ಮೈಸೂರು, ಜು.29(ಪಿಎಂ)- ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ಅಲ್ಲಿನ ಮೂಲ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಏಕಲವ್ಯನಗರ ದಲ್ಲಿ ನೆಲೆಸಿದ್ದ ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಸಲುವಾಗಿ ನರ್ಮ್ ಯೋಜ ನೆಯಡಿ ಬಹುಮಹಡಿ ಮನೆಗಳನ್ನು ಕೋಟ್ಯಾಂ ತರ ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಆದರೆ ಕೊಳಗೇರಿ ಅಭಿವೃದ್ಧಿ ಮಂಡಳಿ ಫಲಾನುಭವಿಗಳ ಆಯ್ಕೆಯಲ್ಲಿ ನೂರಾರು ಅರ್ಹ ಕುಟುಂಬ ಗಳನ್ನು ಕೈಬಿಟ್ಟಿದೆ ಎಂದು ಆರೋಪಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಗಳು ಏಕಲವ್ಯನಗರಕ್ಕೆ ಭೇಟಿ ನೀಡಿ ಫಲಾ ನುಭವಿಗಳನ್ನು ಆಯ್ಕೆ ಮಾಡುವ ಸಮಯ ದಲ್ಲಿ ನೂರಾರು ನಿರ್ಗತಿಕ ಕುಟುಂಬಗಳು ಬೇರೆ ಊರುಗಳಿಗೆ ಕೆಲಸಕ್ಕೆ ಹೋಗಿದ್ದರು. ಇವರನ್ನು ಆಯ್ಕೆ ಪಟ್ಟಿಗೆ ಸೇರಿಸದೇ ಕೈಬಿಡ ಲಾಗಿದೆ. ಈ ಸಂಬಂಧ ನೂರಾರು ಕುಟುಂಬ ಗಳು ತಾವು ಬೇರೆ ಊರಿಗೆ ಹೋಗಿದ್ದ ಹಿನ್ನೆಲೆಯಲ್ಲಿ ಪಟ್ಟಿಗೆ ಸೇರಿಸುವಂತೆ ಪರಿ ಪರಿಯಾಗಿ ಅಧಿಕಾರಿಗಳನ್ನು ಬೇಡಿ ಕೊಂಡರೂ ಪ್ರಯೋಜನವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಲವ್ಯನಗರದ 1,040 ನರ್ಮ್ ಯೋಜನೆ ಮನೆಗಳ ಆಯ್ಕೆ ಪಟ್ಟಿಗೆ ಇಲ್ಲಿನ ನೂರಾರು ನಿರ್ಗತಿಕ ಅಲೆಮಾರಿ ಕುಟುಂಬ ಸೇರಿಸದೇ ವಿವಿಧ ಬಡಾವಣೆಗಳಲ್ಲಿ ವಾಸಿಸುವ ಹಣ ವಂತರಿಗೆ ಹಾಗೂ ರಾಜಕೀಯ ಪ್ರಭಾವ ಉಳ್ಳವರನ್ನು ಆಯ್ಕೆ ಮಾಡಲಾಗಿದೆ. ಈ ಕೂಡಲೇ ಅನರ್ಹ ಫಲಾನುಭವಿಗಳನ್ನು ಜಂಟಿ ಸರ್ವೇ ನಡೆಸಿ ಕೈಬಿಡಬೇಕು ಎಂದು ಆಗ್ರಹಿಸಿದರು. ಅನೇಕ ಅರ್ಹರು ಆಯ್ಕೆ ಪಟ್ಟಿಯಲ್ಲಿ ಕೈಬಿಟ್ಟಿದ್ದರೂ ನರ್ಮ್ ಮನೆ ಗಳಲ್ಲಿ ಆಕ್ರಮಿಸಿಕೊಂಡು ವಾಸ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದನ್ನು ಸಕ್ರಮ ಮಾಡಿಕೊಡುವ ನಿಟ್ಟಿನಲ್ಲಿ ಅವರು ಹಾಲಿ ವಾಸವಿರುವ ನರ್ಮ್ ಮನೆಗಳನ್ನೇ ಮಂಜೂರು ಮಾಡಿಕೊಡಬೇಕು. 62.78 ಕೋಟಿ ರೂ. ವೆಚ್ಚದಲ್ಲಿ ಏಕಲವ್ಯನಗರದ ನರ್ಮ್ ಬಹುಮಹಡಿ ಮನೆಗಳನ್ನು ನಿರ್ಮಿ ಸಲಾಗಿದೆ. ಆದರೆ ಕಟ್ಟಡ ಕಾಮಗಾರಿ ಕಳಪೆ ಯಾಗಿದ್ದು, ಈ ಸಂಬಂಧ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾ ಯಿಸಿದರು. ಬೇಡಿಕೆ ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವು ದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಎಡಿಸಿ ಪೂರ್ಣಿಮಾ, ಇಂದು ಜಿಲ್ಲಾಧಿಕಾರಿಗಳು ರಜೆ ಇದ್ದು, ಬೇಡಿಕೆ ಈಡೇರಿಸುವ ಸಂಬಂಧ ಶೀಘ್ರದಲ್ಲಿ ಕೊಳ ಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂ ದಿಗೆ ಸಭೆ ನಡೆಸಲಾಗುವುದು. ಸಭೆಗೆ ದಿನಾಂಕ ನಿಗದಿಗೊಳಿಸಿ ತಮ್ಮಲ್ಲಿನ ಮುಖಂಡರನ್ನು ಆಹ್ವಾನಿಸಲಾಗುವುದು ಎಂದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು. ಸಂಘಟನೆ ಮುಖಂಡರಾದ ನಿಂಗರಾಜ್ ಮಲ್ಲಾಡಿ, ಹೆಚ್.ಬಿ.ದಿವಾಕರ್, ಬಸವಣ್ಣ, ಕೆ.ನಂಜಪ್ಪ, ದೇವೇಂದ್ರ, ಸೋಮಣ್ಣ, ಪುಟ್ಟಲಕ್ಷ್ಮಮ್ಮ, ವೆಂಕಟೇಶ, ಶ್ರೀಧರ ಪ್ರತಿಭಟನೆಯಲ್ಲಿದ್ದರು.