ಮೈಸೂರು,ಜು.17(ಆರ್‍ಕೆ)-ಅಧಿಕ ಪ್ರಮಾಣದಲ್ಲಿ (ಬಲ್ಕ್ ಯೂಸ್) ವಿದ್ಯುತ್ ಬಳಕೆ ಮಾಡಿಕೊಳ್ಳುವ ವರಿಗೆ ದರದಲ್ಲಿ ರಿಯಾಯಿತಿ ನೀಡಿ ಎಂದು ರೈತರು ಹಾಗೂ ಕೈಗಾರಿಕೋದ್ಯಮಿಗಳು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಇಂದು ಏರ್ಪಡಿಸಿದ್ದ ವಿದ್ಯುತ್ ಗ್ರಾಹಕ ರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಕೈಗಾರಿಕೋದ್ಯಮಿ ಜಯಂತ್ ಅವರು ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವ ಕೈಗಾರಿಕೆಗಳು, ರೈತರ ಕೃಷಿ ಪಂಪ್…
ಮೈಸೂರಲ್ಲಿ 6 ದಿನ `ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಮೇಳ
July 18, 2019ಮೈಸೂರು,ಜು.17(ವೈಡಿಎಸ್)-ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೋಟೆಲ್ ಸದರನ್ ಸ್ಟಾರ್‍ನಲ್ಲಿ ಜು.17ರಿಂದ 22ರವರೆಗೆ 6 ದಿನಗಳ ಕಾಲ ಪರಿಶುದ್ಧ ರೇಷ್ಮೇ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ `ಸಿಲ್ಕ್ ಇಂಡಿಯಾ-2019’ ಆಯೋಜಿಸಲಾಗಿದೆ. ಹಸ್ತ ಶಿಲ್ಪಿ ವತಿಯಿಂದ ಆಯೋಜಿಸಿರುವ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿದ್ದು, 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮ್ಮ ರಾಜ್ಯಗಳ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ ತಸ್ಸರ್…
ಮೈಸೂರು ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ವಿಮಾನದಲ್ಲಿ ಹೃದಯ, ಶ್ವಾಸಕೋಶ ರವಾನೆ
July 18, 2019ಸಂಚಾರ ಪೊಲೀಸರಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮೈಸೂರು: ಮೈಸೂರಿನಿಂದ ತಮಿಳುನಾಡಿನ ಚೆನ್ನೈಗೆ ಜೀವಂತ ಹೃದಯ ಮತ್ತು ಶ್ವಾಸಕೋಶವನ್ನು ಬುಧವಾರ ಸಂಜೆ ರವಾನಿಸಲಾಯಿತು.ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ತಮಿಳುನಾಡಿನ ಚೆನ್ನೈಗೆ ರವಾನಿಸಲು ಪೆÇಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಮಂಡ್ಯ ಮೂಲದ ವ್ಯಕ್ತಿಯೊಬ್ಬರು ವಾಯುವಿಹಾರಕ್ಕೆ ಹೋಗಿದ್ದಾಗ ಅಪಘಾತ ವಾಗಿ ಜು.16ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬ್ರೈನ್ ಇಂಜುರಿ ಯಾಗಿ ಬದುಕುಳಿಯುವುದು ಕಷ್ಟಸಾಧ್ಯ ವಾಗಿತ್ತು. ಆದರೆ, ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ…
ಕಾಫಿ ಕುಡಿಯುತ್ತಿದ್ದ ವ್ಯಕ್ತಿ ಜೇಬಿಗೆ ಕತ್ತರಿ ಹಾಕಿ 2 ಲಕ್ಷ ಕಳವು: 24 ಗಂಟೆಯಲ್ಲಿ ಖದೀಮರ ಬಂಧನ
July 18, 2019ಮೈಸೂರು,ಜು.17(ಎಂಕೆ)-ಕಾಫಿ ಕುಡಿಯುತ್ತಿದ್ದ ವ್ಯಕ್ತಿಯ ಪ್ಯಾಂಟ್ ಜೇಬನ್ನು ಬ್ಲೇಡ್‍ನಿಂದ ಕತ್ತರಿಸಿ 2 ಲಕ್ಷ ರೂ. ಎಗರಿಸಿದ್ದ ಖದೀಮರನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಲಷ್ಕರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗೌಸಿಯಾನಗರದ ನಿವಾಸಿ ಅಕ್ರಂಖಾನ್ ಅಲಿಯಾಸ್ ಅಕ್ರಂ(42), ರಾಜೀವ್‍ನಗರ ನಿವಾಸಿ ಅಸ್ಗರ್ ಅಹ್ಮದ್(40) ಬಂಧಿತರು. ಇವರಿಬ್ಬರು ಜು.6 ರಂದು ಶ್ರೀರಂಗ ಪಟ್ಟಣದ ನಿವಾಸಿ ಮರೀಗೌಡ ಎಂಬುವರು ಚಿನ್ನ ಖರೀದಿಸಲು 2 ಲಕ್ಷ ಹಣದೊಂದಿಗೆ ಮೈಸೂರಿಗೆ ಬಂದಿದ್ದು, ಅಶೋಕ ರಸ್ತೆಯ ಕೋತಾಸ್ ಕಾಫಿ ಷಾಪ್‍ನಲ್ಲಿ ಕಾಫಿ ಕುಡಿಯುತ್ತಿದ್ದಾಗ ಜೇಬನ್ನು ಬ್ಲೇಡ್‍ನಿಂದ ಕತ್ತರಿಸಿ ಹಣವನ್ನು…
ಜಾಬ್ ಚಾರ್ಟ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಲೆಕ್ಕಿಗರ ಪ್ರತಿಭಟನೆ
July 18, 2019ಮೈಸೂರು,ಜು.17(ಪಿಎಂ)-ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ್ ನೀಡ ಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ವತಿಯಿಂದ ಬುಧವಾರ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲಾಯಿತಲ್ಲದೆ, ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿ ಗಳ ಕೇಂದ್ರ ಸಂಘದ ಕರೆ ಮೇರೆಗೆ ಇಂದು ರಾಜ್ಯವ್ಯಾಪಿ ಗ್ರಾಮ ಲೆಕ್ಕಿಗರು ಒಂದು ದಿನದ ಮುಷ್ಕರ ನಡೆಸಿ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಆಯಾಯ ಜಿಲ್ಲಾಧಿಕಾರಿಗಳಿಗೆ ಬೇಡಿಕೆ…
ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣ ಚರ್ಚೆಯಲ್ಲಿ ಹಿನ್ನಡೆ
July 18, 2019ಮೈಸೂರು,ಜು.17(ಆರ್‍ಕೆಬಿ)-ನಮ್ಮ ಲ್ಲಿರುವ ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣದ ಚರ್ಚೆಯಲ್ಲಿ ನಾವು ಹಿಂದುಳಿ ದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಕಾನೂನು ಶಾಲೆ ಸಭಾಂಗಣದಲ್ಲಿ ಬುಧ ವಾರ `ರಾಷ್ಟ್ರೀಯ ಶಿಕ್ಷಣ ನೀತಿ-2019’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಶಿಕ್ಷಣದ ಇತಿಹಾಸ ನೋಡಿ ದರೆ ನಾವು ಶೈಕ್ಷಣಿಕವಾಗಿ ಹಿಂದುಳಿದಿ ರುವುದು ಕಾಣುತ್ತದೆ. ಶಿಕ್ಷಣ ನೀತಿಯನ್ನು ಒಂದಲ್ಲ, ಹತ್ತಾರು ಬಾರಿ ಓದಿ ಮನನ ಮಾಡಿಕೊಳ್ಳಬೇಕು ಎಂದರು. ಶಿಕ್ಷಣ ನೀತಿಯ ಬಗ್ಗೆ ನಿಖರ ಸಲಹೆ…
ಕಾರು ಡಿಕ್ಕಿ: ಇಬ್ಬರು ಯುವಕರ ಸಾವು, ಮತ್ತಿಬ್ಬರಿಗೆ ಗಾಯ
July 18, 2019ಮೈಸೂರು,ಜು.17(ಎಂಕೆ)-ಅಪರಿಚಿತ ಕಾರೊಂದು ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣದ ಬಸಲಾಪುರ ಗೇಟ್ ಬಳಿ ಬುಧವಾರ ನಡೆದಿದೆ. ಪಿರಿಯಾಪಟ್ಟಣದ ಪರಿವಾರ ಬೀದಿ ನಿವಾಸಿ, ಕುಮಾರ ನಾಯಕ ಅವರ ಪುತ್ರ ಪ್ರಮೋದ್(18), ಹುಣಸೂರಿನ ಮಂಜುನಾಥ ಬಡಾವಣೆ ನಿವಾಸಿ ರಾಜಣ್ಣ ಅವರ ಪುತ್ರ ದರ್ಶನ್(20) ಮೃತಪಟ್ಟವರು. ಗಾಯಗೊಂಡವರು ವಿನಯ್ ಮತ್ತು ವಿಕಾಸ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತ ಯುವಕ ಪ್ರಮೋದ್ ತನ್ನ ಸ್ನೇಹಿತರೊಂದಿಗೆ ಕಂಪಲಾಪುರದಲ್ಲಿ ಹುಟ್ಟು ಹಬ್ಬ ಆಚರಿಸಲು…
ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು
July 17, 2019ನವದೆಹಲಿ, ಜು.16- ಅತೃಪ್ತ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಾಳೆ ಬೆಳಿಗ್ಗೆ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾ ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಾದ-ಪ್ರತಿವಾದ ಮುಗಿಸಿ, ತೀರ್ಪು ಕಾಯ್ದಿರಿಸುತ್ತಿದ್ದಂತೆ ಇತ್ತ ಉಭಯ ಪಕ್ಷಗಳ 15 ಬಂಡಾಯ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ವ್ಹಿಪ್ ಜಾರಿ ಮಾಡಿ, ಚದುರಂಗದ ಆಟದಲ್ಲಿ ದಾಳ ಹಾಕಿದೆ. ಬುಧವಾರ ನೀಡಲಿರುವ ತೀರ್ಪು…
ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಶೇ.12.5ರಷ್ಟು ವೇತನ ಹೆಚ್ಚಳ
July 17, 2019ಬೆಂಗಳೂರು, ಜು.16-ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಧೂಳು ಹಿಡಿದಿದ್ದ ಔರಾದ್ಕರ್ ಸಮಿತಿ ಶಿಫಾರಸ್ಸನ್ನು ಭಾಗಶಃ ಮಾನ್ಯ ಮಾಡಿ, ಪೊಲೀಸರಿಗೆ ಶೇ. 12.5 ರಷ್ಟು ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ. ಇದಲ್ಲದೆ, ವೇತನದ ಜೊತೆಗೆ ಅವರಿಗೆ ಸರ್ಕಾರಿ ನೌಕರರಿಗೆ ಸಿಗುವ ಇತರೆ ಸವಲತ್ತುಗಳಲ್ಲೂ ಹೆಚ್ಚಳ ಮಾಡಿದ್ದು, ಇದರಿಂದ ಪೊಲೀಸರು ಒಂದಷ್ಟು ನಿರಾಳವಾದಂತೆ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರ ದಿಂದ 600 ಕೋಟಿ ರೂ. ವಾರ್ಷಿಕ…
ಪ್ರತಿಭಟನೆ ಕೈಬಿಟ್ಟ ಶಾಲಾ ಮಕ್ಕಳ ವಾಹನ ಚಾಲಕರು
July 17, 2019ಮೈಸೂರು, ಜು.16(ಆರ್‍ಕೆಬಿ)-ಓಮ್ನಿ ವಾಹನ ದಲ್ಲಿ 12 ಮಕ್ಕಳು, ಆಟೋಗಳಲ್ಲಿ 8 ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡುವಂತೆ ಆಗ್ರಹಿಸಿ ಶಾಲಾ ಮಕ್ಕಳ ಸಾಗಿಸುವ ಓಮ್ನಿ ಮತ್ತು ಆಟೋ ಚಾಲಕರು ಸೋಮವಾರದಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಭರವಸೆ ಮೇರೆಗೆ ಇಂದು ಕೈಬಿಟ್ಟು ಮಕ್ಕಳನ್ನು ಕರೆದೊಯ್ಯುವ ಕಾರ್ಯಕ್ಕೆ ಮರಳಿದರು. ಓಮ್ನಿ ವಾಹನದಲ್ಲಿ 8 ಮತ್ತು ಆಟೋಗಳಲ್ಲಿ 5 ಮಕ್ಕಳನ್ನು ಕರೆದೊಯ್ಯಲಾಗುತ್ತಿದ್ದು, ಇದರಿಂದ ನಮ್ಮ ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಮಕ್ಕಳನ್ನು ಕಾನೂನು ಬದ್ಧವಾಗಿ ಜವಾಬ್ದಾರಿಯಿಂದ ಶಾಲೆಗೆ ಕರೆದೊಯ್ದು ಮತ್ತೆ…










