ಜು.1ಕ್ಕೆ ಮುಳ್ಳೂರು ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ
ಮೈಸೂರು

ಜು.1ಕ್ಕೆ ಮುಳ್ಳೂರು ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ

June 29, 2018

ಮೈಸೂರು:  ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನ, ಯೋಗವನ ಆಶ್ರಮ ಟ್ರಸ್ಟ್ ಆಶ್ರಯದಲ್ಲಿ ಜು.1ರಂದು ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ ದೊಡ್ಡ ಹರಿಸೇವೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಯೋಗಪ್ರಕಾಶ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಅನಿಲ್ ಚಿಕ್ಕಮಾಧು ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಮುಳ್ಳೂರು ಗ್ರಾಮವನ್ನು ಯೋಗ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸುಂದರ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಪ್ರದೇಶದ ಸಾಮಾಜಿಕ ಅರಣ್ಯ ಅಭಿವೃದ್ಧಿಗೊಳಿಸಿ, ರೈತರಿಗೆ ಲಾಭದಾಯಕ ಮಾರ್ಗಸೂಚಿ, ಪತಂಜಲಿ ದೇವಸ್ಥಾನ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕೆಂಡಗಣ್ಣ, ನಾಗರಾಜು, ಜವರನಾಯಕ, ಗೋವಿಂದಾಚಾರ್ ಇನ್ನಿತರರು ಉಪಸ್ಥಿತರಿದ್ದರು.

Translate »