ಮೈಸೂರು, ಜು.29(ಪಿಎಂ)- ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ಅಲ್ಲಿನ ಮೂಲ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಏಕಲವ್ಯನಗರ ದಲ್ಲಿ ನೆಲೆಸಿದ್ದ ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಸಲುವಾಗಿ ನರ್ಮ್ ಯೋಜ ನೆಯಡಿ ಬಹುಮಹಡಿ ಮನೆಗಳನ್ನು ಕೋಟ್ಯಾಂ ತರ ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಆದರೆ ಕೊಳಗೇರಿ ಅಭಿವೃದ್ಧಿ ಮಂಡಳಿ…
ಮಹಾಭಾರತದ ಶಾಂತಿ ಪರ್ವದ ಮೇಲೆ ವಿಶ್ವೇಶ ತೀರ್ಥ ಶ್ರೀಗಳ ಪ್ರವಚನ
July 30, 2019ಮೈಸೂರು,ಜು.29(ಎಸ್‍ಪಿಎನ್)-ಯುದ್ಧ ಮುಗಿದ ಮೇಲೆ ಶಾಂತಿ ನೆಲೆಸಬೇಕು. ಕುರುಕ್ಷೇತ್ರದಲ್ಲಿ ಯುದ್ದ ಮುಗಿದ ಮೇಲೆ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಈ ಮಾತುಗಳು ಮಹಾಭಾರತದ ಶಾಂತಿ ಪರ್ವದಲ್ಲಿ ಉಲ್ಲೇಖವಿದೆ ಎಂದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ಟಿ.ಕೆ.ಬಡಾವಣೆಯ ಶ್ರೀ ಕೃಷ್ಣಧಾಮದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ 81ನೇ ಮತ್ತು ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಶ್ರೀಪಾದಗಳಂವರ ಅವರ 32ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರವಚನ ನೀಡಿದರು. ಕುರುಕ್ಷೇತ್ರ ಯುದ್ಧ ಮುಗಿದ ನಂತರ ಕೃಷ್ಣ, ಧರ್ಮರಾಯ ಜೊತೆಗೂಡಿ, ಯುದ್ಧ…
ಮೂರನೇ ಬಾರಿಯೂ ಮುಡಾ ಸಭೆ ರದ್ದು
July 30, 2019ಮೈಸೂರು,ಜು.29(ಆರ್‍ಕೆ)-ಸಮ್ಮಿಶ್ರ ಸರ್ಕಾರದ ಅನಿಶ್ಚಿತತೆಯಿಂದಾಗಿ ಇಂದು ನಿಗದಿಯಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸಾಮಾನ್ಯ ಸಭೆ ರದ್ದಾಯಿತು. ಆ ಮೂಲಕ 3ನೇ ಬಾರಿ ಸಭೆ ರದ್ದಾದಂತಾಗಿದ್ದು, ನಾಗರಿಕ ಸೌಕರ್ಯ (ಸಿಎ) ನಿವೇಶನಗಳ ಹಂಚಿಕೆ ಪ್ರಕ್ರಿಯೆ ಜನ ಸಾಮಾನ್ಯ ರಿಗೆ ಕೈಗೆಟಕುವ ಬೆಲೆಯಲ್ಲಿ ಗುಂಪು ಮನೆ ನಿರ್ಮಿಸಿ ಕೊಡುವುದು, ಹೊಸ 5 ಬಡಾವಣೆಗಳಿಗೆ ಅನುಮೋ ದನೆ ಪಡೆಯುವುದು, ಬಲ್ಲಹಳ್ಳಿ ವಸತಿ ಬಡಾವಣೆಗೆ ಭೂಮಿ ಪಡೆಯುವ ಪ್ರಕ್ರಿಯೆ ಸೇರಿದಂತೆ ಹಲವು ಮಹತ್ವದ ಯೋಜನೆಗಳು ನೆನೆಗುದಿಗೆ ಬಿದ್ದಂತಾಗಿವೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ಆರಂಭ…
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಮೀಕ್ಷೆ
July 30, 2019ಮೈಸೂರು, ಜು.29(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಮೀಕ್ಷೆ ಆರಂಭಗೊಂಡಿದ್ದು, ಪಾಲಿಕೆ ವಲಯ ಕಚೇರಿ ವಾರು ಆ.6ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ. ಸೋಮವಾರ ವಲಯ ಕಚೇರಿ-2ರಲ್ಲಿ ಸಮೀಕ್ಷೆ ನಡೆಸ ಲಾಗಿದ್ದು, 60ಕ್ಕೂ ಹೆಚ್ಚು ಮಂದಿ ಮ್ಯಾನ್ಯುಯಲ್ ಸ್ಕ್ಯಾವೆಂ ಜಿಂಗ್ ವೃತ್ತಿ ಮಾಡಿರುವುದಾಗಿ ನೋಂದಣಿ ಮಾಡಿಕೊಂಡಿ ದ್ದಾರೆ. ಅದೇ ರೀತಿ ಜು.26ರಂದು ವಲಯ ಕಚೇರಿ 1ರಲ್ಲಿ ನಡೆದ ಸಮೀಕ್ಷಾ ಕಾರ್ಯದಲ್ಲಿ 31 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಗಳ ಹಣಕಾಸು ಮತ್ತು ಅಭಿವೃದ್ಧಿ…
ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೂವರು ರೆಬೆಲ್ ಶಾಸಕರು
July 30, 2019ಬೆಂಗಳೂರು, ಜು. 29- ಸ್ಪೀಕರ್ ರಮೇಶ್‍ಕುಮಾರ್ ಅವರು ಅನರ್ಹತೆಗೊಳಿ ಸಿದ ಆದೇಶವನ್ನು ಪ್ರಶ್ನಿಸಿ ಮೂವರು ರೆಬೆಲ್ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ರೆಬೆಲ್ ಶಾಸಕ ರಾದ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್. ಶಂಕರ್ ಅವರು ಸ್ಪೀಕರ್ ಆದೇಶ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸಂಬಂಧ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮಂಗಳವಾರ ಇಲ್ಲವೇ ಬುಧವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮೂವರು…
ಸಿದ್ದರಾಮಯ್ಯ ಲಿಂಗಾಯತರೇನ್ರಿ?ಮಾಜಿ ಸಿಎಂ ವಿರುದ್ಧ ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
July 30, 2019ಬೆಂಗಳೂರು, ಜು. 29- ವೀರಶೈವರು ಮತ್ತು ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಅಲ್ಲದೆ ಈ ಹಿಂದೆ ತಮ್ಮ ಸಮುದಾಯ ವನ್ನು ವಿಭಜಿಸಲು ಮುಂದಾಗಿದ್ದ ತಮ್ಮದೇ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ. ‘ಬಸವ ಧರ್ಮ’ ಸ್ವತಂತ್ರ ಧರ್ಮವಾಗಿದ್ದು, ಇದು ಹಿಂದೂ ಧರ್ಮದ ಒಳಗೆ ಅಥವಾ ಹೊರಗೆ ಇಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು. “ಆ ವಿಷಯಗಳ ಬಗ್ಗೆ…
ಕರಕುಶಲ ಕಲೆಗೆ ಪ್ರೋತ್ಸಾಹ ನೀಡಲು ನಗರಪಾಲಿಕೆಯಿಂದ ಪೂರ್ಣ ಸಹಕಾರ
July 30, 2019ಮೈಸೂರು: ಕರಕು ಶಲಕರ್ಮಿಗಳಿಗೆ ಉತ್ತೇಜನ ನೀಡುವ ನಿಟ್ಟಿ ನಲ್ಲಿ ಮಹಾನಗರ ಪಾಲಿಕೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು. ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಉತ್ಪಾದಕರ ಸಂಘದ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಐವರು ಸಾಧಕ ಕರಕುಶಲ ಕರ್ಮಿಗಳ ಸನ್ಮಾನ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು. ಮೈಸೂರಿನ ಪರಂಪರೆಯಲ್ಲಿ ಕರಕು ಶಲ ಕಲೆಯ ವೈಭವ ಕಾಣಬಹುದು. ಆದರೆ ಇಂದು ಆ ಹಿಂದಿನ…
ಆ.3,4 ಫೋರಂ ಮಾಲ್‍ನಲ್ಲಿ ಆಹಾರ ಮೇಳ
July 30, 2019ಮೈಸೂರು: ಮೈಸೂರಿನ ಫೋರಂ ಮಾಲ್‍ನಲ್ಲಿ ಆ.3 ಮತ್ತು 4ರಂದು `ಫೋರಂ ಆಹಾರ ಮೇಳ’ ಆಯೋಜಿಸಲಾಗಿದೆ ಎಂದು ಮಾಲ್‍ನ ಮಾರುಕಟ್ಟೆ ವಿಭಾಗದ ಸಮಂತ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋರಂ ಮಾಲ್‍ನಲ್ಲಿ ಗ್ರಾಹಕರಿಗೆ ಒಂದೇ ಸೂರಿನಡಿ ವಿವಿಧ ಬಗೆಯ ಆಹಾರ ಪದಾರ್ಥ ಪೂರೈಸುವ ನಿಟ್ಟಿನಲ್ಲಿ ಈ ಮೇಳ ನಡೆಸಲಾಗುತ್ತಿದೆ. ಆ.3ರಂದು ಮಧ್ಯಾಹ್ನ 12ಕ್ಕೆ ಆಹಾರ ಮೇಳಕ್ಕೆ ಚಾಲನೆ ದೊರೆಯಲಿದೆ. ಮೇಳದಲ್ಲಿ ರುಚಿಕರವಾದ ತಿನಿಸುಗಳು ಲಭ್ಯವಿರುತ್ತದೆ. ಚೈನೀಸ್, ದಕ್ಷಿಣ ಮತ್ತು ಉತ್ತರ ಭೂ ಪ್ರದೇಶ…
ವನ್ಯಜೀವಿ, ಪರಿಸರ ಸಂರಕ್ಷಣೆ ಕುರಿತು ಯುವ ಜನರಲ್ಲಿ ಜಾಗೃತಿ ಅತ್ಯಗತ್ಯ
July 29, 2019ಮೈಸೂರು,ಜು.28(ಎಂಟಿವೈ)- ಯುವಜನರಲ್ಲಿ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿ ಸುವುದು ಅನಿವಾರ್ಯವಾಗಿದ್ದು, ಎಲ್ಲರೂ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡುವತ್ತ ಗಮನ ಹರಿಸ ಬೇಕೆಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಆ್ಯಂಪಿ ಥಿಯೇಟರ್‍ನಲ್ಲಿ ಭಾನು ವಾರ ನಡೆದ ಯುವ ಸಂಘಟನೆ-2019 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಮೃಗಾಲಯ ಕೇವಲ ಪ್ರವಾ ಸೋದ್ಯಮಕ್ಕೆ ಮಾತ್ರ ಸೀಮಿತಗೊಳ್ಳದೆ,…
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
July 29, 2019ಮೈಸೂರು,ಜು.28(ಪಿಎಂ)- ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಮೈಸೂರಿನ ಕೃಷ್ಣಮೂರ್ತಿ ಪುರಂನ ಮೈಸೂರು ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯ ಉದ್ಘಾಟನೆಯನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಕೆ.ಪುರಾಣಿಕ್ ನೆರವೇರಿಸಿದರು. ಇದೇ ವೇಳೆ ಮಾತ ನಾಡಿದ ಸಹಕಾರ ಸಂಘದ ನಿರ್ದೇ ಶಕರೂ ಆದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ, ಇಷ್ಟು ವರ್ಷ ಕೊನೆ ಘಳಿಗೆಯಲ್ಲಿ ತರಾತುರಿಯಲ್ಲಿ ವಾರ್ಷಿಕ ಸಭೆ…










