ಮೈಸೂರು,ಜು.29(ಎಸ್‍ಪಿಎನ್)-ಯುದ್ಧ ಮುಗಿದ ಮೇಲೆ ಶಾಂತಿ ನೆಲೆಸಬೇಕು. ಕುರುಕ್ಷೇತ್ರದಲ್ಲಿ ಯುದ್ದ ಮುಗಿದ ಮೇಲೆ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಈ ಮಾತುಗಳು ಮಹಾಭಾರತದ ಶಾಂತಿ ಪರ್ವದಲ್ಲಿ ಉಲ್ಲೇಖವಿದೆ ಎಂದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ಟಿ.ಕೆ.ಬಡಾವಣೆಯ ಶ್ರೀ ಕೃಷ್ಣಧಾಮದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ 81ನೇ ಮತ್ತು ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಶ್ರೀಪಾದಗಳಂವರ ಅವರ 32ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರವಚನ ನೀಡಿದರು. ಕುರುಕ್ಷೇತ್ರ ಯುದ್ಧ ಮುಗಿದ ನಂತರ ಕೃಷ್ಣ, ಧರ್ಮರಾಯ ಜೊತೆಗೂಡಿ, ಯುದ್ಧ ಭೂಮಿಯಲ್ಲಿ ಶರಶಯ್ಯೆ ಮೇಲೆ ಮಲಗಿದ್ದ ಭೀಷ್ಮಾಚಾರ್ಯರನ್ನು ನೋಡಲು ಹೋಗುತ್ತಾರೆ. ಆಗ ಭೀಷ್ಮಾಚಾರ್ಯರು, ಕೃಷ್ಣ ಮತ್ತು ಧರ್ಮರಾಯನನ್ನು ಕಂಡು ಯುದ್ಧ ಮುಗಿದ ಮೇಲೆ ಶಾಂತಿ ನೆಲೆಸುವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.
ಪಾಪ-ಪುಣ್ಯಗಳ ಬಗ್ಗೆ ವಿವರಣೆ ನೀಡುತ್ತ, ಗೌತಮಿ ಪುತ್ರ ಕಾಡಿನಲ್ಲಿ ನಡೆದುಕೊಂಡು ಹೋಗುವಾಗ ಸರ್ಪ ವೊಂದು ಕಚ್ಚಿದ್ದರಿಂದ ಆ ಹುಡುಗ ಸಾವನ್ನಪ್ಪುತ್ತಾನೆ. ಸಾವಿನ ಕಾರಣ ತಿಳಿಯದೆಯೇ ಕಚ್ಚಿ ಕೊಲೆ ಮಾಡಿದ ಹಾವಿನ ಪಾಪ-ಪುಣ್ಯ ಹಾಗೂ ಶಿಕ್ಷೆಯ ಪ್ರಮಾಣ ವಿಧಿಸುವ ಬಗ್ಗೆ ಚರ್ಚೆ ಪ್ರಾರಂಭವಾಗುತ್ತದೆÉ ಎಂದರು.
ಈ ಚರ್ಚೆ ಎಷ್ಟರ ಮಟ್ಟಿಗೆ ಎಂದರೆ, ಹುಡುಗನನ್ನು ಸಾಯಿಸಿದ ಹಾವಿನ ವಿಚಾರ ಪ್ರಜ್ಞೆ ಇಲ್ಲದ್ದು, ಇದರಲ್ಲಿ ಹಾವಿನ ತಪ್ಪು ಏನೂ ಇಲ್ಲ ಎಂಬ ವಾದ ಆರಂಭವಾಗು ತ್ತದೆ. ಮನುಷ್ಯನಾದರೆ, ತನ್ನ ವಿವೇಚನೆ ಬಳಸಿ, ದಂಡಿಸುತ್ತಾನೆ. ಆದರೆ, ಹಾವು ಆಲೋಚಿಸದೆ ಎದುರಾಳಿಗಳನ್ನು ಸಾಯಿ ಸುವುದರಿಂದ ಅದು ಶಿಕ್ಷೆಗೆ ಅರ್ಹವಲ್ಲ ಎಂಬು ಮಾತು ಗಳು ಕೇಳಿ ಬರುತ್ತದೆ ಎಂದರು. ಮನುಷ್ಯ ಸತ್ತ ನಂತರ ಪಾಪ-ಪುಣ್ಯದ ಚರ್ಚೆಗಳು ನಡೆಯುತ್ತವೆ. ಆದರೆ, ಪ್ರಾಣಿ ಗಳು ಯಾವುದೇ ವಿವೇಚನೆ ಇಲ್ಲದೇ ಹಾವು ಎದುರಾಳಿ ಗಳನ್ನು ಸಾಯಿಸಲು ಮುಂದಾಗುತ್ತದೆ ಎಂದು ಗೌತಮಿ ಪುತ್ರನ ಸಾವಿನ ಪ್ರಕರಣವನ್ನು ಉಲ್ಲೇಖಿಸಿ ತಿಳಿಸಿದರು. ಲೋಕ ಕಂಟಕ ದುರ್ಯೋಧನ ಸತ್ತಾಗ, ಯಾರೂ ದುಃಖಪಡಲಿಲ್ಲ. ಆದರೆ, ಲಕ್ಷಾಂತರ ಸೈನಿಕರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದಿರುವುದಕ್ಕೆ ಭೀಷ್ಮಾಚಾರ್ಯ ಕಣ್ಣೀರು ಹಾಕುತ್ತಾರೆ. ಈ ಸಾವಿಗೆ ನಾನು ಕಾರಣನಾದನೇ ಎಂದು ಕೃಷ್ಣ-ಧರ್ಮರಾಯ ಮುಂದೆ ಮರುಗುತ್ತಿದ್ದ ದೃಶ್ಯವನ್ನು ವಿಶ್ವೇಶ ತೀರ್ಥ ಸ್ವಾಮೀಜಿ ಮನೋಜ್ಞವಾಗಿ ವಿವರಿಸಿದರು.
ರಾಗ, ದ್ವೇಷ ಹಾಗೂ ಮನಸ್ಸಿನಲ್ಲೇ ಕ್ರೋಧ ತುಂಬಿ ಕೊಂಡಿ ರುವ ವ್ಯಕ್ತಿ, ಕೊಲೆಗೆ ಕಾರಣನಾದರೆ, ಶಿಕ್ಷೆಗೂ ಅರ್ಹನಾಗು ತ್ತಾನೆ. ಇದನ್ನು ವಿಮರ್ಶಿಸಿ ಕೊಲೆಗಾರನಿಗೆÉ ಶಿಕ್ಷಿಸುವ ಹಕ್ಕು ನ್ಯಾಯಾಧೀಶರಿಗೆ ನೀಡಲಾಗುತ್ತದೆ. ಅದರಂತೆ ಯಾರೋ ತಮ್ಮ ವಿವೇಚನೆ ಬಳಸಿ, ಸಂವಿಧಾನದಲ್ಲಿರುವ ನೀತಿ-ನಿಯಮಗಳನ್ನು ಪಾಲಿಸಿ ಮರಣದಂಡನೆಗೆ ತೀರ್ಪು ಕೊಡು ತ್ತಾರೋ ಅವರನ್ನು ದೇವರೆಂದೇ ಸಂಬೋಧಿಸುತ್ತೇವೆ ಎಂದರು. ಧರ್ಮ ನಿಷ್ಠೆ, ಸಾಮಾಜಿಕ ನಿಷ್ಠೆಯುಳ್ಳ ನ್ಯಾಯಾಧೀಶರಾದರೆ, ಅಳೆದು ತೂಗಿ ದಾಖಲೆಗಳನ್ನು ಹತಾರು ಬಾರೀ ಅಧ್ಯಯನ ನಡೆಸಿ ಕೊಲೆಗಾರನ ಜೀವ ತೆಗೆಯಲು ಒಪ್ಪಿಗೆ ಸೂಚಿಸು ತ್ತಾರೆ. ಆದರೆ, ಆತನ ಪಾಪ-ಪುಣ್ಯ ಲಾಭಾಂಶವನ್ನು ಭಗವಂತ ನಿರ್ಧರಿಸುತ್ತಾನೆ ಎಂದರು. ವೇದಿಕೆಯಲ್ಲಿ ಕಿರಿಯ ಶ್ರೀಗಳಾದ ವಿಶ್ವ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.