ಮೈಸೂರು: ಕೊಳೆತು ದುರ್ವಾಸನೆ ಬೀರುತ್ತಿರುವ ತ್ಯಾಜ್ಯ, ಉಪಯೋಗಕ್ಕೆ ಬಾರದ ಶೌಚಾಲಯ, ರಾಡಿಯಿಂದ ಕೂಡಿದ ರಸ್ತೆಗಳು, ಜತೆಗೆ ಜುಯ್ ಎಂದು ಮುತ್ತಿಕೊಳ್ಳುವ ನೊಣಗಳು ಹೀಗೆ ಹತ್ತು ಹಲವು ಸಮಸ್ಯೆಗಳ ಆಗರ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ ಬೃಹತ್ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಮೈಸೂರು ಸುತ್ತಮುತ್ತ ಮಾತ್ರವಲ್ಲದೆ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ಪ್ರತಿ ನಿತ್ಯ ತರಕಾರಿ, ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ತಂದು ಮಾರಾಟ ಮಾಡಲಾಗುತ್ತದೆ. ಜತೆಗೆ ನೂರಾರು ಮಂದಿ ಸಾರ್ವಜನಿಕರು…
ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಕುರಿತು ಮಕ್ಕಳಿಗೆ ಅರಿವು
June 29, 2018ಮೈಸೂರು: ಮೈಸೂರಿನ ಕೊಳಚೆ ಪ್ರದೇಶದ ಬೀದಿ ಬದಿ ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ವಲಸೆ ಮಕ್ಕಳು ಹಾಗೂ ಬಾಲ ಕಾರ್ಮಿಕ ಮಕ್ಕಳು ಇಂದು ಮೈಸೂರಿನ ಬಾಲಭವನದಲ್ಲಿ ಒಟ್ಟಾಗಿ ಕೂಡಿ ತಮ್ಮದೇ ಲೋಕದಲ್ಲಿ ವಿಹರಿಸಿದರು. ಕೆಲವರು ಡ್ರಾಯಿಂಗ್ ಹಾಳೆಯಲ್ಲಿ ಚಿತ್ರಗಳನ್ನು ಬಿಡಿಸಿದರೆ, ಇನ್ನಷ್ಟು ಮಕ್ಕಳು ಆಟ, ಪಾಠ, ಹಾಡು, ನೃತ್ಯದಲ್ಲಿ ತನ್ಮಯತೆಯಿಂದ ಭಾಗವಹಿಸಿ ಸಂಭ್ರಮಿಸಿದರು. ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ) ಗುರುವಾರ ಮೈಸೂರಿನ ಬನ್ನಿಮಂಟಪದ ಬಾಲಭವನದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ…
ಬಡ್ತಿ ಮೀಸಲಾತಿ ವಿಚಾರ: ಜೇಷ್ಠತಾ ಕಾಯ್ದೆ ಅನುಷ್ಠಾನಕ್ಕೆ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ
June 29, 2018ಮೈಸೂರು: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ಸಿವಿಲ್ ಸೇವೆಗಳಲ್ಲಿರುವ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯ ವಿಸ್ತರಿಸುವ 2017ರ ಕಾಯ್ದೆಯನ್ನು ವಾರದೊಳಗೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ಸುಮಾರು 50 ಸಾವಿರ ಪರಿಶಿಷ್ಟ ಜಾತಿ ಮತ್ತು ವರ್ಗದವರ ಹಿಂಬಡ್ತಿಗೆ ಕಾರಣರಾದ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ…
ಪದವಿ ಪಠ್ಯದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ ಖಂಡಿಸಿ ಜು.2ಕ್ಕೆ ಕನ್ನಡ ಅಧ್ಯಾಪಕರ ಪ್ರತಿಭಟನೆ
June 29, 2018ಮೈಸೂರು: ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಸಿಬಿಎಸ್‍ಸಿ) ಪದವಿ ಪಠ್ಯದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಎದುರು ಪದವಿ ಕನ್ನಡ ಅಧ್ಯಾಪಕರ ಸಂಘ ಜು.2ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಸಂಚಾಲಕ ಡಾ.ಮ.ರಾಮಕೃಷ್ಣ ಇಂದಿಲ್ಲಿ ತಿಳಿಸಿದರು. ಯುಜಿಸಿ ಕೊಟ್ಟಿರುವ ಪದವಿ ಪಠ್ಯದಲ್ಲಿ ತಮಿಳು, ತೆಲುಗು ಇನ್ನಿತರ ಭಾರತೀಯ ಭಾಷೆಗಳಿಗೆ ನೀಡಿರುವ ಸ್ಥಾನಮಾನ ಕನ್ನಡಕ್ಕೆ ನೀಡಿಲ್ಲ. ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎಂದು ಅವರು ಮೈಸೂರು ಜಿಲ್ಲಾ…
ಜು.1ಕ್ಕೆ ಮುಳ್ಳೂರು ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ
June 29, 2018ಮೈಸೂರು: ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನ, ಯೋಗವನ ಆಶ್ರಮ ಟ್ರಸ್ಟ್ ಆಶ್ರಯದಲ್ಲಿ ಜು.1ರಂದು ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ ದೊಡ್ಡ ಹರಿಸೇವೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಯೋಗಪ್ರಕಾಶ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಅನಿಲ್ ಚಿಕ್ಕಮಾಧು ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಮುಳ್ಳೂರು ಗ್ರಾಮವನ್ನು ಯೋಗ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸುಂದರ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು….
ಅಂಗಡಿ ತೆರವು ಖಂಡಿಸಿ ವಿಕಲಚೇತನ ರಸ್ತೆಯಲ್ಲಿ ಮಲಗಿ ಪ್ರತಿಭಟನೆ
June 29, 2018ಮೈಸೂರು: ರಸ್ತೆ ಬದಿಯಲ್ಲಿದ್ದ ತನ್ನ ಪೆಟ್ಟಿಗೆ ಅಂಗಡಿ ತೆರವು ಮಾಡಿದ ಪಾಲಿಕೆಯ ಅಧಿಕಾರಿಗಳ ಕ್ರಮದಿಂದ ಬೇಸತ್ತು ವಿಕಲ ಚೇತನ ವ್ಯಾಪಾರಿಯೊಬ್ಬರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಬೆಳಿಗ್ಗೆ ಜೆಎಲ್‍ಬಿ ರಸ್ತೆಯ ಆರ್‍ಟಿಓ ವೃತ್ತದಲ್ಲಿ ನಡೆದಿದೆ. ಮೈಸೂರಿನ ಆರ್‍ಟಿಓ ಕಚೇರಿ ಬಳಿ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ-ಟೀ ಹಾಗೂ ಬಿಸ್ಕೆಟ್ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್, ಇಂದು ರಸ್ತೆಯ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದವರಾಗಿದ್ದಾರೆ. ವಾಹನ ಸಂಚಾರದ ನಡುವೆ ರಸ್ತೆಯಲ್ಲಿ ಮಲಗಿದ್ದ ಮಂಜುನಾಥ್ ಅವರನ್ನು ಕಂಡ ಸಂಚಾರಿ ಪೇದೆಯೊಬ್ಬರು…
ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ ಸೇರಿ ನಾಲ್ವರಿಗೆ ಶಿಕ್ಷೆ
June 29, 2018ಮೈಸೂರು: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಪತಿರಾಯನನ್ನು ಕೊಲೆ ಮಾಡಿಸಿದ್ದ ಪತ್ನಿ ಸೇರಿ ನಾಲ್ವರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ. ನಂಜನಗೂಡು ತಾಲೂಕು, ಬಿದರಗೂಡು ಗ್ರಾಮದ ಬಿಳಿಗಿರಿ ಪುಟ್ಟರಾಜು, ರಂಗಶೆಟ್ಟಿ ಹಾಗೂ ಗೀತಾ ಎಂಬುವರೇ ಶಿಕ್ಷೆಗೊಳಗಾದ ಕೊಲೆ ಆರೋಪಿಗಳು. ಗ್ರಾಮದ ಬಿಳಿಗಿರಿ ಮತ್ತು ಗೀತಾ ನಡುವೆ ಅನೈತಿಕ ಸಂಬಂಧವಿದ್ದು, ಗೀತಾಳನ್ನು ಕುಮಾರ ಎಂಬುವರೊಂದಿಗೆ ಮದುವೆ ಮಾಡಲಾಗಿತ್ತು. ಮದುವೆ ನಂತರವೂ ಗೀತಾ ಬಿಳಿಗಿರಿಯೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದರಿಂದ ಪತಿ ಕುಮಾರ ಅಡ್ಡಿಪಡಿಸುತ್ತಿದ್ದ. ತನ್ನ ಸರಸ-ಸಲ್ಲಾಪಕ್ಕೆ…
ಮಹಾರಾಣಿ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ಅವ್ಯವಸ್ಥೆ ಸರಿಪಡಿಸಲು ಸೂಚನೆ
June 29, 2018ಮೈಸೂರು: ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ಶೌಚಾಲಯಗಳು ಗಬ್ಬುವಾಸನೆ ಬೀರುತ್ತಿದ್ದನ್ನು ಕಂಡು ಕೂಡಲೇ ಸ್ವಚ್ಛ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕಾಲೇಜಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಜಂಟಿ ನಿರ್ದೇಶಕರು ಹಾಗೂ ಪ್ರಾಂಶುಪಾಲರಿಗೆ ತಿಳಿಸಿದರು. ನಂತರ ಅಧ್ಯಾಪಕರು, ನೀರಿನ ವ್ಯವಸ್ಥೆಗಾಗಿ ಬೋರ್‍ವೆಲ್ ಇದ್ದು, ಹೆಚ್ಚು ಸಾಮಥ್ರ್ಯದ ಪಂಪ್ ಅಳವಡಿಸಬೇಕು. 25 ಸಾವಿರ ಲೀಟರ್ ಸಾಮಥ್ರ್ಯದ ಸಂಪ್ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುರಿಂದ ಹೊಸ…
ಯುವಕ, ವೃದ್ಧೆ ನಾಪತ್ತೆ: ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು
June 29, 2018ಮೈಸೂರು: ಕಷ್ಟಪಟ್ಟು ಸಂಪಾದಿಸಿದ ಹಣವನ್ನು, ಬೇರೊಬ್ಬರಿಗೆ ಸಾಲವಾಗಿ ನೀಡಿದ್ದ ತಾಯಿಯೊಂದಿಗೆ ಜಗಳ ವಾಡಿದ ಯುವಕನೋರ್ವ ನಾಪತ್ತೆಯಾಗಿರುವ ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಕಡಕೊಳದ ನಿವಾಸಿ ಲಕ್ಷ್ಮೀ ಅವರ ಪುತ್ರ ಚೇತನ್ (22), ನಾಪತ್ತೆಯಾಗಿರುವ ಯುವಕನಾಗಿದ್ದು, ಈತ ಟಿವಿಎಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಲಕ್ಷ್ಮೀ ಅವರು ಪರಿಚಿತರಾದ ಶಂಕರ್ ಎಂಬುವರಿಗೆ ಸಾಲವಾಗಿ ಹಣ ನೀಡಿದ್ದರು. ಶಂಕರ್ ಪತ್ನಿ ಮಹಾದೇವಿ ಅವರು ಹಣವನ್ನು ವಾಪಸ್ಸು ನೀಡುವುದಾಗಿ ಜೂ.26ರಂದು ತಮ್ಮ ಮನೆಯ ಬಳಿಗೆ ಕರೆಸಿಕೊಂಡಿದ್ದರು. ಆಗ ಹಣದ…
ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಲೋಕಾಯುಕ್ತ ಎಸ್ಪಿ ಜೆ.ಕೆ.ರಶ್ಮಿ ವಿಶ್ವಾಸ
June 29, 2018ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯೆಂಬ ಚಕ್ರವ್ಯೂಹವನ್ನು ಭೇದಿಸಬೇಕಾದರೆ ಆತ್ಮವಿಶ್ವಾಸ ಇರಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಜೆ.ಕೆ.ರಶ್ಮಿ ಅಭಿಪ್ರಾಯಪಟ್ಟರು. ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ಕೊಠಡಿಯಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಾಗಿರುವುದರಿಂದ ಅಂತರ್ಜಾಲದ ಮೂಲಕ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಒಂದು ದಿನದಲ್ಲಿ ಕಲಿಯುವುದನ್ನು ಕೇವಲ ಅರ್ಧ ಗಂಟೆಗಳಲ್ಲಿ ಕಲಿಯುತ್ತಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳ ನಡುವೆ ಸ್ಪರ್ಧೆ ಎದುರಿಸಬೇಕಿರುವುದರಿಂದ ಸಾಧಿಸುತ್ತೇನೆಂಬ…










