ಮೈಸೂರು

ಬೃಂದಾವನ ದೀಪಾಲಂಕಾರವೂ ಬಂದ್:ನಿರಾಸೆಯಿಂದ ವಾಪಸ್ಸಾದ ಪ್ರವಾಸಿಗರು
ಮೈಸೂರು

ಬೃಂದಾವನ ದೀಪಾಲಂಕಾರವೂ ಬಂದ್:ನಿರಾಸೆಯಿಂದ ವಾಪಸ್ಸಾದ ಪ್ರವಾಸಿಗರು

July 16, 2019

ಶ್ರೀರಂಗಪಟ್ಟಣ, ಜು.15(ವಿನಯ್)- ಕಳೆದ 4 ತಿಂಗಳಿಂದ ಸಂಬಳ ನೀಡಿಲ್ಲ ವೆಂದು ಕೆ.ಆರ್.ಸಾಗರದ ನೂರಾರು ಗುತ್ತಿಗೆ ನೌಕರರು ಕಾವೇರಿ ನೀರಾವರಿ ನಿಗಮದ ಮುಖ್ಯ ಕಚೇರಿ ಮುಂಭಾಗ ದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ದರು. ಅಧಿಕಾರಿಗಳು ಕೆಲವೇ ದಿನಗಳಲ್ಲಿ ಸಂಬಳ ನೀಡುವುದಾಗಿ ಹೇಳಿದರೂ ಯಾವುದಕ್ಕೂ ಬಗ್ಗದ ಪ್ರತಿಭಟನಾ ನಿರತರು ಸಂಜೆವರೆಗೂ ಪ್ರತಿಭಟನೆ ನಡೆಸಿದರು. ಇದರಿಂದ ಸಂಜೆ ಬೃಂದಾವನದ ದೀಪಾಲಂಕಾರ ಬಂದ್ ಆಯಿತು. ಈ ಕಾರಣದಿಂದ ಬೃಂದಾವನದ ದೀಪಾಲಂಕಾರ ನೋಡಲು ಬಂದಿದ್ದ ಸುಮಾರು ಎರಡರಿಂದ ಮೂರು ಸಾವಿರ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗಿದರು….

ಮಂಡ್ಯ ರೈತರಿಗೆ ಸಿಹಿ ಸುದ್ದಿ: ನಾಲೆಗಳಿಗೆ ನೀರು ಹರಿಸಲು ನಿರ್ಧಾರ
ಮೈಸೂರು

ಮಂಡ್ಯ ರೈತರಿಗೆ ಸಿಹಿ ಸುದ್ದಿ: ನಾಲೆಗಳಿಗೆ ನೀರು ಹರಿಸಲು ನಿರ್ಧಾರ

July 16, 2019

ಮಂಡ್ಯ, ಜು.15(ನಾಗಯ್ಯ)- ರೈತರ ಬೆಳೆಗಳಿಗೆ ಕೆಆರ್‍ಎಸ್ ಜಲಾಶಯದಿಂದ ನೀರು ಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಂಗಳವಾರದಿಂದ (ಜು.16) 10 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಕಾವೇರಿ ಅಚ್ಚು ಕಟ್ಟು ವ್ಯಾಪ್ತಿಯ ಸಚಿವರು, ಶಾಸಕರು ಹಾಗೂ ಕಾವೇರಿ ಉಸ್ತುವಾರಿ ಸಮಿತಿ ಸದಸ್ಯರು ಬೆಳೆಗಳ ರಕ್ಷಣೆ ಹಾಗೂ ಕುಡಿಯಲು ನೀರು ಬಿಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ಐಸಿಸಿ ಸಭೆಯ ನಿರ್ಣಯದ ಪ್ರಕಾರ ನಾಳೆಯಿಂದ…

ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಮೈಸೂರು

ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ

July 16, 2019

ಮೈಸೂರು,ಜು.15-ಮೈಸೂರು ಮಹಾ ನಗರಪಾಲಿಕೆಯಲ್ಲಿ ವಿವಿಧ ಯೋಜನೆಗಳ ಅನುದಾನವನ್ನು ಅವೈಜ್ಞಾನಿಕವಾಗಿ ಬಳ ಸುತ್ತಿರುವುದು ಮಾತ್ರವಲ್ಲದೇ, ವಾರ್ಡ್ ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 14ನೇ ಹಣಕಾಸು ಆಯೋಗದ ಅನು ದಾನದಲ್ಲಿ ಹೆಚ್ಚಿನ ಅನುದಾನವನ್ನು ಕುಡಿ ಯುವ ನೀರಿಗೆ ನೀಡಬೇಕಾಗಿದ್ದು, ಅದಕ್ಕಾಗಿ ಶೇ.20ರಷ್ಟು ಅನುದಾನ ಮೀಸ ಲಿಡುವ ಬದಲು ಕೇವಲ ಶೇ. 13ರಷ್ಟು ಮೀಸಲಿಡಲಾಗಿದೆ. ಕಬಿನಿಯಿಂದ ಬರುವ ಬಿದರುಗೂಡು ನೀರು ಸಂಗ್ರಹಾಗಾರದಲ್ಲಿ ಪ್ರತಿನಿತ್ಯ 82 ರಿಂದ 85…

ನಾಳೆಯಿಂದ `ಹಸ್ತಶಿಲ್ಪಿ – ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ
ಮೈಸೂರು

ನಾಳೆಯಿಂದ `ಹಸ್ತಶಿಲ್ಪಿ – ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ

July 16, 2019

ಮೈಸೂರು,ಜು.15(ಆರ್‍ಕೆಬಿ)- ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮೈಸೂ ರಿನ ಸದರನ್ ಸ್ಟಾರ್ ಹೋಟೆಲ್‍ನಲ್ಲಿ ಜು.17ರಿಂದ 22ರವರೆಗೆ ಆರು ದಿನಗಳ ಹಸ್ತ ಶಿಲ್ಪಿ `ಸಿಲ್ಕ್ ಇಂಡಿಯಾ’ ಭಾರತದ ಎಲ್ಲಾ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಭಾರೀ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಕುಶಲ ಕರ್ಮಿಗಳು ಮತ್ತು ನೇಕಾರರ ಶ್ರೇಯೋಭಿ ವೃದ್ಧಿ ಸಂಸ್ಥೆಯಾದ ಹಸ್ತ ಶಿಲ್ಪಿ ವತಿ ಯಿಂದ…

ಇನ್ನು ಮುಂದೆ ಮುಕ್ತ ವಿವಿ ಪಠ್ಯಕ್ರಮ ಬೋಧನೆ ಯೂಟ್ಯೂಬ್‍ನಲ್ಲಿ ಲಭ್ಯ
ಮೈಸೂರು

ಇನ್ನು ಮುಂದೆ ಮುಕ್ತ ವಿವಿ ಪಠ್ಯಕ್ರಮ ಬೋಧನೆ ಯೂಟ್ಯೂಬ್‍ನಲ್ಲಿ ಲಭ್ಯ

July 16, 2019

ಮೈಸೂರು,ಜು.15(ಆರ್‍ಕೆ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (Ksou)ದ ವಿದ್ಯಾರ್ಥಿಗಳು ಇನ್ನು ಮುಂದೆ ಯೂಟ್ಯೂಬ್‍ನಲ್ಲೇ ತಮ್ಮ ತಮ್ಮ ಕೋರ್ಸುಗಳ ಪಠ್ಯಕ್ರಮದ ಬೋಧನೆಯನ್ನು ವೀಕ್ಷಿಸಿ ಅಧ್ಯಯನ ಮಾಡಬಹುದಾಗಿದೆ. ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿ ಗಳಿಗೆ ಅವರಿರುವ ಸ್ಥಳದಲ್ಲೇ ತಜ್ಞ ಪ್ರಾಧ್ಯಾ ಪಕರು ನೀಡುವ ಉಪನ್ಯಾಸ ಆಲಿಸಿ, ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವು ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಮೈಸೂರಿನಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ…

ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿದಾರರ ವಿರುದ್ಧ ದೂರಿನ ಸುರಿಮಳೆ
ಮೈಸೂರು

ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿದಾರರ ವಿರುದ್ಧ ದೂರಿನ ಸುರಿಮಳೆ

July 16, 2019

ಮೈಸೂರು,ಜು.15(ಎಂಟಿವೈ)-ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಖಾಸಗಿ ಹಣ ಕಾಸು ಸಂಸ್ಥೆಗಳ ಏಜೆಂಟರು, ಬ್ಯಾಂಕ್ ಅಧಿಕಾರಿಗಳು, ಲೇವಾದೇವಿ ದಾರರಿಂದ ಆಗುತ್ತಿರುವ ಕಿರುಕುಳ ಹಾಗೂ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳ ವಿಳಂಬ ಧೋರಣೆ ಕುರಿತಂತೆ ಹಲವಾರು ದೂರು ಗಳು ಸಲ್ಲಿಕೆಯಾದವು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಕ್ರಿಯವಾಗಿರುವ ರೈತ ಸಂಘಟನೆಗಳ ಎಲ್ಲಾ ಮುಖಂಡರು, ರೈತ ಹೋರಾಟ ಗಾರರು ಸಭೆಯಲ್ಲಿ ಪಾಲ್ಗೊಂಡು ಸಾಲ ಪಡೆಯಲು ರೈತರು ಅನುಭವಿಸುತ್ತಿರುವ…

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ವಂಚನೆ ಆರೋಪ
ಮೈಸೂರು

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ವಂಚನೆ ಆರೋಪ

July 16, 2019

ಮೈಸೂರು,ಜು.15(ಎಸ್‍ಬಿಡಿ)-ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರನ್ನು ನಿಯೋಜಿ ಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮ ವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಕಬ್ಬು ತೂಕದಲ್ಲಿ ಮಹಾಮೋಸ ವಾಗುತ್ತಿದೆ. 300ಕ್ಕೂ ಹೆಚ್ಚು ಲಾರಿಗಳು ಸರತಿಯಲ್ಲಿ ನಿಲ್ಲಿಸಿ ಕೊಳ್ಳಲಾಗುತ್ತದೆ. ಲಾರಿ ಕಾರ್ಖಾನೆಯ…

ಕೆಆರ್, ಚೆಲುವಾಂಬ ಆಸ್ಪತ್ರೆ ಭದ್ರತಾ ಸಿಬ್ಬಂದಿಗೆ ಪೊಲೀಸರ ನೀತಿ ಪಾಠ
ಮೈಸೂರು

ಕೆಆರ್, ಚೆಲುವಾಂಬ ಆಸ್ಪತ್ರೆ ಭದ್ರತಾ ಸಿಬ್ಬಂದಿಗೆ ಪೊಲೀಸರ ನೀತಿ ಪಾಠ

July 16, 2019

ಮೈಸೂರು,ಜು.15(ಆರ್‍ಕೆ)- ಮೈಸೂ ರಿನ ಕೆಆರ್ ಮತ್ತು ಚೆಲುವಾಂಬ ಆಸ್ಪತ್ರೆ ಗಳ ಭದ್ರತಾ ವ್ಯವಸ್ಥೆ ಬಲಪಡಿಸಲು ಆಡಳಿತ ಮಂಡಳಿ ಮುಂದಾಗಿದೆ. ಆಸ್ಪತ್ರೆಗಳಲ್ಲಿ ಆಗಿಂದಾಗ್ಗೆ ಗಲಾಟೆ, ಗೊಂದಲ, ವಾಗ್ಯುದ್ಧಗಳಂತಹ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಸಲುವಾಗಿ ಇಂದು ಕೆ.ಆರ್.ಆಸ್ಪತ್ರೆ ಸಭಾಂಗಣದಲ್ಲಿ ಎರಡೂ ಆಸ್ಪತ್ರೆಗಳ ಸುಮಾರು 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಮತ್ತು ಸಬ್ ಇನ್ಸ್‍ಪೆಕ್ಟರ್ ರಾಜು ಅವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. ತಮಗೆ ನಿಯೋಜಿತ ಸ್ಥಳದಲ್ಲಿ ಸಮ ವಸ್ತ್ರಧಾರಿಗಳಾಗಿ ಶಿಸ್ತಿನಿಂದ ಕಾರ್ಯ ನಿರ್ವಹಿಸಬೇಕು, ಹೆಚ್ಚು ರೋಗಿಗಳು ಸೇರುವ…

ಈ ಬಾರಿಯೂ ದಸರೆಗೆ 12 ಆನೆ ಆಯ್ಕೆಗೆ ಅರಣ್ಯ ಇಲಾಖೆ ನಿರ್ಧಾರ
ಮೈಸೂರು

ಈ ಬಾರಿಯೂ ದಸರೆಗೆ 12 ಆನೆ ಆಯ್ಕೆಗೆ ಅರಣ್ಯ ಇಲಾಖೆ ನಿರ್ಧಾರ

July 16, 2019

ಮೈಸೂರು,ಜು.15(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ `ಗಜಪಡೆ’ ಸಿದ್ಧಪಡಿಸಲು ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಈ ತಿಂಗಳ 2ನೇ ವಾರದಲ್ಲಿ ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಲಿದೆ. ಜಂಬೂ ಸವಾರಿಗೂ 2 ತಿಂಗಳು ಮುನ್ನವೇ ದಸರಾ ಆನೆ ಗಳನ್ನು ವಿವಿಧ ಶಿಬಿರಗಳಿಂದ ಮೈಸೂರಿಗೆ ಕರೆತರುವ ಸಂಪ್ರದಾಯವಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸ ಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರ ನಂತರ ಮೊದಲ ತಂಡದಲ್ಲಿ ಆರು ಆನೆಗಳನ್ನು ಅರಮನೆ ಅಂಗಳಕ್ಕೆ ಕರೆತರ ಬೇಕಾಗಿರುವುದರಿಂದ…

ಕಲಾಮಂದಿರ ಆವರಣ ಸೌಂದರ್ಯೀಕರಣ ಲೋಕಾರ್ಪಣೆ
ಮೈಸೂರು

ಕಲಾಮಂದಿರ ಆವರಣ ಸೌಂದರ್ಯೀಕರಣ ಲೋಕಾರ್ಪಣೆ

July 16, 2019

ಮೈಸೂರು, ಜು.15(ಎಂಕೆ)- ಮೈಸೂ ರಿನ ಕರ್ನಾಟಕ ಕಲಾಮಂದಿರದ ಆವರಣ ದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಮೈಸೂರು ಘಟಕದ ವತಿ ಯಿಂದ ಸಿಎಸ್‍ಆರ್ ಯೋಜನೆಯಡಿ ಅಭಿವೃದ್ಧಿಪಡಿಸಿದ ‘ಕಲಾಮಂದಿರದ ಸೌಂದರ್ಯೀಕರಣ ಕಾಮಗಾರಿಗಳ ಲೋಕಾ ರ್ಪಣೆ’ಯನ್ನು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಸಂಸ್ಥೆ ಪ್ರಾರಂಭದಿಂದ ಹಲವು ಅಭಿವೃದ್ಧಿ ಕಾಮಗಾರಿಗೆ ಸಹಾಯ…

1 894 895 896 897 898 1,611
Translate »