ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿದಾರರ ವಿರುದ್ಧ ದೂರಿನ ಸುರಿಮಳೆ
ಮೈಸೂರು

ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿದಾರರ ವಿರುದ್ಧ ದೂರಿನ ಸುರಿಮಳೆ

July 16, 2019

ಮೈಸೂರು,ಜು.15(ಎಂಟಿವೈ)-ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಖಾಸಗಿ ಹಣ ಕಾಸು ಸಂಸ್ಥೆಗಳ ಏಜೆಂಟರು, ಬ್ಯಾಂಕ್ ಅಧಿಕಾರಿಗಳು, ಲೇವಾದೇವಿ ದಾರರಿಂದ ಆಗುತ್ತಿರುವ ಕಿರುಕುಳ ಹಾಗೂ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳ ವಿಳಂಬ ಧೋರಣೆ ಕುರಿತಂತೆ ಹಲವಾರು ದೂರು ಗಳು ಸಲ್ಲಿಕೆಯಾದವು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಕ್ರಿಯವಾಗಿರುವ ರೈತ ಸಂಘಟನೆಗಳ ಎಲ್ಲಾ ಮುಖಂಡರು, ರೈತ ಹೋರಾಟ ಗಾರರು ಸಭೆಯಲ್ಲಿ ಪಾಲ್ಗೊಂಡು ಸಾಲ ಪಡೆಯಲು ರೈತರು ಅನುಭವಿಸುತ್ತಿರುವ ನೋವು, ಪಡೆದ ಸಾಲ ತೀರಿಸಲು ಪಡುವ ಕಷ್ಟ ಹಾಗೂ ಸಾಲ ವಸೂಲಿ ಮಾಡಲು ಬರುವ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‍ಗಳ ವಸೂಲಿ ಏಜೆಂಟರು ಅಮಾ ಯಕ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ವಿವರಿಸಿ, ಪೊಲೀಸರು ರೈತರಿಗೆ ರಕ್ಷಣೆ ಒದಗಿಸ ಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರು ಪಡೆದಿ ರುವ ಸಾಲವನ್ನು ವಸೂಲಿ ಮಾಡಲು ಬರುವ ಬ್ಯಾಂಕ್ ಏಜೆಂಟರು ಗೂಂಡಾ ಗಳಂತೆ ವರ್ತಿಸುತ್ತಿದ್ದಾರೆ. ಅವರ ದೈಹಿಕ ಭಾಷೆ ಭಯ ಹುಟ್ಟಿಸುತ್ತದೆ. ಖಾಸಗಿ ಹಣಕಾಸು ಕಂಪನಿಗಳು ಸಾಲ ವಸೂಲಿ ಮಾಡಲು ಬೌನ್ಸರ್‍ಗಳನ್ನೂ ನೇಮಿಸಿಕೊಂಡಿ ದ್ದಾರೆ. ಬಲವಂತವಾಗಿ ಸಾಲ ವಸೂಲಿ ಮಾಡದಂತೆ ನಿಯಮವಿದ್ದರೂ ಏಜೆಂ ಟರು ರೈತರ ಮೇಲೆ ಅಟ್ಟಹಾಸ ಪ್ರದರ್ಶಿ ಸುತ್ತಿದ್ದಾರೆ. ಅಳುಕಿಲ್ಲದೇ ರಾತ್ರಿ ವೇಳೆ ಗ್ರಾಮಗಳಿಗೆ ಬರುವ ಏಜೆಂಟರ್ ಸಾಲ ಪಡೆದ ಮನೆಗೆ ನುಗ್ಗಿ ಟ್ರಾಕ್ಟರ್ ವಶಕ್ಕೆ ಪಡೆದು ಹೋಗುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಾತ್ರೋರಾತ್ರಿ ಟ್ರಾಕ್ಟರ್ ಮಾಲೀಕರಿಗೆ ತಿಳಿಯದಂತೆಯೇ ವಶಕ್ಕೆ ಪಡೆಯುತ್ತಿ ದ್ದಾರೆ. ಇಂತಹ ಗೂಂಡಾ ವರ್ತನೆಗೆ ಕಡಿವಾಣ ಹಾಕಬೇಕು. ರೈತರಿಗೆ ಖಾಸಗಿ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಖಾಸಗಿ ಹಣಕಾಸು ಕಂಪನಿ ಗಳ ಏಜೆಂಟರ ವರ್ತನೆ ಅತಿರೇಖದ್ದಾ ಗಿದೆ. ಸಾಲದ ಕಂತು ಕಟ್ಟಲು 15 ದಿನ ತಡವಾದರೂ ದಬ್ಬಾಳಿಕೆ ನಡೆಸುತ್ತಾರೆ. ಬ್ಯಾಂಕ್ ಅಧಿಕಾರಿಗಳು ಸೂಕ್ತ ಸಮಯಕ್ಕೆ ರೈತರಿಗೆ ಸಾಲ ನೀಡದಿರುವುದೇ ರೈತರು ಖಾಸಗಿ ಹಣಕಾಸು ಸಂಸ್ಥೆಗಳ ದೌರ್ಜನ್ಯಕ್ಕೆ ತುತ್ತಾಗಲು ಕಾರಣವಾಗುತ್ತಿದೆ. ಅಲ್ಲದೆ ಖಾಸಗಿ ಬ್ಯಾಂಕ್‍ಗಳೂ ರೈತರನ್ನು ಶೋಷಣೆ ಮಾಡುತ್ತಿವೆ. ಕಂತು ಪಾವತಿಸದ ರೈತರ ವಿರುದ್ಧ ಹೊರ ರಾಜ್ಯದಲ್ಲಿ ಪ್ರಕರಣ ದಾಖ ಲಿಸುವ ಮೂಲಕ ದೌರ್ಜನ್ಯ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ವಾಸಿಸುವ ಸ್ಥಳದ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆಡೆ ಪ್ರಕರಣ ದಾಖಲಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಸಾಲ ವಸೂಲಿ ಮಾಡಲು ಬಲ ಪ್ರಯೋಗ ಮಾಡುವುದು ಹಾಗೂ ಬಲವಂತ ಮಾಡುವುದಕ್ಕೆ ಅವಕಾಶವಿಲ್ಲ. ಖಾಸಗಿ ಕಂಪನಿಗಳು ಬಡ್ಡಿ ದರ ಹೆಚ್ಚಿಸುವುದಕ್ಕೂ ಅವಕಾಶವಿಲ್ಲ. ಒಂದು ವೇಳೆ ಸಾಲ ವಸೂಲಿಗೆ ಬರುವ ಏಜೆಂಟರು ಕಿರುಕುಳ ನೀಡಿದರೆ ದೂರು ನೀಡುವಂತೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಮಾತ ನಾಡಿ, ಬಲವಂತವಾಗಿ ಸಾಲ ವಸೂಲಿ ಮಾಡಲು ಯಾರಿಗೂ ಅವಕಾಶ ನೀಡಿಲ್ಲ. ಸಾಲ ಪಡೆಯಲು ನೀಡಿರುವ ಭದ್ರತೆಯನ್ನು ವಶಪಡೆಯಲು ಸಾಲ ನೀಡಿದ ಸಂಸ್ಥೆಗಳಿಗೆ ಅವಕಾಶ ವಿರುತ್ತದೆ. ಆದರೆ ಬಲವಂತವಾಗಿ ವಶ ಪಡಿಸಿಕೊಳ್ಳಬಾರದು. ಮನೆ ಹತ್ತಿರ ಬಂದು ತೊಂದರೆ ಕೊಡುವಂತಿಲ್ಲ. ಈ ರೀತಿಯ ವರ್ತನೆಗಳು ನಡೆದಾಗ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜು ಮಾತನಾಡಿ, ಬಯಲು ಶೌಚ ಮುಕ್ತ ಭಾರತ ನಿರ್ಮಿ ಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾ ಲಯ ನಿರ್ಮಿಸಲು ಹಳ್ಳ-ಕೊಳ್ಳದಲ್ಲಿರುವ ಮರಳನ್ನು ಎತ್ತಿನಗಾಡಿಯಲ್ಲಿ ಸಾಗಣೆ ಮಾಡುತ್ತಿದ್ದರೂ ಪೊಲೀಸರು ಕಿರುಕುಳ ನೀಡಿ, ಎತ್ತಿನ ಗಾಡಿಯನ್ನು ವಶಕ್ಕೆ ಪಡೆ ಯುತ್ತಿದ್ದಾರೆ. ಹಸುಗಳನ್ನು ಪಿಂಜರಾಪೋಲ್ ವಶಕ್ಕೆ ನೀಡಿದರೆ, ಗ್ರಾಮೀಣ ಪ್ರದೇಶದ ಜನರು ಮನೆ ರಿಪೇರಿ ಮಾಡಿಕೊಳ್ಳಲು, ಶೌಚಾಲಯ ನಿರ್ಮಿಸಲು ಮರಳು ಪಡೆಯಲು ಎಲ್ಲಿ ಹೋಗಬೇಕು. ಸ್ವಂತಃ ಬಳಕೆಗೆ ಮರÀಳು ಪಡೆಯಲು ಅವಕಾಶ ನೀಡಬೇಕೆಂದು ಕೋರಿದರು.

ಇದಕ್ಕೆ ದನಿಗೂಡಿಸಿದ ಹಿರಿಯ ಹೋರಾಟ ಗಾರ ಬೊಕ್ಕಹಳ್ಳಿ ನಂಜುಂಡಸ್ವಾಮಿ, ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಯಲ್ಲಿ ಕಳೆದ ಹಲವು ವರ್ಷ ಗಳಿಂದ ನಿರಂತರವಾಗಿ ಅಕ್ರಮವಾಗಿ ಮರಳುಗಣಿ ಗಾರಿಕೆ ನಡೆಸಲಾಗುತ್ತಿದೆ. ಈ ಸಂಬಂಧ ಹಲವು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಮರಳು ಗಣಿಗಾರಿಕೆ ನಡೆಸುತ್ತಿದ್ದವರೂ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖ ಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ನನ್ನನ್ನು ಹತ್ಯೆ ಮಾಡುಲುಯತ್ನಿಸಿದರು. ಈ ಸಂಬಂಧ ದೂರು ನೀಡಿದರೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸದೆ ಎನ್‍ಸಿಆರ್ ನೀಡಿದ್ದಾರೆ. ಸಭೆಯಲ್ಲಿ ಜಿ.ಪಂ ಸಿಇಒ ಕೆ.ಜ್ಯೋತಿ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ, ಉಪವಿಭಾ ಗಾಧಿಕಾರಿ ಹೆಚ್.ಎನ್.ಶಿವೇಗೌಡ, ಹುಣ ಸೂರು ಉಪವಿಭಾಗಾಧಿಕಾರಿ ವೀಣಾ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಬೆಳೆ ನಾಶ ಮಾಡಲು ಬಂದ ಪ್ರಾಣಿ ಸತ್ತರೆ ರೈತರನ್ನು ಕಾಡುತ್ತೀರಿ… ನಿಮ್ಮ ಪ್ರಾಣಿಗಳನ್ನು ಸರಿಯಾಗಿ ಕಾಯಲು ನಿಮಗೆ ಆಗುವುದಿಲ್ಲವೆ…?
ಮೈಸೂರು,ಜು.15(ಎಂಟಿವೈ)-ಕಾಡು ಪ್ರಾಣಿಗಳ ದಾಳಿಗೆ ರೈತರು ಬಲಿಯಾದರೆ ಪರಿಹಾರ ನೀಡುತ್ತೀರಿ, ಬೆಳೆ ನಾಶ ಮಾಡಲು ಬರುವ ವನ್ಯಜೀವಿಗಳು ಹೊಲ ಗದ್ದೆಗಳಲ್ಲಿ ಸತ್ತರೆ ರೈತರನ್ನೇ ಕಾಡುತ್ತೀರಿ. ನಿಮ್ಮ ಪ್ರಾಣಿ ಗಳನ್ನು ನೀವು ಸರಿಯಾಗಿ ಕಾಯಲು ಆಗುವುದಿಲ್ಲವಾ?, ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ.

ಮೈಸೂರು ಜಿ.ಪಂ ಸಭಾಂಗಣದಲ್ಲಿ ನಡೆದ ರೈತರ ಸಭೆಯಲ್ಲಿ ಬಂಡೀಪುರ, ನಾಗರಹೊಳೆ ಅಭಯಾ ರಣ್ಯದ ಕಾಡಂಚಿನ ಗ್ರಾಮಗಳಲ್ಲಿ ಸಂಭವಿಸುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ರೈತ ಮುಖಂಡರು ಅರಣ್ಯಾ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಬಂಡೀಪುರ ಅಭಯಾರಣ್ಯದ ಓಂಕಾರ ವಲಯದ ಕಾಡಂಚಿನ ಗ್ರಾಮಗಳ ರೈತರ ಸ್ಥಿತಿ ಶೋಚನೀಯವಾಗಿದೆ. ಮಳೆಯಿಲ್ಲದೆ ಬೆಳೆ ಸಂಪೂರ್ಣವಾಗಿ ನಾಶವಾಗು ತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹುರುಳಿ ಸೇರಿದಂತೆ ಬೆಳೆದ ವಿವಿಧ ಬೆಳೆಗಳನ್ನು ಕಾಡಾನೆಗಳು ತಿಂದು ವಾಪಸ್ಸಾಗುತ್ತಿವೆ. ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಬೆಳೆ ಪರಿಹಾರದಿಂದ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಾವು ಬದುಕುವುದೆಲ್ಲಿ?. ವನ್ಯಜೀವಿಗಳ ದಾಳಿಗೆ ಬಲಿಯಾ ದವರ ಕುಟುಂಬಕ್ಕೆ ಪರಿಹಾರ ನೀಡುತ್ತೀರಿ. ಅದೇ ಪ್ರಾಣಿಗಳು ಜಮೀನಿನಲ್ಲಿ ಸತ್ತರೆ, ಆ ಜಮೀನಿನ ರೈತರ ವಿರುದ್ಧ ಕೇಸ್ ದಾಖಲಿಸಿ, ಇಡೀ ಕುಟುಂಬವೇ ಊರು ಬಿಡುವಂತೆ ಮಾಡುತ್ತೀರಿ. ನಿಮ್ಮ ಪ್ರಾಣಿಗಳನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿ ನಿಮ್ಮದು. ಕಾಡಿನಿಂದ ಗ್ರಾಮಕ್ಕೆ ಬರಲು ಯಾಕೆ ಬಿಡುತ್ತೀರಿ? ತಿನ್ನಲು ಹುಲ್ಲು, ಸೊಪ್ಪು, ಕುಡಿಯಲು ನೀರನ್ನು ಕಾಡಿನಲ್ಲಿ ಕಾಪಾಡಿ ಕೊಂಡರೆ ಪ್ರಾಣಿಗಳೇಕೆ ನಾಡಿಗೆ ಬರುತ್ತಿದ್ದವು ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಬಂಡೀಪುರ ಹುಲಿ ಯೋಜ ನೆಯ ನಿರ್ದೇಶಕ ಟಿ.ಬಾಲ ಚಂದ್ರ ಉತ್ತರಿಸಿ, ಓಂಕಾರ್ ವಲಯದಿಂದ ಗ್ರಾಮಗಳಿಗೆ ಆನೆಗಳು ಬರುತ್ತಿದ್ದುದ್ದನ್ನು ತಡೆಗಟ್ಟಲು ಕಂದಕ ತೆಗೆಯಲಾಗಿದೆ. ಅಲ್ಲದೆ ಹಾವಳಿ ಹೆಚ್ಚಾಗಿದ್ದ ಸ್ಥಳದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸ ಲಾಗಿತ್ತು. ಒಂದೆರಡು ಆನೆಗಳು ಬ್ಯಾರಿಕೇಡ್ ದಾಟಿ ಕೊಂಡು ಹೊಲ-ಗದ್ದೆಗಳಲ್ಲಿ ಬೆಳೆದಿದ್ದ ಫಸಲನ್ನು ತಿಂದು ಹೋಗುತ್ತಿರುವುದು ಬೆಳಕಿಗೆ ಬಂದಿತ್ತು. ಇದೀಗ ಬೋಳೆ ಗೌಡನ ಕಟ್ಟೆ ಸಮೀಪದಲ್ಲಿ 15 ಕಿಮೀ ರೈಲ್ವೆ ಬ್ಯಾರಿಕೇಟ್, 18 ಕಿಮೀ ಆನೆ ತಡೆ ಕಂದಕವನ್ನು ಡಿಸೆಂಬರ್ ಒಳಗೆ ನಿರ್ಮಿಸಲಾಗುವುದು ಎಂದು ತಿಳಿಸಿದರು. ವನ್ಯಜೀವಿಗಳಿಂದ ಆಗುತ್ತಿದ್ದ ಬೆಳೆ ನಷ್ಟಕ್ಕೆ ನೀಡಲಾಗುತ್ತಿದ್ದ ಪರಿಹಾರ ಮೊತ್ತ ಕಡಿಮೆಯಿದ್ದು, ಅದನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರಿಗೆ 67 ಲಕ್ಷ ರೂ. ಪರಿಹಾರ ನೀಡಬೇಕು. ಇದರಲ್ಲಿ ಈಗಾಗಲೇ 30 ಲಕ್ಷ ರೂ. ಸರ್ಕಾರ ಬಿಡುಗಡೆ ಮಾಡಿದೆ. 23 ಲಕ್ಷ ರೂ. ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಂಡೀಪುರ ಅರಣ್ಯದಲ್ಲಿ 150 ಹುಲಿಗಳು, 1600 ಆನೆಗಳು, 25 ಸಾವಿರಕ್ಕೂ ಹೆಚ್ಚು ಜಿಂಕೆ, ಸಾಂಬಾರ್ ಗಳಿವೆ. 51 ಕೆರೆಗಳಿಗೆ ಸೋಲಾರ್ ಬೋರ್‍ವೆಲ್ ಅಳವಡಿಸಲಾಗಿದೆ. ಅಲ್ಲದೆ ಈ ಬಾರಿ ಕಾಡಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೆರೆಗಳಲ್ಲಿ ನೀರು ತುಂಬಿರುವುದರಿಂದ ಪ್ರಾಣಿಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಿಲ್ಲ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎರಡೂ ಭಾಗಗಳಲ್ಲಿಯೂ ಬೊಂಬು ಚೆನ್ನಾಗಿ ಬೆಳೆ ಯುತ್ತಿದೆ. ಮುಂದಿನ ದಿನಗಳಲ್ಲಿ ಮೇವಿಗೆ ತೊಂದರೆ ಯಾಗುವುದಿಲ್ಲ. ಆಗ ರೈತರ ಜಮೀನಿಗೆ ಕಾಡು ಪ್ರಾಣಿ ಗಳು ಬರುವುದು ಕಡಿಮೆಯಾಗಲಿದೆ ಎಂದರು.

Translate »