ಕೊಡಗಿನ ಸೌಂದರ್ಯ ಸವಿಯಲು ಲಕ್ಷಾಂತರ ಪ್ರವಾಸಿಗರ ಲಗ್ಗೆ
ಕೊಡಗು

ಕೊಡಗಿನ ಸೌಂದರ್ಯ ಸವಿಯಲು ಲಕ್ಷಾಂತರ ಪ್ರವಾಸಿಗರ ಲಗ್ಗೆ

June 29, 2018

ಮಡಿಕೇರಿ: ದಕ್ಷಿಣ ಕಾಶ್ಮೀರ ಎಂದೇ ಕರೆಯಲ್ಪಡುವ,ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿ ಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆ ಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, ತಂಪು ಹವಾಗುಣ ಪ್ರವಾಸಿಗರನ್ನು ತನ್ನೆ ಡೆಗೆ ಸೆಳೆಯುವಲ್ಲಿ ಸಫಲವಾಗಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗ ವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸರಕಾರಕ್ಕೂ ಲಾಭವಾಗುತ್ತಿದೆ. 2018ರ ಜನ ವರಿಯಿಂದ ಜೂನ್ ಮೊದಲ ವಾರದ ವರೆಗೆ ಜಿಲ್ಲೆಗೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು ಅಂದಾಜು 10 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಜಿಲ್ಲೆಯ ಸೌಂದ ರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಪ್ರಸಿದ್ದ ಪ್ರವಾಸಿ ತಾಣಗಳಾದ ದುಬಾರೆ, ಗೋಲ್ಡನ್ ಟೆಂಪಲ್, ಮಡಿಕೇರಿಯ ರಾಜಾ ಸೀಟ್, ಅಬ್ಬಿಫಾಲ್ಸ್, ಇರ್ಪು, ಮಲ್ಲಳ್ಳಿ, ಚೇಲವಾರ ಸೇರಿದಂತೆ ಪವಿತ್ರ ಕ್ಷೇತ್ರವಾದ ಭಾಗಮಂಡಲ, ತಲಕಾವೇರಿ ಕ್ಷೇತ್ರಗಳಿಗೂ ಸಹಸ್ರ ಸಂಖ್ಯೆಯಲ್ಲಿ ಹೊರ ಊರುಗಳ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಅದ ರಲ್ಲೂ ನಾಗರಹೊಳೆ ಸಫಾರಿಯತ್ತ ಪ್ರವಾ ಸಿಗರು, ಅತಿ ಹೆಚ್ಚು ಆಕರ್ಷಿತರಾಗಿದ್ದು 1 ಲಕ್ಷದ 20 ಸಾವಿರ ಪ್ರವಾಸಿಗರು ನಾಗ ರಹೊಳೆ ಅಭಯಾರಣ್ಯದ ಸೌಂದರ್ಯ ಸವಿದಿದ್ದಾರೆ. ವಾರ್ಷಿಕವಾಗಿ ಭೇಟಿ ನೀಡುವ ಪ್ರವಾಸಿಗರಿಂದ ಹುಣಸೂರು ವಿಭಾಗದ ಅರಣ್ಯ ಇಲಾಖೆಗೆ 1 ಕೋಟಿ 10 ಲಕ್ಷ ಆದಾಯ ಲಭಿಸಿದೆ.

ಇನ್ನು ಕುಶಾಲನಗರ ಕಾವೇರಿ ನಿಸರ್ಗ ಧಾಮಕ್ಕೆ 5ಲಕ್ಷ 32 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದು, ನಿಸರ್ಗ ಧಾಮವನ್ನು ಪ್ರವಾಸಿ ಮತ್ತು ಪರಿಸರ ಸ್ನೇಹಿ ಯೋಜನೆಗಳ ಮೂಲಕ ಅಭಿ ವೃದ್ಧಿ ಪಡಿಸಲಾಗುತ್ತಿದೆ. ರ್ಯಾಪ್ಟಿಂಗ್, ಬೋಟಿಂಗ್ ಪ್ರವೇಶ ಶುಲ್ಕ ವಸೂಲಿ ಸೇರಿದಂತೆ ಒಟ್ಟು 60 ಲಕ್ಷ ಆದಾಯ ಅರಣ್ಯ ಇಲಾಖೆಗೆ ದೊರಕಿದೆ. ದುಬಾರೆ ಆನೆ ಶಿಬಿರ, ಕೂಡ ಪ್ರವಾಸಿಗರ ನೆಚ್ಚಿನ ಮೋಜಿನ ತಾಣವಾಗಿದ್ದು, ಆನೆಗಳ ಒಡ ನಾಟ ಸವಿಯಲು ಪ್ರತಿ ತಿಂಗಳು 15,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾರ್ಷಿಕ 30 ಲಕ್ಷ ಆದಾಯ ದೊರೆತ್ತಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಧಾರಕಾರ ಮಳೆ ಯಾಗುತ್ತಿದ್ದು ದುಬಾರೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಪ್ರವಾ ಸಿಗರ ಅನುಕೂಲಕ್ಕಾಗಿ ಈಗಾಗಲೇ ಅರಣ್ಯ ಇಲಾಖೆ ಸಾಕಾನೆ ಶಿಬಿರಕ್ಕೆ ತೆರ ಳಲು 2 ದೋಣಿ ಗಳ ವ್ಯವಸ್ಥೆ ಕಲ್ಪಿಸಿದೆ. ದುಬಾರೆಯಲ್ಲಿ ಪ್ರಸ್ತುತ ರಿವರ್ ರ್ಯಾಪ್ಟಿಂಗ್ ಸ್ಥಗಿತಗೊಂಡಿರುವುದು ಪ್ರವಾಸಿಗರಿಗೆ ನಿರಾಶೆ ಮೂಡಿಸಿದೆಯಾದರು, ಸಾಕಾನೆ ಶಿಬಿರದ ಆನೆಗಳೊಂದಿಗೆ ಪ್ರವಾಸಿಗರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಮಳೆಗಾಲವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜಲಪಾತಗಳು ಹಾಲ್ನೊರೆ ಸೂಸುತ್ತಿದ್ದು, ಜಲಪಾತಗಳ ವೀಕ್ಷಣೆಗೆ ಅತೀ ಹೆಚ್ಚು ಪ್ರವಾ ಸಿಗರು ಮಳೆಗಾಲ ಕೊಡಗಿಗೆ ಲಗ್ಗೆಯಿಡು ತ್ತಿದ್ದಾರೆ. ದಕ್ಷಿಣ ಕೊಡಗಿನ ಇರ್ಪು ಜಲಧಾರೆಯಲ್ಲಿ ಮಿಂದೆಳಲು ವಾರ್ಷಿಕ 2 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. ಮಂಜಿನ ನಗರಿ ಮಡಿಕೇರಿಗೆ ವಾರ್ಷಿಕ 6 ಲಕ್ಷ ಪ್ರವಾ ಸಿಗರು ಭೇಟಿ ನೀಡಿ ಹಸಿರು ಹೊದಿಕೆಗೆ ಮನಸೋತಿದ್ದಾರೆ. ಪ್ರವೇಶ ಶುಲ್ಕದಿಂದ 40ಲಕ್ಷ ಆದಾಯ ತೋಟಗಾರಿಕೆ ಇಲಾ ಖೆಗೆ ಲಭ್ಯವಾಗಿದೆ. ಮಡಿಕೇರಿಯ ಅಬ್ಬಿ ಫಾಲ್ಸ್‍ಗೆ ಪ್ರವೇಶ ಉಚಿತವಾದರೂ ಗ್ರಾಮ ಪಂಚಾಯ್ತಿ ಪಾರ್ಕಿಂಗ್ ಶುಲ್ಕ ವಸೂಲಿ ಯನ್ನು ಟೆಂಡರ್ ಮೂಲಕ ನೀಡಿದೆ. ಅದರೊಂದಿಗೆ ಅಂಗಡಿ ಮಳಿಗೆಗಳನ್ನು ಕೂಡ ಟೆಂಡರ್ ಮೂಲಕ ಗುತ್ತಿಗೆ ನೀಡಿದ್ದು, ಒಟ್ಟು 27 ಲಕ್ಷ ಆದಾಯ ಕರ್ಣಂಗೇರಿ ಗ್ರಾಮ ಪಂಚಾಯ್ತಿಗೆ ದೊರೆತ್ತಿದೆ. ಸೋಮ ವಾರಪೇಟೆಯ ಪುಷ್ಪಗಿರಿ ತಪ್ಪಲಿನ ಮಲ್ಲಳ್ಳಿ ಜಲಪಾತದ ಅತ್ಯುದ್ಬುತ ದೃಶ್ಯ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವೇಶ ಶುಲ್ಕ ವಾಹನ ಶುಲ್ಕ ವಸೂಲಿಯಿಂದ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಒಟ್ಟು 10 ಲಕ್ಷ ಆದಾಯ ದೊರೆತಿದೆ.

ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಒಟ್ಟು 7.6 ಕೋಟಿ ರೂಪಾಯಿಗಳ ಅಭಿವೃದ್ದಿ ಯೋಜನೆ ಪ್ರಗತಿಯಲ್ಲಿದ್ದು, ಇತ್ತೀಚಿಗೆ 17.75ಕೋಟಿ ರೂಪಾಯಿಗಳ ಮತ್ತೊಂದು ಪ್ರಸ್ತಾವನೆ ಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಅಧಿಕಾರಿ ಸಿ.ಜಗನ್ನಾಥ್ ತಿಳಿಸಿದ್ದಾರೆ.

ಆದರೆ ಜಿಲ್ಲೆಗೆ ವಾರಾಂತ್ಯದಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು ನಗರ ಪಟ್ಟಣಗಳಲ್ಲಿ ವಾಹನ ದಟ್ಟಗೆ ಕಂಡು ಬರುತ್ತಿದೆ. ಒಂದೆಡೆ ಪಾರ್ಕಿಂಗ್ ವ್ಯವಸ್ಥೆ, ಹೋಂ ಸ್ಟೇ, ವಸತಿ ಗೃಹಗಳು ದೊರೆ ಯದೆ, ಅದೆಷ್ಟೋ ಪ್ರವಾಸಿಗರು ತಮ್ಮ ವಾಹನಗಳಲ್ಲೇ ದಿನ ಕಳೆಯುವಂತಾ ಗುತ್ತಿದೆ. ಪ್ರವಾಸೋದ್ಯಮದಿಂದ ಕೋಟ್ಯಾಂ ತರ ರೂಪಾಯಿ ಲಾಭ ಸರಕಾರಕ್ಕೆ ಇದೆ ಯಾದರೂ ಜಿಲ್ಲೆಯ ರಸ್ತೆಗಳು ಪಾರ್ಕಿಂಗ್ ಸೌಲಭ್ಯ ಮತ್ತು ಮೂಲಭೂತ ಸೌಕರ್ಯ ಗಳಿಗಾಗಿಯೇ ಕೊಡಗು ಜಿಲ್ಲೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ವಿಶೇಷ ಅನು ದಾನಗಳನ್ನು ನೀಡಬೇಕಿದೆ ಎಂಬುದು ಜಿಲ್ಲೆಯ ಜನರ ಬೇಡಿಕೆಯೂ ಆಗಿದೆ.

Translate »