ಇನ್ನು ಮುಂದೆ ಮುಕ್ತ ವಿವಿ ಪಠ್ಯಕ್ರಮ ಬೋಧನೆ ಯೂಟ್ಯೂಬ್‍ನಲ್ಲಿ ಲಭ್ಯ
ಮೈಸೂರು

ಇನ್ನು ಮುಂದೆ ಮುಕ್ತ ವಿವಿ ಪಠ್ಯಕ್ರಮ ಬೋಧನೆ ಯೂಟ್ಯೂಬ್‍ನಲ್ಲಿ ಲಭ್ಯ

July 16, 2019

ಮೈಸೂರು,ಜು.15(ಆರ್‍ಕೆ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (Ksou)ದ ವಿದ್ಯಾರ್ಥಿಗಳು ಇನ್ನು ಮುಂದೆ ಯೂಟ್ಯೂಬ್‍ನಲ್ಲೇ ತಮ್ಮ ತಮ್ಮ ಕೋರ್ಸುಗಳ ಪಠ್ಯಕ್ರಮದ ಬೋಧನೆಯನ್ನು ವೀಕ್ಷಿಸಿ ಅಧ್ಯಯನ ಮಾಡಬಹುದಾಗಿದೆ.

ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿ ಗಳಿಗೆ ಅವರಿರುವ ಸ್ಥಳದಲ್ಲೇ ತಜ್ಞ ಪ್ರಾಧ್ಯಾ ಪಕರು ನೀಡುವ ಉಪನ್ಯಾಸ ಆಲಿಸಿ, ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವು ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಮೈಸೂರಿನಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ರಾಜ್ಯದಲ್ಲಿ ಇದೇ ಮೊದಲ ಪ್ರಯೋಗವಾಗಿ ನಮ್ಮ ವಿಶ್ವವಿದ್ಯಾನಿಲಯ ದಿಂದ ಯೂ ಟ್ಯೂಬ್‍ನಲ್ಲಿ ಬೋಧನಾ ಸಾಮಗ್ರಿ ಗಳು ಹಾಗೂ ಉಪನ್ಯಾಸದ ಆಡಿಯೋ-ವಿಡಿಯೋ ಲಿಂಕ್ ಅನ್ನು ಅಪ್‍ಲೋಡ್ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಈಗಾಗಲೇ ಸಂಪೂರ್ಣ ಮಾಹಿತಿಯೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಜುಲೈ 31ರಂದು ನಡೆಯಲಿರುವ ವಿಶ್ವ ವಿದ್ಯಾನಿಲಯದ ವ್ಯವ ಸ್ಥಾಪನಾ ಮಂಡಳಿ (BoM) ಮುಂದೆ ಇರಿಸ ಲಾಗುವುದು. ಈ ಯೋಜ ನೆಯ ವಿಧಾನ, ಅನುಕೂಲ ಗಳು, ಇದರಿಂದ ವಿದ್ಯಾರ್ಥಿ ಗಳು, ಸಾರ್ವಜನಿಕರಿಗಾಗುವ ಪ್ರಯೋ ಜನಗಳ ಬಗ್ಗೆ ಸಭೆಯಲ್ಲಿ ಸದಸ್ಯರಿಗೆ ವಿವರಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಸೂಚಿ ಸಿದಲ್ಲಿ ನಿಯಮಾನುಸಾರ ಟೆಂಡರ್ ಕರೆದು ವಿಶ್ವವಿದ್ಯಾನಿಲಯ ನಡೆಸುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಎಂಬಿಎ, ಎಂಕಾಂ, ಎಂ.ಎ ಸೇರಿದಂತೆ ಎಲ್ಲಾ 31 ತಾಂತ್ರಿಕೇತರ ಕೋರ್ಸುಗಳ ಪಠ್ಯಕ್ರಮದಲ್ಲಿ ಉಪನ್ಯಾಸಗಳನ್ನು ವಿಡಿಯೋ ರೆಕಾರ್ಡ್ ಮಾಡಿಸಲಾಗುವುದು ಎಂದು ಪ್ರೊ. ವಿದ್ಯಾಶಂಕರ್ ತಿಳಿಸಿದರು.

ನಂತರ ಬೋಧನಾ ಸಾಮಗ್ರಿ(study materials)ಯೊಂದಿಗೆ ಉಪನ್ಯಾಸ ಮಾಲಿಕೆಯ ಆಡಿಯೋ-ವಿಡಿಯೋ ಅನ್ನು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡುತ್ತೇವೆ. ವಿದ್ಯಾರ್ಥಿಗಳು ಅದನ್ನು ಮೊಬೈಲ್ ಅಥವಾ ಕಂಪ್ಯೂಟರ್‍ನಲ್ಲಿ ಡೌನ್ ಲೋಡ್ ಮಾಡಿಕೊಂಡರೆ ಸಾಕು, ಇಂಟರ್‍ನೆಟ್ ಇಲ್ಲ ದೆಯೂ ಆಫ್‍ಲೈನ್‍ನಲ್ಲೂ ಪಾಠ-ಪ್ರವಚನವನ್ನು ಕೇಳಿ ಅರ್ಥಮಾಡಿಕೊಳ್ಳಬಹುದು ಎಂದು ಕುಲಪತಿಗಳು ನುಡಿ ದರು. ಬೇರೆ ಕೆಲಸದಲ್ಲಿ ನಿರತರಾಗಿರುವವರು, ಅಂಗವಿಕಲರು ಹಾಗೂ ದೂರದ ಸ್ಥಳದಲ್ಲಿರುವ ವಿದ್ಯಾರ್ಥಿಗಳು ಸಂಪರ್ಕ ತರಗತಿ (ಕಾಂಟ್ಯಾಕ್ಟ್ ಕ್ಲಾಸ್)ಗಳಿಗೆ ಹಾಜ ರಾಗಲು ಸಾಧ್ಯವಿಲ್ಲದವರಿಗೆ ಯೂ ಟ್ಯೂಬ್ ಬೋಧನಾ ಕ್ರಮವು ಅನುಕೂಲವಾಗಲಿದೆ ಎಂದೂ ತಿಳಿಸಿದರು. ಕೇವಲ ವಿದ್ಯಾರ್ಥಿ ಗಳಿಗಷ್ಟೇ ಅಲ್ಲದೆ, ವಿಚಾರ ತಿಳಿದುಕೊಳ್ಳ ಬೇಕೆಂಬ ಹಂಬಲವಿರುವವರು, ಸಂಶೋಧನಾ ವಿದ್ಯಾರ್ಥಿಗಳು, ಸಾರ್ವ ಜನಿಕರೂ ಸಹ ಯೂ ಟ್ಯೂಬ್ ಅನ್ನು ಡೌನ್‍ಲೋಡ್ ಮಾಡಿಕೊಂಡು ನೋಡಿ ತಿಳಿದುಕೊಳ್ಳಬಹುದು ಎಂದು ಪ್ರೊ. ವಿದ್ಯಾಶಂಕರ್ ತಿಳಿಸಿದರು.

ದೇಶದಲ್ಲಿ ಕೆಲವು ವಿಶ್ವವಿದ್ಯಾನಿಲಯ ಗಳು ತಾಂತ್ರಿಕ ಕೋರ್ಸುಗಳಿಗೆ ಈ ಪದ್ಧತಿ ಜಾರಿಗೆ ತಂದಿರುವುದನ್ನು ಹೊರತು ಪಡಿಸಿದರೆ, ತಾಂತ್ರಿಕೇತರ ಕೋರ್ಸುಗಳ ಪಠ್ಯಕ್ರಮ ಬೋಧನಾ ಆಡಿಯೋ-ವಿಡಿಯೋ ಅನ್ನು ಆನ್‍ಲೈನ್‍ನಲ್ಲಿ ಪೂರೈಸುತ್ತಿರುವುದು ಕರ್ನಾಟಕ ರಾಜ್ಯ ದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಥಮ ಎಂದು ಪ್ರೊ.ವಿದ್ಯಾಶಂಕರ ತಿಳಿಸಿದರು.

ಯೋಜನೆ ಅನುಷ್ಠಾನಗೊಂಡರೆ ವಿಶ್ವವಿದ್ಯಾನಿಲಯದ 11 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದ್ದು, ಯೂ ಟ್ಯೂಬ್‍ನಲ್ಲಿ ಪಾಠ ಕೇಳಿ ಬೋಧನಾ ಸಾಮಗ್ರಿಗಳ ಮೂಲಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾ ಗಿದೆ. ಬೋರ್ಡ್ ಆಫ್ ಮ್ಯಾನೇಜ್ ಮೆಂಟ್‍ನಲ್ಲಿ ಅನುಮೋದನೆ ಸಿಕ್ಕಿದರೆ, ತಕ್ಷಣವೇ ಜಾರಿಗೊಳಿಸಲು ಅಗತ್ಯ ಕ್ರಮ ವಹಿಸುತ್ತೇವೆ ಎಂದು ಅವರು ನುಡಿದರು.

Translate »