ಬೆಂಗಳೂರು, ಜು. 18- ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ, ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ನಿನ್ನೆ ರಾತ್ರಿ ತಮ್ಮ ಜೊತೆ ಇದ್ದ ಶ್ರೀಮಂತ ಪಾಟೀಲ್ ಅವರು ಆರೋಗ್ಯವಾಗೇ ಇದ್ದರು. ಅವರನ್ನು ಲಕ್ಷ್ಮಣ್ ಸವದಿ ಅಪಹರಿಸಿ, ಚೆನ್ನೈ ಮತ್ತು ಅಲ್ಲಿಂದ ಮುಂಬೈಗೆ ಕೊಂಡೊಯ್ದು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ದೂರು ಸಲ್ಲಿಸಿದೆ. ನಗರ ಪೊಲೀಸ್ ಆಯುಕ್ತರ ಆದೇಶದ…
ಸುಪ್ರೀಂ ಮೊರೆ ಹೋಗಲು ಬಿಜೆಪಿ ಸಿದ್ಧತೆ
July 19, 2019ಬೆಂಗಳೂರು, ಜು.18- ಸ್ಪೀಕರ್ ರಮೇಶ್ ಕುಮಾರ್ ವರ್ತನೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧರಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣದ ಮಧ್ಯಂತರ ಆದೇಶ ಹೊರಬಿದ್ದಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದಲ್ಲೇ ಸ್ಪೀಕರ್ ವರ್ತನೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಬಿಜೆಪಿ ಸಿದ್ಧತೆ ನಡೆಸಿದೆ. ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರೇ ನ್ಯಾಯಾಲಯಕ್ಕೆ ಹಾಜರಾಗಲಿದ್ದು, ಕರ್ನಾಟಕದಲ್ಲಿ ಇದುವರೆವಿಗೂ 7 ವಿಶ್ವಾಸಮತ ಕಲಾಪಗಳು ನಡೆದಿದ್ದು, ಎಲ್ಲವೂ ಕೇವಲ ಒಂದೇ ದಿನದಲ್ಲಿ ಮುಕ್ತಾಯವಾಗಿದೆ. ಹೀಗಿರುವಾಗ…
ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯ ಪೂರ್ವದಲ್ಲೇ ಪಂಚವಾರ್ಷಿಕ ಯೋಜನೆ ಆರಂಭಿಸಿದರು
July 19, 2019ಮೈಸೂರು, ಜು.18(ಪಿಎಂ)- ಸ್ವಾತಂತ್ರ್ಯ ಪೂರ್ವದಲ್ಲೇ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದ ಕೀರ್ತಿ ಜಯಚಾಮರಾಜ ಒಡೆ ಯರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸ್ಮರಿಸಿದರು. ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ದಲ್ಲಿ ಕರ್ನಾಟಕ ರಾಜ್ಯ ಅರಸು ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀಮನ್ ಮಹಾರಾಜ ವಾಗ್ಗೇಯಕಾರ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಾಬ್ಧಿ 2019-2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯ ಬಳಿಕ ನೆಹರು ಸರ್ಕಾರ ಪಂಚವಾರ್ಷಿಕ ಯೋಜನೆ ಜಾರಿಗೆ…
ಕೆಲಸಕ್ಕೆ ಸೇರಿದ ಮೊದಲ ದಿನ ಜೀವನದ ಕಡೇ ದಿನವೂ ಆಯ್ತುತೀವ್ರ ಹೃದಯಾಘಾತದಿಂದ ಯುವಕ ಸಾವು
July 19, 2019ಮೈಸೂರು,ಜು.18(ಆರ್‍ಕೆ)-ಕೆಲಸಕ್ಕೆ ಸೇರಿದ ಮೊದಲ ದಿನವೇ ಯುವಕನ ಪಾಲಿಗೆ ಜೀವನದ ಕಡೇ ದಿನವಾದ ಹೃದಯ ಕಲಕುವ ಘಟನೆ ಮೈಸೂರಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮೈಸೂರು ಗಾಂಧಿನಗರದ ಅಣ್ಣಮ್ಮ ಕೇರಿ 2ನೇ ಕ್ರಾಸ್ ನಿವಾಸಿ ಎನ್. ರಾಜು ಅವರ ಮಗ ಆರ್.ಪರಶುರಾಂ (26) ಸಾವನ್ನಪ್ಪಿದ ಯುವಕ. ನಿವೃತ್ತ ಕೆಎಸ್‍ಆರ್‍ಟಿಸಿ ನೌಕರನಾದ ರಾಜು ಅವರ ಮಗ ಪರಶುರಾಂ ಇದುವರೆಗೂ ನಿರುದ್ಯೋಗಿಯಾಗಿದ್ದು, ಜೀವನೋಪಾಯಕ್ಕಾಗಿ ಬುಧವಾರವಷ್ಟೇ ಮಂಡಿ ಮೊಹ ಲ್ಲಾದ ನಿಮಿಷಾಂಬ ಎಂಟರ್‍ಪ್ರೈಸಸ್ ನಂದಿನಿ ಹಾಲಿನ ಏಜೆನ್ಸಿಯೊಂದರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದರು. ಹಾಲಿನ ವಾಹನವು…
ಪರ್ಯಾಯ ಇಂಧನವಾಗಿ ಅಣು ವಿದ್ಯುತ್ ಅವಲಂಬನೆ ಅನಿವಾರ್ಯ
July 19, 2019ಮೈಸೂರು, ಜು.18(ಎಸ್‍ಪಿಎನ್)- ಭಾರತ ಎಲ್ಲಾ ಕ್ಷೇತ್ರದಲ್ಲೂ ಸದೃಢ ದೇಶವಾಗಿ ಹೊರ ಹೊಮ್ಮಬೇಕಾ ದರೆ, ಪರ್ಯಾಯ ಇಂಧನವಾಗಿ ಅಣುವಿದ್ಯುತ್ ಉತ್ಪಾ ದನೆಗೆ ಹೆಚ್ಚಿನ ಅವಲಂಬನೆ ಅನಿವಾರ್ಯ ಎಂದು ಇಂಜಿ ನಿಯರ್ ಮಧುಸೂದನ್ ಓಜಾ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ಸುಸ್ಥಿರ ಅಭಿವೃದ್ಧಿಗೆ ಪರ ಮಾಣು ಶಕ್ತಿಯ ಪಾತ್ರ’ ವಿಷಯ ಕುರಿತು ಮಾತ ನಾಡಿದ ಅವರು, ಉಷ್ಣ ವಿದ್ಯುತ್, ಜಲವಿದ್ಯುತ್ ಮತ್ತು ನವೀಕರಿಸಬಹುದಾದ…
ಬಿಜೆಪಿಯವರು ನಿನ್ನನ್ನ ಡಿಸಿಎಂ ಮಾಡಲ್ಲ ನಮ್ಮ ಪಕ್ಷಕ್ಕೆ ಬಾ!
July 19, 2019ಶ್ರೀರಾಮುಲುಗೆ ಸದನದಲ್ಲೇ ದೋಸ್ತಿ ನಾಯಕರ ಆಪರೇಷನ್? ಬೆಂಗಳೂರು, ಜು.18- ರಮೇಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡ್ತಾರೆ, ಬಿಜೆಪಿ ಯಲ್ಲಿ ಯಾವುದೇ ಕಾರಣಕ್ಕೂ ನಿನಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಶಾಸಕ ಶ್ರೀರಾಮುಲುಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಮುಂದೂಡಿದ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ಭೋಜನಕ್ಕೆ ತೆರಳಿದರು. ಈ ವೇಳೆ ಸದನದಲ್ಲಿಯೇ ಇದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ.ಶಿವಕುಮಾರ್ ಓಪನ್ ಆಪರ್ ನೀಡಿದ್ದಾರೆ ಎನ್ನಲಾಗುತ್ತಿದೆ. ನಂತರ ರಾಮುಲು ಬಳಿ ಬಂದ…
70 ವರ್ಷವಾದರೂ ಸಿಗದ ಗುಣಾತ್ಮಕ ಶಿಕ್ಷಣ
July 19, 2019ಮೈಸೂರು, ಜು.18(ಆರ್‍ಕೆಬಿ)- ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಕ್ಕಿಲ್ಲ. ಅದನ್ನು ಇನ್ನೂ ಹುಡುಕುತ್ತಲೇ ಇದ್ದೇವೆ ಎಂದು ಪ್ರಗತಿಪರ ಚಿಂತಕ ಪ.ಮಲ್ಲೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ) ಗುರುವಾರ ಆಯೋ ಜಿಸಿದ್ದ `ಶಾಲಾಭಿವೃದ್ಧಿ ಯೋಜನೆ ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಮಹತ್ವ’ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗುಣಾ ತ್ಮಕ ಶಿಕ್ಷಣ ಬೇಕು ಎಂಬುದಾದರೆ ಅದಕ್ಕೆ ಬದ್ಧತೆ ಅಗತ್ಯ….
ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣ ಚರ್ಚೆಯಲ್ಲಿ ಹಿನ್ನಡೆ
July 19, 2019ಮೈಸೂರು,ಜು.18(ಆರ್‍ಕೆಬಿ)-ನಮ್ಮ ಲ್ಲಿರುವ ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣದ ಚರ್ಚೆಯಲ್ಲಿ ನಾವು ಹಿಂದುಳಿ ದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸ ಗಂಗೋ ತ್ರಿಯ ಕಾನೂನು ಶಾಲೆ ಸಭಾಂಗಣದಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ-2019’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಶಿಕ್ಷಣದ ಇತಿಹಾಸ ನೋಡಿದರೆ ನಾವು ಶೈಕ್ಷಣಿಕವಾಗಿ ಹಿಂದುಳಿದಿರು ವುದು ಕಾಣುತ್ತದೆ. ಶಿಕ್ಷಣ ನೀತಿಯನ್ನು ಒಂದಲ್ಲ, ಹತ್ತಾರು ಬಾರಿ ಓದಿ ಮನನ ಮಾಡಿಕೊಳ್ಳಬೇಕು ಎಂದರು. ಶಿಕ್ಷಣ ನೀತಿಯ ಬಗ್ಗೆ ನಿಖರ ಸಲಹೆ ಗಳನ್ನು…
ದೋಸ್ತಿ ಕ್ಲೈಮ್ಯಾಕ್ಸ್: ಕೊನೆ ಘಳಿಗೆ ಪ್ರಯತ್ನ ಪವಾಡ ಸದೃಶ ಫಲ ನೀಡಬಹುದೇ…!?
July 18, 2019ಬೆಂಗಳೂರು: ಶಾಸಕರ ರಾಜೀ ನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗುವಂತೆ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಆದೇಶ ನೀಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕೋ ಅನರ್ಹಗೊಳಿಸಬೇಕೋ ಎಂಬ ಕುರಿತು ನಿಮ್ಮ ಕಾಲಮಿತಿ ಯಲ್ಲಿ ನೀವು ನಿರ್ಧಾರ ತೆಗೆದುಕೊಳ್ಳಿ. ಆದರೆ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗ ಬೇಕೆಂದು ಒತ್ತಾಯಿಸಬೇಡಿ ಎಂದು ಸ್ಪೀಕರ್ ಅವರಿಗೆ ಸುಪ್ರೀಂಕೋರ್ಟ್…
ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮತ್ತೊಮ್ಮೆ ವಿಪ್
July 18, 2019ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಸದನದಲ್ಲಿ ಭಾಗವಹಿಸುವಂತೆ ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಿತ್ತು. ಈಗ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಗುರುವಾರ ಕಲಾಪದಲ್ಲಿ ಭಾಗಿಯಾಗುವಂತೆ ಮತ್ತೊಮ್ಮೆ ವ್ಹಿಪ್ ಜಾರಿ ಮಾಡಲಾ ಗಿದೆ ಎಂದು ವಿಧಾನಸಭೆ ಆಡಳಿತಪಕ್ಷದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ. ಪ್ರಕೃತಿ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ನಾಯಕರ ಜೊತೆ ಚರ್ಚಿಸಿ ಶಾಸಕರಿಗೆ ವ್ಹಿಪ್ ಜಾರಿ ಮಾಡಲಾಗಿದ್ದು, ಶಾಸಕರ ಮನೆಗಳಿಗೆ ವಿಪ್ ತಲುಪಿಸಲಾಗುತ್ತದೆ. ನಾಳೆ ಸದನದಲ್ಲಿ ಏನಾಗಲಿದೆ…










