ಮೈಸೂರು

ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವಕ್ಕೆಪ್ರಧಾನಿ ಮೋದಿ ಅವರಿಗೆ ಆಹ್ವಾನ
ಮೈಸೂರು

ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವಕ್ಕೆಪ್ರಧಾನಿ ಮೋದಿ ಅವರಿಗೆ ಆಹ್ವಾನ

July 17, 2019

ಮೈಸೂರು,ಜು.16(ಎಸ್‍ಬಿಡಿ)- ಮೈಸೂರು ವಿಶ್ವವಿದ್ಯಾನಿಲಯದ ಶತಮಾ ನೋತ್ಸವ ಘಟಿಕೋತ್ಸವಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರು ಸೋಮ ವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, 2020ರಲ್ಲಿ ಜರುಗುವ ವಿವಿಯ ಶತಮಾನೋತ್ಸವ ಘಟಿಕೋತ್ಸವಕ್ಕೆ ಸಾಕ್ಷಿಯಾಗಬೇಕೆಂಬ ಮನವಿಯೊಂದಿಗೆ ಅವರನ್ನು ಅಧಿಕೃತ ವಾಗಿ ಆಹ್ವಾನಿಸಿದರು. ಸಂತಸದಿಂದಲೇ ಆಹ್ವಾನ ಸ್ವೀಕರಿಸಿದ ಮೋದಿ ಅವರು, ಕಾರ್ಯಕ್ರಮ ಕಾರ್ಯ ದೊತ್ತಡವನ್ನು ಪರಿಶೀಲಿಸಿ, ಘಟಿಕೋ ತ್ಸವಕ್ಕೆ ಆಗಮಿಸುವ ಸಾಧ್ಯತೆ ಬಗ್ಗೆ ಸದ್ಯ ದಲ್ಲೇ ಸ್ಪಷ್ಟಪಡಿಸುವುದಾಗಿ ತಿಳಿಸಿದರ ಲ್ಲದೆ, ಶತಮಾನೋತ್ಸವ ಪೂರೈಸಿರುವ…

ಪುರಾತತ್ವ ಇಲಾಖೆಯಿಂದ ಅರಸನಕೆರೆ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಚಿಂತನೆ
ಮೈಸೂರು

ಪುರಾತತ್ವ ಇಲಾಖೆಯಿಂದ ಅರಸನಕೆರೆ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಚಿಂತನೆ

July 17, 2019

ಮೈಸೂರು,ಜು.16(ಎಸ್‍ಬಿಡಿ)-ಮೈಸೂರಿಗೆ ಸಮೀಪದ ಅರಸನಕೆರೆ ಗ್ರಾಮದಲ್ಲಿ ಪತ್ತೆಯಾಗಿರುವ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಪುರಾತತ್ವ ಶಾಸ್ತ್ರಜ್ಞ ಎನ್.ಎಲ್.ಗೌಡ ಹಾಗೂ ಇಂಜಿನಿಯರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ನಂದಿ ವಿಗ್ರಹಗಳ ಪರಿಶೀಲನೆ ನಡೆಸಿದ್ದಾರೆ. ಬಳಸಿರುವ ಕಲ್ಲು ಹಾಗೂ ಕೆತ್ತನೆ ಶೈಲಿ ಗಮನಿಸಿದರೆ ವಿಗ್ರಹಗಳು ವಿಜಯ ನಗರ ಕಾಲದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಳಪ ಕಲ್ಲಿನಿಂದ ವಿಗ್ರಹಗಳನ್ನು ಕೆತ್ತಲಾಗಿದ್ದು, ಯಾವುದೋ ಕಾರಣದಿಂದ ಪರಿಪೂರ್ಣಗೊಳಿಸಿಲ್ಲ. ಹಾಗಾಗಿ 2 ವಿಗ್ರಹಗಳು ಬಂಡೆಗೆ ಹೊಂದಿಕೊಂಡಂತಿವೆ. ಉತ್ಕøಷ್ಟ ಬಳಪ ಕಲ್ಲು…

ಯೋಗ ದಿನಾಚರಣೆ ಧಾರ್ಮಿಕ ಮುಖಂಡರ ಒಗ್ಗೂಡಿಸಿದೆ
ಮೈಸೂರು

ಯೋಗ ದಿನಾಚರಣೆ ಧಾರ್ಮಿಕ ಮುಖಂಡರ ಒಗ್ಗೂಡಿಸಿದೆ

July 17, 2019

ಮೈಸೂರು, ಜು.16(ಎಂಕೆ)- ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯು ಎಲ್ಲಾ ಧಾರ್ಮಿಕ ಮುಖಂಡರ ಮನಸ್ಸು ಗಳನ್ನು ಒಂದಾಗಿಸಿದೆ ಎಂದು ಜಿಎಸ್‍ಎಸ್ ಯೋಗ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಹೇಳಿದರು. ಮೈಸೂರಿನ ರಾಮಾನುಜ ರಸ್ತೆಯಲ್ಲಿ ರುವ ನಮೋ ಯೋಗ ಭವನದಲ್ಲಿ ಗುರು ಪೂರ್ಣಿಮ ಅಂಗವಾಗಿ ಆಯೋಜಿಸಿದ್ದ ‘ಮೈಸೂರು ಯೋಗ ಪರಂಪರೆ ಛಾಯಾ ಚಿತ್ರ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಯೋಗವು ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿ ಸುತ್ತದೆ ಎಂದರು. ಪ್ರಾಣಯಾಮ ಮಾಡುವಾಗ ಉಸಿ ರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡ…

ಚಂದ್ರಗ್ರಹಣ ಶಾಂತಿ ಹೋಮ
ಮೈಸೂರು

ಚಂದ್ರಗ್ರಹಣ ಶಾಂತಿ ಹೋಮ

July 17, 2019

ಮೈಸೂರು,ಜು.16(ವೈಡಿಎಸ್)-ಚಂದ್ರಗ್ರಹಣ ಮಂಗಳವಾರ ಮಧ್ಯರಾತ್ರಿ ಸಂಭವಿಸುವುದರಿಂದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಏರ್ಪಡಿಸಿದ್ದು, ಮಂಗಳವಾರ ಸಂಜೆ ನೂರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ಗ್ರಹಣಶಾಂತಿ ಮಾಡಿಸಿದರು. ಮಂಗಳವಾರ ಮಧ್ಯರಾತ್ರಿ 1.30ರಿಂದ ಬೆಳಗಿನ ಜಾವ 4.30ರವರೆಗೆ ಚಂದ್ರ ಗ್ರಹಣವಿದ್ದು, ಈ ಭಾರಿ ಏಕಗ್ರಸ್ತ ಚಂದ್ರ ಗ್ರಹಣವು ಧನು ಮತ್ತು ಮಕರ ರಾಶಿ ಯಲ್ಲಿ ಆಗುವುದರಿಂದ ಧರ್ಮಶಾಸ್ತ್ರದ ಪ್ರಕಾರ 4 ರಾಶಿಗಳಿಗೆ ವಿಂಗಡಣೆ ಮಾಡ ಬೇಕು. ಆದರೆ, 2 ರಾಶಿಯಲ್ಲಿ ಸಂಭವಿಸು ವುದರಿಂದ ಎಲ್ಲಾ ರಾಶಿಯವರು ಗ್ರಹಣ ಶಾಂತಿ ಮಾಡಿಸಬೇಕಿದೆ…

ಪೊಲೀಸ್ ಸಹಾಯವಾಣಿಗೆ 20 ವರ್ಷ
ಮೈಸೂರು

ಪೊಲೀಸ್ ಸಹಾಯವಾಣಿಗೆ 20 ವರ್ಷ

July 17, 2019

ಮೈಸೂರು,ಜು.16(ಆರ್‍ಕೆ)- ಮೈಸೂರು ನಗರದಲ್ಲಿ ಆರಂಭಿಸಿದ್ದ ‘ಪೊಲೀಸ್ ಸಹಾಯ ವಾಣಿ’ಗೆ 20 ವರ್ಷಗಳು ತುಂಬಿವೆ. ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ವೊಂದನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ಹಿಂದಿನ ನಗರ ಪೊಲೀಸ್ ಆಯುಕ್ತರಾದ ಸಿ.ಚಂದ್ರಶೇಖರ್ ಅವರು, 2000ನೇ ಇಸವಿ ಜುಲೈ ಮಾಹೆಯಲ್ಲಿ ‘ಪೊಲೀಸ್ ಸಹಾಯವಾಣಿ’ ಯನ್ನು ಮೈಸೂರಲ್ಲಿ ಆರಂಭಿಸಿದ್ದರು. ಸೂಕ್ತ ಸಮಯದಲ್ಲಿ ಸರಿಯಾದ ಸಮಾಲೋಚನೆ, ಸಾಂತ್ವನ ನೀಡಿದ್ದರೆ ಆ ಬಾಲಕಿಯನ್ನು ಬದುಕಿಸಬಹುದಿತ್ತು ಎಂಬುದನ್ನು ಮನಗಂಡು ಮುಂದೆ ಅಂತಹ ಸಂದರ್ಭಗಳು ಬಂದಾಗ ಅಗತ್ಯ ಮಾರ್ಗ ದರ್ಶನ ನೀಡುವ ಸದುದ್ದೇಶದಿಂದ ಪ್ರತ್ಯೇಕ ಸಹಾಯವಾಣಿಯನ್ನು ತೆರೆದಿ…

ಹಾವುಗಳು ಹಾಲು ಕುಡಿಯಲ್ಲ, ಅವುಗಳು ದ್ವೇಷ ಕಾರುವುದಿಲ್ಲ…
ಮೈಸೂರು

ಹಾವುಗಳು ಹಾಲು ಕುಡಿಯಲ್ಲ, ಅವುಗಳು ದ್ವೇಷ ಕಾರುವುದಿಲ್ಲ…

July 17, 2019

ಮೈಸೂರು,ಜು.16(ಪಿಎಂ)- ಹಾವು ಗಳಿಗೆ ಧ್ವನಿ ಕೇಳುವ, ಶಬ್ದ ಗ್ರಹಿಸುವ ಶಕ್ತಿ ಇಲ್ಲ. ಹಾಲು ಕುಡಿದು ಜೀರ್ಣಿಸಿ ಕೊಳ್ಳುವ ಶಕ್ತಿಯೂ ಇರುವುದಿಲ್ಲ. ಹಾವುಗಳು ದ್ವೇಷಕಾರುತ್ತವೆ ಎಂಬುದೂ ಸುಳ್ಳು! ಹೌದು, ಸರ್ಪಗಳ ಬಗ್ಗೆ ಹತ್ತು ಹಲವು ರೀತಿಯಲ್ಲಿ ತಪ್ಪು ಕಲ್ಪನೆ, ಮೂಢ ನಂಬಿಕೆ ಸಮಾಜದಲ್ಲಿ ನೆಲೆಯೂರಿದ್ದು, ಮಂಗಳ ವಾರ ಮೈಸೂರು ಮೃಗಾಲಯದಲ್ಲಿ `ವಿಶ್ವ ಹಾವುಗಳ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಹಾವುಗಳ ಮಾಹಿತಿ ಪ್ರದರ್ಶನದಲ್ಲಿ ವೈಜ್ಞಾನಿಕ ಅಂಶ ಸೇರಿ ದಂತೆ ಉರಗಗಳ ವೈವಿಧ್ಯಮಯ ನೋಟವೂ ಅನಾವರಣಗೊಂಡವು. ಹಾವುಗಳೆಂದರೆ ಸಾಕು, ಬಹುತೇಕರಲ್ಲಿ ಅನವಶ್ಯಕ…

ಬಿ.ಸರೋಜಾದೇವಿ, ಡಾ.ಸುಧಾಮೂರ್ತಿ ಸೇರಿದಂತೆ 9 ಗಣ್ಯರಿಗೆ ಜಯಚಾಮರಾಜ ಒಡೆಯರ್ ಜನ್ಮಶತಾಬ್ಧಿ ಪ್ರಶಸ್ತಿ ಪ್ರದಾನ
ಮೈಸೂರು

ಬಿ.ಸರೋಜಾದೇವಿ, ಡಾ.ಸುಧಾಮೂರ್ತಿ ಸೇರಿದಂತೆ 9 ಗಣ್ಯರಿಗೆ ಜಯಚಾಮರಾಜ ಒಡೆಯರ್ ಜನ್ಮಶತಾಬ್ಧಿ ಪ್ರಶಸ್ತಿ ಪ್ರದಾನ

July 17, 2019

ಮೈಸೂರು,ಜು.16-ಮೈಸೂರಿನ ಕೊನೆಯ ಮಹಾರಾಜ ರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶ ತಾಬ್ಧಿಯ ವರ್ಷಪೂರ್ತಿ ಕಾರ್ಯಕ್ರಮವನ್ನು ರಾಜ್ಯಪಾಲ ವಜೂಬಾಯಿ ರೂಢಾ ಬಾಯಿ ವಾಲಾ ಅವರು ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ಜು.18ರ ಬೆಳಿಗ್ಗೆ 11.15ಕ್ಕೆ ಉದ್ಘಾಟಿಸುವರು. ಪ್ರಮೋದಾದೇವಿ ಒಡೆಯರ್ ಮತ್ತು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ (ಎಸ್‍ಡಿ ಎನ್‍ಆರ್) ಒಡೆಯರ್ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ದಿಕ್ಸೂಚಿ ಭಾಷಣ ಮಾಡುವರು. ಇದೇ ವೇಳೆ ಆಕಾಶವಾಣಿಯಲ್ಲಿ ಬಿತ್ತರಿಸಿರುವ…

ಯುವ ಪೀಳಿಗೆಗಾಗಿ ಜಯಚಾಮರಾಜ ಒಡೆಯರ್ ಕುರಿತ ಪುಸ್ತಕ ಪ್ರಕಟಿಸಿ
ಮೈಸೂರು

ಯುವ ಪೀಳಿಗೆಗಾಗಿ ಜಯಚಾಮರಾಜ ಒಡೆಯರ್ ಕುರಿತ ಪುಸ್ತಕ ಪ್ರಕಟಿಸಿ

July 17, 2019

ಮೈಸೂರು,ಜು.16(ಆರ್‍ಕೆ)- ಮೈಸೂರು ಸಂಸ್ಥಾನವನ್ನಾಳಿದ ಶ್ರೀ ಜಯಚಾಮ ರಾಜ ಒಡೆಯರ್ ಅವರ ಜೀವನ ಚರಿತ್ರೆ ಕುರಿತಾದ ಸಮಗ್ರ ಪುಸ್ತಕವನ್ನು ಹೊರ ತನ್ನಿ ಎಂದು ಖ್ಯಾತ ನಾಣ್ಯಶಾಸ್ತ್ರತಜ್ಞರಾದ ಪುರಾತತ್ವ ಇತಿಹಾಸ ನಿವೃತ್ತ ಪ್ರಾಧ್ಯಾಪಕ ಮತ್ತು ಭಾರತೀಯ ವಿದ್ಯಾಭವನ(ಬಿವಿಬಿ) ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ. ಎ.ವಿ. ನರಸಿಂಹಮೂರ್ತಿ ಅವರು ಇಂದಿಲ್ಲಿ ಸಲಹೆ ನೀಡಿದ್ದಾರೆ. ಶ್ರೀ ಜಯ ಚಾಮರಾಜ ಅರಸು ಶಿಕ್ಷಣ ಟ್ರಸ್ಟ್ ವತಿಯಿಂದ ಮೈಸೂರಿನ ಜಗನ್ಮೋ ಹನ ಅರಮನೆಯಲ್ಲಿ ಏರ್ಪಡಿಸಿದ್ದ ಜಯ ಚಾಮರಾಜ ಒಡೆಯರ್ ಜನ್ಮ ಶತ ಮಾನೋತ್ಸವ ಸಮಾರಂಭವನ್ನು ಉದ್ಘಾ…

ಗುರುವಾರ ಅಗ್ನಿಪರೀಕ್ಷೆ
ಮೈಸೂರು

ಗುರುವಾರ ಅಗ್ನಿಪರೀಕ್ಷೆ

July 16, 2019

ಬೆಂಗಳೂರು, ಜು. 15(ಕೆಎಂಶಿ)- ಮೈತ್ರಿ ಪಕ್ಷಗಳ ಕೆಲ ಅತೃಪ್ತ ಶಾಸಕರು ರಾಜೀ ನಾಮೆ ನೀಡಿದ್ದರೂ ತಮ್ಮ ಸರ್ಕಾರಕ್ಕಿರುವ ಬಹುಮತ ಸಾಬೀತುಪಡಿಸಲು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದೇ 18 ರ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಮಳೆಗಾಲದ ಅಧಿವೇಶನ ಆರಂಭದ ದಿನವೇ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳು, ತಮ್ಮ ಶಾಸಕರು ರಾಜೀನಾಮೆ ನೀಡಿರುವ ವಿಷಯವನ್ನು ಸದನದ ಗಮನಕ್ಕೆ ತಂದು, ಇಂತಹ ಸನ್ನಿವೇಶದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾನೇ ಸ್ವಯಂ ಪ್ರೇರಿತವಾಗಿ ವಿಶ್ವಾಸಮತ ಯಾಚಿಸಲು ನಿರ್ಧರಿಸಿರುವುದಾಗಿ…

ವಿಷ ಮಿಶ್ರಿತ ನೀರು ಸೇವಿಸಿ 11 ವಿದ್ಯಾರ್ಥಿಗಳು ಅಸ್ವಸ್ಥ
ಮೈಸೂರು

ವಿಷ ಮಿಶ್ರಿತ ನೀರು ಸೇವಿಸಿ 11 ವಿದ್ಯಾರ್ಥಿಗಳು ಅಸ್ವಸ್ಥ

July 16, 2019

ಮಂಡ್ಯ, ಜು.15(ನಾಗಯ್ಯ)- ಹನೂರು ತಾಲೂಕು ಸುಳವಾಡಿಯಲ್ಲಿ ಪ್ರಸಾದಕ್ಕೆ ವಿಷ ಮಿಶ್ರಣ ಮಾಡಿ 17 ಜನ ಬಲಿಯಾದ ಘಟನೆಯನ್ನು ಜನ ಮರೆಯುವ ಮುನ್ನವೇ ಶಾಲೆಯೊಂದರ ಕುಡಿಯುವ ನೀರಿನ ಟ್ಯಾಂಕ್‍ಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದ ಪರಿಣಾಮ ಆ ನೀರು ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಅಮಾನವೀಯ ಘಟನೆ ತಾಲೂ ಕಿನ ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದಿದೆ. ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಶಾಲೆಯ ಚಂದನ್, ಸೋಮಶೇಖರ್, ದರ್ಶನ್, ಧನುಷ್, ಶಿವಲಿಂಗ, ಯಶ್ವಂತ್, ಮಯೂರ್ ಗೌಡ,…

1 893 894 895 896 897 1,611
Translate »