ನಾಳೆಯಿಂದ `ಹಸ್ತಶಿಲ್ಪಿ – ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ
ಮೈಸೂರು

ನಾಳೆಯಿಂದ `ಹಸ್ತಶಿಲ್ಪಿ – ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ

July 16, 2019

ಮೈಸೂರು,ಜು.15(ಆರ್‍ಕೆಬಿ)- ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮೈಸೂ ರಿನ ಸದರನ್ ಸ್ಟಾರ್ ಹೋಟೆಲ್‍ನಲ್ಲಿ ಜು.17ರಿಂದ 22ರವರೆಗೆ ಆರು ದಿನಗಳ ಹಸ್ತ ಶಿಲ್ಪಿ `ಸಿಲ್ಕ್ ಇಂಡಿಯಾ’ ಭಾರತದ ಎಲ್ಲಾ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಭಾರೀ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಕುಶಲ ಕರ್ಮಿಗಳು ಮತ್ತು ನೇಕಾರರ ಶ್ರೇಯೋಭಿ ವೃದ್ಧಿ ಸಂಸ್ಥೆಯಾದ ಹಸ್ತ ಶಿಲ್ಪಿ ವತಿ ಯಿಂದ ಈ ಮೇಳ ಆಯೋಜಿಸ ಲಾಗಿದ್ದು, ದೇಶದ 17 ರಾಜ್ಯಗಳ ನೇಕಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಿಗ್ಗೆ 10.30ರಿಂದ ರಾತ್ರಿ 8.30ರ ವರೆಗೆ ನಡೆಯುವ ವಸ್ತು ಪ್ರದರ್ಶನದಲ್ಲಿ ವಿವಿಧ ರೇಷ್ಮೆ ಸೀರೆಗಳು, ಕ್ರೇಪ್, ಜಾರ್ಜೆಟ್ ಸಿಲ್ಕ್, ಅರಿಣಿ, ಧÀರ್ಮಾ ವರಂ, ಕಾಂಚಿಪುರಂ, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೊಲ್ಕತ್ತಾ, ಢಾಕ, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‍ಚೂರಿ, ಪ್ರಿಂಟೆಡ್, ಬಾಗ ಲ್ಪುರ್, ಬನಾರಸ್, ಶಿಫಾನ್, ಚಂದೇರಿ, ಕೈ ಅಚ್ಚಿನ ಸೀರೆಗಳು ಸೇರಿದಂತೆ, ಕುರ್ತಾ, ಶಾಲು, ಸಲ್ವಾರ್ ಕಮೀಸ್ ಉಡುಪಿನ ಬಟ್ಟೆಗಳು, ಬೆಡ್‍ಶೀಟ್ಸ್ ಇನ್ನಿ ತರೆ ವಸ್ತ್ರಗಳು ನ್ಯಾಯಯುತ ಬೆಲೆಯಲ್ಲಿ ದೊರೆಯಲಿವೆ ಎಂದು ಹೇಳಿದರು.

ಜು.17ರಂದು ಸಂಜೆ 4 ಗಂಟೆಗೆ ಮೈಸೂರು ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಶೇ.20ರಷ್ಟು ರಿಯಾಯಿತಿ ಮಾರಾಟವೂ ಇರಲಿದೆ ಎಂದು ತಿಳಿಸಿ ದರು. ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಶ್ರೀಕಾಂತ್, ಮಂಜು ಉಪಸ್ಥಿತರಿದ್ದರು.

Translate »