂರಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಮೈಸೂರು

ಮೈಸೂರಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

June 29, 2018

ಮೈಸೂರು:  ಮೈಸೂರಿನ ಕಲ್ಯಾಣ ಮಂಟಪವೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದಿರುವ ಘಟನೆ ಬುಧವಾರ ನಡೆದಿದೆ. ಆದರೆ ವಧು-ವರ ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಾರೆ.

ಮೈಸೂರಿನ ರಾಘವೇಂದ್ರನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ 26 ವರ್ಷದ ಕುಮಾರ ಎಂಬಾತನಿಗೆ 17 ವರ್ಷದ ಬಾಲಕಿಯನ್ನು ಮದುವೆ ಮಾಡಲು ಸಿದ್ಧತೆಗಳು ನಡೆಯುತ್ತಿತ್ತು.

ಇದರ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಹಾಯವಾಣ ಹಾಗೂ ಎನ್.ಆರ್.ಪೊಲೀಸರು ಕಲ್ಯಾಣ ಮಂಟಪದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದಾಗ ವಿಷಯ ತಿಳಿದ ಪೋಷಕರು ಮಂಟಪದಿಂದ ವಧು-ವರ ಪರಾರಿಯಾಗುವಂತೆ ಮಾಡಿದ್ದಾರೆ.

ವಧು-ವರರಿಬ್ಬರೂ ಮೈಸೂರಿನ ರಮ್ಮನಹಳ್ಳಿಯವರೆಂದು ಹೇಳಲಾಗಿದ್ದು, ಪರಿಶೀಲನೆ ವೇಳೆ ಶಾಲಾ ದಾಖಲಾತಿಗಳಲ್ಲಿ ವಧುವಿಗೆ 17.4 ವರ್ಷ. ಆಧಾರ್‍ನಲ್ಲಿ 18.4 ವರ್ಷ ಎಂದು ನಮೂದಾಗಿತ್ತು. ಈ ಸಂಬಂಧ ಎನ್.ಆರ್.ಪೊಲೀಸರು ಕಲ್ಯಾಣ ಮಂಟಪದ ವ್ಯವಸ್ಥಾಪಕ, ಪುರೋಹಿತ ಹಾಗೂ ವಧು-ವರರ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Translate »